ಕರ್ನಾಟಕ

karnataka

ETV Bharat / sitara

ಲೂಸ್​ ಮಾದನ ‘ಒಂಬತ್ತನೇ ದಿಕ್ಕು’.. 8 ಫೋಟೋಗಳೇ ಚಿತ್ರ ಕಥೆ ಹೇಳ್ತವೆ.. - ದಯಾಳ್ ಪದ್ಮನಾಭನ್

‘ಒಂಬತ್ತನೇ ದಿಕ್ಕು’ ಸಿನಿಮಾ ಪ್ರಚಾರದ ವಿಷಯದಲ್ಲಿ ಅವರು 8 ಫೋಟೋಗಳನ್ನು ಬಿಡುಗಡೆ ಮಾಡಿ ಆರಂಭದಿಂದ ಶುಭಂ ಅನ್ನುವವರೆಗೆ ಚಿತ್ರದ ಎಳೆಯನ್ನ ಬಿಟ್ಟುಕೊಟ್ಟಿದ್ದಾರೆ.

ombattane dikku
ಒಂಬತ್ತನೇ ದಿಕ್ಕು

By

Published : Apr 6, 2020, 10:43 AM IST

ದಯಾಳ್ ಪದ್ಮನಾಭನ್ ಏನು ಮಾಡಿದರೂ ಅದಕ್ಕೊಂದು ಅರ್ಥಗರ್ಭಿತ ಹಿನ್ನಲೆ ಇಟ್ಟುಕೊಂಡಿರುತ್ತಾರೆ. ಇದಕ್ಕೆ ಹಲವಾರು ಉದಾಹರಣೆಗಳಿವೆ.

ಒಂಬತ್ತನೇ ದಿಕ್ಕು

ಸದ್ಯಕ್ಕೆ ಅವರ ‘ಒಂಬತ್ತನೇ ದಿಕ್ಕು’ ಸಿನಿಮಾ ಪ್ರಚಾರದ ವಿಷಯದಲ್ಲಿ ಅವರು 8 ಫೋಟೋಗಳನ್ನು ಬಿಡುಗಡೆ ಮಾಡಿ ಆರಂಭದಿಂದ ಶುಭಂ ಅನ್ನುವವರೆಗೆ ಚಿತ್ರದ ಎಳೆಯನ್ನ ಬಿಟ್ಟುಕೊಟ್ಟಿದ್ದಾರೆ.

ಒಂಬತ್ತನೇ ದಿಕ್ಕು

ಆದರೆ, ಈ ‘ಒಂಬತ್ತನೇ ದಿಕ್ಕು’ ಒಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಈ ಫೋಟೋ ಗಮನಿಸಿದರೆ ಲವ್ ಇಂದ ಸಾವಿನವರೆಗೂ ಪ್ರಸ್ತಾಪವಿದೆ. ಇದರ ಮಧ್ಯೆ ಜೀವನದ ಘಟ್ಟಗಳನ್ನು ಸಹ ದಯಾಳ್ ಪದ್ಮನಾಭನ್ ಹೇಳಿದ್ದಾರೆ.

ಒಂಬತ್ತನೇ ದಿಕ್ಕು

ಲೂಸ್ ಮಾದ ಯೋಗೀಶ್ ಮತ್ತು ಅದಿತಿ ಪ್ರಭುದೇವ ಅವರಿಗೆ ಪ್ರೇಮ ನಿವೇದನೆ, ಮದುವೆ, ಮಗು, ಆ ಮಗುವಿನ ಮದುವೆ ಮತ್ತು ಗೋಡೆ ಮೇಲೆ ಫೋಟೋ ಹಾಗೂ ಅದಕ್ಕೊಂದು ಹಾರ ಎಲ್ಲವನ್ನೂ ಹೇಳಿಬಿಡುತ್ತದೆ ಅಂತಾ ಪ್ರೇಕ್ಷಕ ಅಂದುಕೊಂಡರೆ ಅವೆಲ್ಲದರ ನಡುವೆ ಅನೇಕ ವಿಚಾರ ಅಡಗಿದೆ ಎನ್ನುತ್ತಾರೆ ದಯಾಳ್ ಪದ್ಮನಾಭನ್.

ಒಂಬತ್ತನೇ ದಿಕ್ಕು

ಅಭಿಷೇಕ್ ಎಸ್ ಎನ್ ಈ ಫೋಟೋಗಳನ್ನು ಒಂದು ಆರ್ಡರ್‌ನಲ್ಲಿ ಸಂಗ್ರಹಿಸಿ ದಯಾಳ್ ಅವರಿಗೆ ಈ ಲಾಕ್‌ಡೌನ್ ಸಂದರ್ಭದಲ್ಲಿ ಬಳಸಲು ಸಹಾಯ ಆಗಿದ್ದಾರೆ.

ಒಂಬತ್ತನೇ ದಿಕ್ಕು

ಒಂಬತ್ತನೇ ದಿಕ್ಕು ಬೆಳಗ್ಗೆ 7.30 ರಿಂದ ಸಂಜೆ 4.30ರೊಳಗೆ ಜರಗುವ ಕಥೆ ಎಂದು ದಯಾಳ್ ಈ ಹಿಂದೆ ಮುಹೂರ್ತದಲ್ಲಿ ಹೇಳಿಕೊಂಡಿದ್ದರು.

ಒಂಬತ್ತನೇ ದಿಕ್ಕು

ಈ ಚಿತ್ರದಲ್ಲಿ ನಾಯಕ ಲೂಸ್ ಮಾದ ಯೋಗಿ ಟ್ರಾವೆಲ್ ಏಜೆಂಟ್ ಆಗಿ ಪಾತ್ರ ಮಾಡಿದ್ದಾರೆ. ಮಧ್ಯಮದ ಕುಟುಂಬದ ಹುಡುಗಿಯಾಗಿ ಅದಿತಿ ಕಾಣಿಸಿಕೊಂಡಿದ್ದಾರೆ.

ಒಂಬತ್ತನೇ ದಿಕ್ಕು

ಸಂಪತ್‌ಕುಮಾರ್, ಸುಂದರ್‌ ವೀಣಾ, ಶ್ರುತಿ ನಾಯ್ಕ್, ಯತಿರಾಜ್, ಮಧುಸೂಧನ್ ಹಾಗೂ ಇತರರು ಈ ಪಾತ್ರವರ್ಗದಲ್ಲಿದ್ದಾರೆ. ನಿತಿಲನ್ ಕಥೆ ಒದಗಿಸಿದ್ದಾರೆ. ಮಣಿಕಾಂತ್ ಖದ್ರಿ ಸಂಗೀತ, ಪ್ರೀತಿ ಮೋಹನ್ ಸಂಕಲನ, ವಿಕ್ರಮ್ ಮೋರ್ ಸಾಹಸ, ಅವಿನಾಶ್ ಶೆಟ್ಟಿ ನಿರ್ಮಾಣ, ವೆಂಕಟ್‌ದೇವ್, ದಯಾಳ್ ಹಾಗೂ ಅಭಿಷೇಕ್ ಎಸ್ ಎನ್ ಸಂಭಾಷಣೆ ಬರೆದಿದ್ದಾರೆ.

ABOUT THE AUTHOR

...view details