ಕರ್ನಾಟಕ

karnataka

ETV Bharat / sitara

ಶ್ರೀ ಸಿದ್ದಾರೂಢ ಮಠದ ಪರಮ ಭಕ್ತ ಪುನೀತ್.. ಡಾ.ರಾಜ್ ಸಂಪ್ರದಾಯ ಮುಂದುವರೆಸಿದ್ದ ಅಪ್ಪು.. - punith rajkumar visited siddaruda mata

ರಾಜ್​ಕುಮಾರ್​ ಅವರು ತನ್ನ ಅಂತ್ಯದವರೆಗೂ ಮಠಕ್ಕೆ ಭೇಟಿ ನೀಡಿ ಹೋಗುವ ಸಂಪ್ರದಾಯ ಬೆಳೆಸಿಕೊಂಡಿದ್ದರು. ಇದನ್ನು ಮುಂದುವರೆಸಿಕೊಂಡು ಬಂದಿದ್ದ ಪುನೀತ್ ರಾಜ್​ಕುಮಾರ್​ ಅವರು, ಹುಬ್ಬಳ್ಳಿಗೆ ಬಂದಾಗ ಶ್ರೀಮಠಕ್ಕೆ ಭೇಟಿ ನೀಡಿ ಉಭಯ ಶ್ರೀಗಳ‌ ಗದ್ದುಗೆ ದರ್ಶನ ಪಡೆದುಕೊಂಡು ಹೋಗುತ್ತಿದ್ದರು..

punith rajkumar
ಪುನೀತ್ ರಾಜ್​ಕುಮಾರ್ ಕುಟುಂಬ

By

Published : Oct 29, 2021, 5:00 PM IST

ಹುಬ್ಬಳ್ಳಿ :ಕನ್ನಡ ಚಿತ್ರರಂಗದ 'ಅಪ್ಪು' ಖ್ಯಾತಿಯ ನಟ ಪುನೀತ್​ ರಾಜ್​ಕುಮಾರ್ ಅವರು ನಗರಕ್ಕೆ ಭೇಟಿ ನೀಡಿದಾಗಲೆಲ್ಲ ಸಿದ್ಧಾರೂಢ ಶ್ರೀಗಳ ಗದ್ದುಗೆ ದರ್ಶನ ಪಡೆಯುತ್ತಿದ್ದರು. ಹೀಗಾಗಿ, ದೊಡ್ಡಮನೆ ಹುಡುಗ ಹುಬ್ಬಳ್ಳಿ ಜನರೊಂದಿಗೆ ಅವಿನಾಭಾವ ಸಂಬಂಧ ಬೆಳೆಸಿಕೊಂಡಿದ್ದರು.

ಯಾವುದೇ ಸಿನಿಮಾದ ಪ್ರಮೊಷನ್​ಗೆ ಇರಲಿ, ಖಾಸಗಿ ಕಾರ್ಯಕ್ರಮಗಳಿಗೆ ಹಾಗೂ ವೈಯಕ್ತಿಕ ಕೆಲಸಕ್ಕೆ ಹುಬ್ಬಳ್ಳಿಗೆ ಆಗಮಿಸಿದರೂ ಸಿದ್ಧಾರೂಢರ ದರ್ಶನ ಪಡೆಯದೇ ಪುನೀತ್ ವಾಪಸ್​ ತೆರಳುತ್ತಿರಲಿಲ್ಲ.

ಸಿದ್ದಾರೂಢ ಮಠಕ್ಕೆ ಪುನೀತ್ ಭೇಟಿಯ ನೆನಪು..

ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತ ಸಂಬಂಧವಯ್ಯ? ಎನ್ನುವಂತೆ ಬೆಂಗಳೂರಿನಲ್ಲೇ ಇದ್ದರೂ ರಾಜ ಕುಟುಂಬ ಹುಬ್ಬಳ್ಳಿಯ ಸಿದ್ಧಾರೂಢರ ಪರಮ ಭಕ್ತರು. ಡಾ. ರಾಜ್​ಕುಮಾರ್​ ಅವರು ರಂಗಭೂಮಿ ಕಲಾವಿದರಾಗಿದ್ದ ಸಂದರ್ಭದಲ್ಲಿ ಕೂಡ ಹುಬ್ಬಳ್ಳಿಯ ಜೊತೆಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದರು.

ಚಿಕ್ಕ ವಯಸ್ಸಿನಲ್ಲಿಯೇ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ್ದರು. ಅವರು ಎತ್ತರಕ್ಕೆ ಬೆಳೆದರೂ ಕೂಡ ತಮ್ಮ ತಂದೆಯವರಾದ ರಾಜ್​ ಕುಮಾರ್​ ಅವರು ಹಾಕಿದ ಹಾದಿಯಲ್ಲಿಯೇ ಕೊನೆಯವರೆಗೂ ನಡೆದು ಬಂದಿದ್ದಾರೆ. ರಾಜ್​ಕುಮಾರ್​ ಅವರು ನಾಟಕಗಳಲ್ಲಿ ನಟಿಸುವ ಸಂದರ್ಭದಲ್ಲಿ ಸಿದ್ದಾರೂಢ ಮಠದಲ್ಲಿ ಆಶ್ರಯ ‌ಪಡೆದಿದ್ದರು.

ಆಗಿನಿಂದಲೂ ರಾಜ್​ಕುಮಾರ್​ ಅವರು ತನ್ನ ಅಂತ್ಯದವರೆಗೂ ಮಠಕ್ಕೆ ಭೇಟಿ ನೀಡಿ ಹೋಗುವ ಸಂಪ್ರದಾಯ ಬೆಳೆಸಿಕೊಂಡಿದ್ದರು. ಇದನ್ನು ಮುಂದುವರೆಸಿಕೊಂಡು ಬಂದಿದ್ದ ಪುನೀತ್ ರಾಜ್​ಕುಮಾರ್​ ಅವರು, ಹುಬ್ಬಳ್ಳಿಗೆ ಬಂದಾಗ ಶ್ರೀಮಠಕ್ಕೆ ಭೇಟಿ ನೀಡಿ ಉಭಯ ಶ್ರೀಗಳ‌ ಗದ್ದುಗೆ ದರ್ಶನ ಪಡೆದುಕೊಂಡು ಹೋಗುತ್ತಿದ್ದರು.

ಹುಬ್ಬಳ್ಳಿಯಲ್ಲಿ ಪುನೀತ್ ರಾಜ್​ಕುಮಾರ್​ಗೆ ಶ್ರದ್ದಾಂಜಲಿ ಅರ್ಪಿಸಿದ ಅಭಿಮಾನಿಗಳು

ದೊಡ್ಮನೆ ಹುಡುಗ ಚಿತ್ರೀಕರಣ ಸಂದರ್ಭದಲ್ಲಿ ಹುಬ್ಬಳ್ಳಿಯಲ್ಲಿ ಉಳಿದಾಗ ನಿತ್ಯ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಅದರಂತೆ ಯುವರತ್ನ ಚಿತ್ರದ ಪ್ರಮೋಶನ್‌ಗಾಗಿ ಕೆಲ ತಿಂಗಳ ಹಿಂದೆ ಹುಬ್ಬಳ್ಳಿಗೆ ಆಗಮಿಸಿದ್ದ ಅಪ್ಪು. ಗೋಕುಲ ರಸ್ತೆಯಲ್ಲಿನ ಅರ್ಬನ್ ಓಯಾಸಿಸ್ ಮಾಲ್ ಎದುರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ ಅವರ ಕೊನೆಯ ಹುಬ್ಬಳ್ಳಿ ಭೇಟಿಯಾಗಿತ್ತು.

ಓದಿ:ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಸ್ಟಾರ್​... ಅಪ್ಪನ ಹಾದಿ ಹಿಡಿದ ಅಪ್ಪು..

ABOUT THE AUTHOR

...view details