ಕರ್ನಾಟಕ

karnataka

ETV Bharat / sitara

ಸುಶಾಂತ್​ ಸಿಂಗ್​​ ಸಾವಿಗೆ ಬಾಲಿವುಡ್​​ ಮಾಫಿಯಾ ಕಾರಣ : ಕಂಗನಾ - ಸುಶಾಂತ್​ ಸಿಂಗ್​​ ಹುಟ್ಟುಹಬ್ಬ

ಬಾಲಿವುಡ್​​ ಬೋಲ್ಡ್​​ ನಟಿ ಕಂಗನಾ ರಣಾವತ್​​​ ಚರ್ಚೆಗೆ ಕಾರಣವಾಗುವಂತಹ ಅಂಶಗಳನ್ನು ಹೇಳಿದ್ದಾರೆ. ಸುಶಾಂತ್​ ಸಿಂಗ್​ ಸಾವಿಗೆ ಪರೋಕ್ಷವಾಗಿ ಬಾಲಿವುಡ್​​​ ಕಾರಣ ಎಂದು ಹೇಳಿದ್ದಾರೆ.

ಸುಶಾಂತ್​ ಸಿಂಗ್​​ ಸಾವಿಗೆ ಬಾಲಿವುಡ್​​ ಮಾಫಿಯಾ ಕಾರಣ : ಕಂಗನಾ
ಸುಶಾಂತ್​ ಸಿಂಗ್​​ ಸಾವಿಗೆ ಬಾಲಿವುಡ್​​ ಮಾಫಿಯಾ ಕಾರಣ : ಕಂಗನಾ

By

Published : Jan 21, 2021, 8:57 PM IST

ಇಂದು ಬಾಲಿವುಡ್ ನಟ ಸುಶಾಂತ್ ಸಿಂಗ್ ಹುಟ್ಟುಹಬ್ಬ. ದೇಶಾದ್ಯಂತ ಅಭಿಮಾನಿಗಳು ಹಾಗೂ ತಾರೆಯರು ಸುಶಾಂತ್​ ಸಿಂಗ್​ರನ್ನು ನೆನೆದು ಸ್ಮರಿಸುತ್ತಿದ್ದಾರೆ. ಇದೇ ಹಿನ್ನೆಲೆಯಲ್ಲಿ ಬಾಲಿವುಡ್​​ ಬೋಲ್ಡ್​​ ನಟಿ ಕಂಗನಾ ರಣಾವತ್​​​ ಚರ್ಚೆಗೆ ಕಾರಣವಾಗುವಂತಹ ಒಂದು ಅಂಶಗಳನ್ನು ಹೇಳಿದ್ದಾರೆ. ಸುಶಾಂತ್​ ಸಿಂಗ್​ ಸಾವಿಗೆ ಪರೋಕ್ಷವಾಗಿ ಬಾಲಿವುಡ್​​​ ಕಾರಣ ಎಂದು ಹೇಳಿದ್ದಾರೆ.

ಹೌದು.. ಟ್ವೀಟ್​​ ಮಾಡಿರುವ ನಟಿ, ಮುಂಬೈನ ಚಿತ್ರರಂಗ ಸುಶಾಂತ್​​ರನ್ನು ಬ್ಯಾನ್ ಮಾಡುವುದಾಗಿ ಬೆದರಿಕೆ ಹಾಕಿದ್ದು,ಈ ಮೂಲಕ ಪರೋಕ್ಷವಾಗಿ ಅವರ ಸಾವಿಗೆ ಕಾರಣವಾಗಿದೆ ಎಂದಿದ್ದಾರೆ.

ಟ್ವೀಟ್​​​ನಲ್ಲಿ ಭಾವನಾತ್ಮಕವಾಗಿ ಬರೆದಿರುವ ಕಂಗನಾ, "ಪ್ರೀತಿಯ ಸುಶಾಂತ್... ಸಿನಿಮಾ ಮಾಫಿಯಾ ನಿನಗೆ ನಿಷೇಧ ಹೇರಿತು, ಹಿಂಸೆ ಮತ್ತು ಕಿರುಕುಳ ನೀಡಿತು. ಇದಕ್ಕೆ ನೀವು ಸಾಮಾಜಿಕ ಮಾಧ್ಯಮಗಳಲ್ಲಿ ಸಹಾಯವನ್ನೂ ಕೇಳಿದ್ರಿ. ಆದ್ರೆ ಆ ವೇಳೆ ನಾನು ನಿಮ್ಮ ನೇರವಿಗೆ ಬರಲು ಸಾಧ್ಯವಾಗಲಿಲ್ಲ ಎಂದು ವಿಷಾದಿಸುತ್ತೇನೆ." ಎಂದಿದ್ದಾರೆ.

ಮತ್ತೊಂದು ಮಾತು ಹೇಳಿರುವ ನಟಿ, "ನೀವು ಬಹಳ ಶಕ್ತಿಶಾಲಿ, ಈ ಮಾಫಿಯಾದ ಕಿರುಕುಳವನ್ನು ಮೆಟ್ಟಿ ನೀವು ನಿಲ್ಲುತ್ತೀರಿ ಅಂದುಕೊಂಡಿದ್ದೆ. ಅದು ಸುಳ್ಳಾಯಿತು. ಹುಟ್ಟುಹಬ್ಬದ ಶುಭಾಶಯಗಳು ಪ್ರೀತಿಯ ಸುಶಾಂತ್ ಸಿಂಗ್." ಎಂದು ಬರೆದುಕೊಂಡಿದ್ದಾರೆ.

ಹಲವು ಬಾರಿ ಚಿತ್ರರಂಗ ತಮ್ಮನ್ನು ದೂರ ಸರಿಸುತ್ತಿದೆ ಎಂಬುದರ ಬಗ್ಗೆ ಸುಶಾಂತ್​ ಹೇಳಿಕೊಂಡಿದ್ದು, ಅಭಿಮಾನಿಗಳು ತಮ್ಮ ಸಿನಿಮಾಕ್ಕೆ ಯಶಸ್ಸು ತಂದುಕೊಡಬೇಕೆಂದು ಕೇಳಿದ್ದನ್ನು ನಾನು ಎಂದೂ ಮರೆಯುವುದಿಲ್ಲ ಅಂತ ಕಂಗನಾ ಹೇಳಿದ್ದಾರೆ.

ABOUT THE AUTHOR

...view details