ಕರ್ನಾಟಕ

karnataka

ETV Bharat / sitara

ಅಭಿಮಾನಿ ಬಳಗ ಇಲ್ಲದೆ ಮಂಡ್ಯದ ಗಂಡು ಅಂಬಿ ಹುಟ್ಟುಹಬ್ಬ ಆಚರಣೆ - no entry to Fans

ಇಂದು ರೆಬೆಲ್ ಸ್ಟಾರ್ ಅಂಬರೀಶ್ ಅವರ 68ನೇ ಹುಟ್ಟುಹಬ್ಬವಾಗಿದ್ದು, ಕಂಠೀರವ ಸ್ಟುಡಿಯೋದಲ್ಲಿರುವ ಅಂಬಿ ಸಮಾಧಿಗೆ ಕುಟುಂಬಸ್ಥರು ಪೂಜೆ ಸಲ್ಲಿಸಲಿದ್ದಾರೆ. ಆದರೆ ಈ ಬಾರಿ ಅಂಬಿ ಹುಟ್ಟುಹಬ್ಬವನ್ನು ಅಭಿಮಾನಿಗಳಿಲ್ಲದೆ ಆಚರಣೆ ಮಾಡಲಾಗುತ್ತಿದೆ.

ಅಭಿಮಾನಿ ಬಳಗ ಇಲ್ಲದೆ ಮಂಡ್ಯದ ಗಂಡು ಅಂಬಿ ಹುಟ್ಟುಹಬ್ಬ ಆಚರಣೆ
ಅಭಿಮಾನಿ ಬಳಗ ಇಲ್ಲದೆ ಮಂಡ್ಯದ ಗಂಡು ಅಂಬಿ ಹುಟ್ಟುಹಬ್ಬ ಆಚರಣೆ

By

Published : May 29, 2020, 9:57 AM IST

ಇಂದು ರೆಬೆಲ್ ಸ್ಟಾರ್ ಅಂಬರೀಶ್ ಅವರ 68ನೇ ಹುಟ್ಟುಹಬ್ಬ. ಮಂಡ್ಯದ ಗಂಡು ಅಂಬಿ ನಮ್ಮನ್ನಗಲಿ 2 ವರ್ಷಗಳು ಕಳೆದಿವೆ. ಆದರೆ ಅವರ ನೆನಪು ಮಾತ್ರ ಅಭಿಮಾನಿಗಳ ಮನದಲ್ಲಿ ಇನ್ನೂ ಮಾಸಿಲ್ಲ. ಕೊರೊನಾ ಮಹಾಮಾರಿ ಹಿನ್ನೆಲೆ ಈ ಬಾರಿ ಅಂಬಿ ಹುಟ್ಟುಹಬ್ಬವನ್ನು ಅಭಿಮಾನಿಗಳಿಲ್ಲದೆ ಆಚರಣೆ ಮಾಡಲಾಗುತ್ತಿದೆ.

ಅಭಿಮಾನಿ ಬಳಗ ಇಲ್ಲದೆ ಮಂಡ್ಯದ ಗಂಡು ಅಂಬಿ ಹುಟ್ಟುಹಬ್ಬ ಆಚರಣೆ

ಕೊರೊನಾ ಭೀತಿಯಿಂದ ಅಂಬಿ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಸರ್ಕಾರದ ನಿಯಮದಂತೆ ಅಂಬಿ ಸಮಾಧಿ ಬಳಿಗೆ ಅಭಿಮಾನಿಗಳಿಗೆ ನಿರ್ಬಂಧ ಹೇರಲಾಗಿದೆ. ಅಷ್ಟೇ ಅಲ್ಲದೆ ಕಂಠೀರವ ಸ್ಟುಡಿಯೋದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ.

ರೆಬೆಲ್ ಸ್ಟಾರ್ ಅಂಬಿ ಹುಟ್ಟುಹಬ್ಬದ ಹಿನ್ನೆಲೆ ಕುಟುಂಬಸ್ಥರು ಸಮಾಧಿ ಬಳಿ ಬಂದು ಪೂಜೆ ಸಲ್ಲಿಸಲಿದ್ದಾರೆ. ಅಭಿಮಾನಿಗಳು ಸಮಾಧಿ ಬಳಿ ಬಾರದಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಅಂಬಿ ಅಭಿಮಾನಿಗಳಿಗೆ ಜೂನಿಯರ್ ಜಲೀಲಾ ಅಭಿಷೇಕ್ ಸಿಹಿ ಸುದ್ದಿ ನೀಡಿದ್ದು, ಅಭಿಷೇಕ್​ ಅಭಿನಯದ ಎರಡನೇ ಚಿತ್ರ "ಬ್ಯಾಡ್ ಮ್ಯಾನರ್ಸ್" ಟೈಟಲ್ ಅನೌನ್ಸ್ ಮಾಡಿದ್ದಾರೆ. ಅಲ್ಲದೆ ರೆಬೆಲ್ ಸ್ಟಾರ್ ಹುಟ್ಟುಹಬ್ಬದ ಸ್ಪೆಷಲ್ ಆಗಿ "ಬ್ಯಾಡ್ ಮ್ಯಾನರ್ಸ್" ಚಿತ್ರದ ಫಸ್ಟ್‌ ಲುಕ್​ಅನ್ನು ಚಿತ್ರತಂಡ ಇಂದು ಸಂಜೆ ಬಿಡುಗಡೆ ಮಾಡಲಿದೆ.

ABOUT THE AUTHOR

...view details