ರೆಬಲ್ ಸ್ಟಾರ್ ಅಂಬರೀಶ್ ನಿಧನರಾಗಿ ಇಂದಿಗೆ 11 ತಿಂಗಳು ಪೂರ್ಣಗೊಂಡಿದೆ. ಪ್ರತಿ ತಿಂಗಳಿನಂತೆ ಈ ಬಾರಿ ಕೂಡಾ ಸುಮಲತಾ ಅಂಬರೀಶ್ ಹಾಗೂ ಅಭಿಷೇಕ್ ಇಬ್ಬರೂ ಕುಟುಂಬಸಹಿತರಾಗಿ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಅವರ 11ನೇ ತಿಂಗಳ ಪುಣ್ಯತಿಥಿ ಆಚರಿಸಿದ್ದಾರೆ.
ಅಂಬರೀಶ್ರ 11ನೇ ತಿಂಗಳ ಪುಣ್ಯತಿಥಿ ಆಚರಿಸಿದ ಕುಟುಂಬ - ರೆಬಲ್ ಸ್ಟಾರ್ ಅಂಬರೀಶ್ 11ನೇ ತಿಂಗಳ ಪುಣ್ಯತಿಥಿ ಆಚರಣೆ
ಅಂಬರೀಶ್ ಕುಟುಂಬದವರು ಸಮಾಧಿಗೆ ಹೂವಿನ ಅಲಂಕಾರ ಮಾಡಿ ಅಂಬಿಗೆ ಇಷ್ಟವಾದ ತಿಂಡಿಗಳನ್ನು ಇಟ್ಟು ಪೂಜೆ ಸಲ್ಲಿಸಿದರು. ಪೂಜೆ ಬಳಿಕ ಅಭಿಷೇಕ್ ಹಾಗೂ ಸುಮಲತಾ, ಅಭಿಮಾನಿಗಳಿಗೆ ಅನ್ನದಾನ ಮಾಡಿದರು.
ಅಂಬಿ ಕುಟುಂಬದೊಂದಿಗೆ ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ ಕೂಡಾ ಹಾಜರಿದ್ದರು. ಅಂಬಿ ಕುಟುಂಬದವರು ಸಮಾಧಿಗೆ ಹೂವಿನ ಅಲಂಕಾರ ಮಾಡಿ ಅಂಬಿ ನೆಚ್ಚಿನ ತಿಂಡಿಗಳನ್ನು ಇಟ್ಟು ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದರು. ಪೂಜೆ ಬಳಿಕ ಅಭಿಷೇಕ್ ಹಾಗೂ ಸುಮಲತಾ ಅಭಿಮಾನಿಗಳಿಗೆ ಅನ್ನದಾನ ಮಾಡಿದರು. ನಂತರ ಮಾಧ್ಯಮದೊಂದಿಗೆ ಮಾತನಾಡಿದ ಸುಮಲತಾ ಅಂಬರೀಶ್, ಅಂಬರೀಶ್ ನಮ್ಮನ್ನಗಲಿ ಇಷ್ಟು ಬೇಗ 11 ತಿಂಗಳಾಯಿತು ಎಂದರೆ ನಂಬಲಾಗುತ್ತಿಲ್ಲ. ಅವರು ಇಲ್ಲೇ ಎಲ್ಲೋ ನಮ್ಮೊಂದಿಗೆ ಇದ್ದಾರೆ ಎನ್ನಿಸುತ್ತಿದೆ. ಅವರ ಮಾತುಗಳು, ಅವರು ಮಾಡಿದ ಕೆಲಸಗಳನ್ನು ಎಲ್ಲಿ ಹೋದರೂ ಅಭಿಮಾನಿಗಳು ನೆನಪಿಸುತ್ತಿರುತ್ತಾರೆ. ಅದರಿಂದ ನನಗೆ ಬಹಳ ಹೆಮ್ಮೆಯಾಗುತ್ತದೆ ಎಂದು ಸುಮಲತಾ ಹೇಳಿದರು.