ಕರ್ನಾಟಕ

karnataka

ETV Bharat / sitara

ಸಾಹೋ ಸಿನಿಮಾ ಫಿಟ್ನಸ್​ಗಾಗಿ ಪ್ರಭಾಸ್​ ಇದನ್ನು ಮಾತ್ರ ತಿಂತಿದ್ರಂತೆ.. ರೆಬೆಲ್​ಗೆ ಕನ್ನಡ ಸಿನಿಮಾ ಅಂದ್ರೆ ಇಷ್ಟ ಅಂತೆ - Fitness

ಟಾಲಿವುಡ್​ ನಟ ರೆಬೆಲ್​ ಪ್ರಭಾಸ್ ಬೆಂಗಳೂರಿಗೆ ಆಗಮಿಸಿದ್ದು, ಈ ವೇಳೆ ತಮ್ಮ ಕಟ್ಟು ಮಸ್ತಾದ ದೇಹದ ಫಿಟ್​ನೆಸ್​​ ಬಗ್ಗೆ ಮಾತನಾಡಿದ್ದಾರೆ.

ರೆಬೆಲ್​ ಫಿಟ್​ನೆಸ್​ ಮೈಂಟೆನೆನ್ಸ್​ ಹೀಗಿದೆ

By

Published : Aug 23, 2019, 11:31 PM IST

ಟಾಲಿವುಡ್​ ನಟ ರೆಬೆಲ್​ ಪ್ರಭಾಸ್ ಅಭಿನಯಿಸಿರುವ ಸಾಹೋ ಚಿತ್ರ ತನ್ನ ಹಾಡುಗಳು ಹಾಗು ಟ್ರೈಲರ್​ನಿಂದ‌‌ ಸಂಚಲನ ಸೃಷ್ಟಿಸಿದೆ. ಸದ್ಯ ಸಾಹೋ ಚಿತ್ರದ ಪ್ರಚಾರ ಕಾರ್ಯದಲ್ಲಿರುವ ಪ್ರಭಾಸ್​ ಬೆಂಗಳೂರಿಗೆ ಆಗಮಿಸಿದ್ದು, ಈ ವೇಳೆ ತಮ್ಮ ಕಟ್ಟು ಮಸ್ತಾದ ದೇಹದ ಫಿಟ್​ನೆಸ್​​ ಬಗ್ಗೆ ಮಾತನಾಡಿದ್ದಾರೆ.

ರೆಬೆಲ್​ ಫಿಟ್​ನೆಸ್​ ಮೈಂಟೆನೆನ್ಸ್​ ಹೀಗಿದೆ

ಬಾಹುಬಲಿ ಸಿನಿಮಾದಲ್ಲಿ ಕುದುರೆ ಸವಾರಿ, ಆನೆ ಸವಾರಿ ಮಾಡಬೇಕಾಗಿತ್ತು. ಆ ವೇಳೆ ಜಿಮ್​ನಲ್ಲಿ ವರ್ಕೌಟ್ ಮಾಡಿದ್ದೆ. ಆದ್ರೆ ಸಾಹೋ ಸಿನಿಮಾಕ್ಕೆ ಪ್ರಭಾಸ್ ಮಾಂಸಾಹಾರ ತ್ಯಜಿಸಿ, ಬರೀ ಹಣ್ಣು ತರಕಾರಿಗಳನ್ನ ತಿನ್ನುವ ಮೂಲಕ ನನ್ನ ಬಾಡಿ ಫಿಟ್ನೆಸ್ ಮೆಟೈಂನ್ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಇನ್ನು ಕನ್ನಡ ಚಿತ್ರಗಳ ಬಗ್ಗೆ ಮಾತನಾಡಿದ ಅವರು, ನಾನು ಈಗಾಗಲೇ ಕೆಜಿಎಫ್​ ಸಿನಿಮಾ ವೀಕ್ಷಿಸಿದ್ದು, ಕನ್ನಡ ಚಿತ್ರಗಳನ್ನೂ ಆಗಾಗ ನಾನು ನೋಡುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ಮಹಾಭಾರತ ಸಿನಿಮಾ ನಿರ್ಮಾಣವಾದರೆ ನೀವು ಯಾವ ಪಾತ್ರ ನಿರ್ವಹಿಸುತ್ತೀರಿ ಎಂಬ ಮಾಧ್ಯಮದವರ ಪ್ರಶ್ನೆಗೆ, ಕರ್ಣ ಅಥವಾ ಅರ್ಜುನನ ಪಾತ್ರಗಳಿಗೆ ಬಣ್ಣ ಹಚ್ಚುತ್ತೇನೆ ಎಂದಿದ್ದಾರೆ.

ABOUT THE AUTHOR

...view details