ಉಪೇಂದ್ರ ಅಭಿನಯದ 'ಕಬ್ಜ' ಚಿತ್ರೀಕರಣ ಆರಂಭವಾಗಿ ಇಂದಿಗೆ ಸರಿಯಾಗಿ ಒಂದು ವರ್ಷ. ಕಳೆದ ವರ್ಷ ಇದೇ ದಿನದಂದು ಚಿತ್ರದ ಮುಹೂರ್ತವಾಗಿತ್ತು. ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ್ದರು. ಡಿಸೆಂಬರ್ ವೇಳೆಗೆ ಸಿನಿಮಾ ಬಿಡುಗಡೆ ಮಾಡಬೇಕೆಂದು ನಿರ್ದೇಶಕ ಚಂದ್ರು ಪ್ಲ್ಯಾನ್ ಮಾಡಿದ್ದರು. ಆದರೆ ಕೊರೊನಾ ಕಾರಣದಿಂದ ಎಲ್ಲಾ ತಲೆಕೆಳಗಾಯ್ತು.
'ಕಬ್ಜ' ಚಿತ್ರೀಕರಣ ಮರು ಆರಂಭ ತಡವಾಗುತ್ತಿರುವುದು ಇದೇ ಕಾರಣಕ್ಕೆ - Kabza film getting late because of corona
'ಕಬ್ಜ' , ಬಿಗ್ ಬಜೆಟ್ ಚಿತ್ರವಾಗಿದ್ದು ಸಿನಿಮಾ ಚಿತ್ರೀಕರಣದಲ್ಲಿ ಪ್ರತಿದಿನ ಕನಿಷ್ಠ ಎಂದರೂ ನೂರು ಮಂದಿ ಇರಲಿದ್ದಾರಂತೆ. ಒಂದು ವೇಳೆ ಚಿತ್ರೀಕರಣ ಆರಂಭಿಸಿದರೆ ಕೊರೊನಾ ಹರಡುವ ಸಾಧ್ಯತೆ ಇರುವುದರಿಂದ ಚಿತ್ರೀಕರಣವನ್ನು ಮತ್ತೆ ಆರಂಭಿಸಲು ಆರ್. ಚಂದ್ರು ಮುಂದಿನ ವರ್ಷ ಜನವರಿಗೆ ದಿನಾಂಕ ನಿಗದಿ ಮಾಡಿದ್ದಾರೆ.
ಈ ಡಿಸೆಂಬರ್ ಅಥವಾ ಮುಂದಿನ ವರ್ಷದ ಸಂಕ್ರಾಂತಿಗೆ 'ಕಬ್ಜ' ಬಿಡುಗಡೆಯಾಗುವುದು ದೂರದ ಮಾತು. ಏಕೆಂದರೆ ಸ್ಥಗಿತಗೊಂಡಿದ್ದ ಚಿತ್ರೀಕರಣ ಮತ್ತೆ ಪ್ರಾರಂಭವಾಗುವುದೇ ಜನವರಿಯಿಂದ ಎಂದು ಹೇಳಲಾಗುತ್ತಿದೆ. ಈಗಾಗಲೇ ಬಹಳಷ್ಟು ಸಿನಿಮಾಗಳ ಚಿತ್ರೀಕರಣ ಆರಂಭವಾಗಿದ್ದು ಈ ಸಿನಿಮಾ ಇನ್ನೂ ತಡವಾಗುತ್ತಿರುವುದಕ್ಕೆ ಕಾರಣ ಇದೆ. ಇದೊಂದು ಬಿಗ್ ಬಜೆಟ್ ಚಿತ್ರವಾಗಿದ್ದು ಪ್ರತಿದಿನ ಸೆಟ್‍ನಲ್ಲಿ ಕಡಿಮೆ ಎಂದರೂ ನೂರು ಜನ ಇರುತ್ತಾರಂತೆ. ಹೀಗಿರುವಾಗ ಕೊರೊನಾ ಸೋಂಕು ಬೇಗ ಹರಡುವ ಸಾಧ್ಯತೆ ಇದೆ. ಹಾಗಾಗಿ ಮುಂದಿನ ಒಂದು ತಿಂಗಳ ಕಾಲ ಸೆಟ್‍ಗಳನ್ನು ಸಿದ್ಧಪಡಿಸಿ, ಆ ನಂತರ ಜನವರಿಯಿಂದ ಚಿತ್ರೀಕರಣ ಮಾಡುವುದು ಚಿತ್ರತಂಡದ ಐಡಿಯಾ ಎನ್ನಲಾಗಿದೆ.
'ಕಬ್ಜ' ಚಿತ್ರಕ್ಕಾಗಿ ಉಪೇಂದ್ರ ಬೇರೆ ಯಾವ ಸಿನಿಮಾಗಳನ್ನು ಕೂಡಾ ಒಪ್ಪಿಕೊಂಡಿಲ್ಲ ಎನ್ನಲಾಗಿದೆ. 'ಕಬ್ಜ' ಚಿತ್ರಕ್ಕೆ ಸಾಕಷ್ಟು ಸಮಯ ಮತ್ತು ಶ್ರಮ ಅಗತ್ಯವಿರುವುದರಿಂದ ಮೊದಲಿಗೆ ಆ ಸಿನಿಮಾ ಚಿತ್ರೀಕರಣ ಮುಗಿಸಿ ನಂತರ ಇತರ ಸಿನಿಮಾಗಳನ್ನು ಒಪ್ಪಿಕೊಳ್ಳುವುದಾಗಿ ಉಪೇಂದ್ರ ಹೇಳಿದ್ದಾರೆ.