ಕರ್ನಾಟಕ

karnataka

ETV Bharat / sitara

ಏಳು ವರ್ಷಗಳ ಬಳಿಕ ಮತ್ತೆ ಡೈರೆಕ್ಷನ್ ಕ್ಯಾಪ್ ತೊಡೋದಿಕ್ಕೆ ಸಜ್ಜಾದ ರಿಯಲ್ ಸ್ಟಾರ್! - ನಿರ್ದೇಶಕ ಉಪೇಂದ್ರ ಹೊಸ ಸಿನೆಮಾ ನಿರ್ದೇಶನ

ಈ ಪೋಸ್ಟ್ ನೋಡಿ ಉಪ್ಪಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಯಾಕಂದ್ರೆ, ಕಳೆದ ವಾರ ಚಿತ್ರದ ಕತೆಗಾಗಿ ಚಿಕ್ಕಮಗಳೂರಿಗೆ ಹೋಗಿದ್ದ ಉಪ್ಪಿ ಸ್ಕ್ರಿಪ್ಟ್ ಫೈನಲ್ ಮಾಡಿದ್ದಾರೆ. ಅಲ್ಲಿಂದ ಬೆಂಗಳೂರಿಗೆ ಬರ್ತಿದಂತೆ ಉಪ್ಪಿ ಈಗ ಆಡಿಶನ್ ಕಾಲ್ ಕೊಟ್ಟಿದ್ದು, ಶೀರ್ಷಿಕೆ ಈ ಚಿತ್ರವನ್ನು ಟೇಕಾಫ್​​ ಮಾಡುವ ಸೂಚನೆ ಕೊಟ್ಟಿದ್ದಾರೆ. ಈ ಚಿತ್ರವನ್ನು ಉಪ್ಪಿ ಅವರ ಬ್ಯಾನರ್‌ನಲ್ಲೇ ನಿರ್ಮಾಣವಾಗ್ತಿದೆ. ಉಪೇಂದ್ರ ಬರ್ತ್‌ಡೇ ವೇಳೆಗೆ ಈ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ..

real-star-upendra
ನಟ ಉಪೇಂದ್ರ

By

Published : Feb 8, 2022, 7:38 PM IST

ಕನ್ನಡ ಚಿತ್ರರಂಗದಲ್ಲಿ ಬುದ್ದಿವಂತ ನಿರ್ದೇಶಕ ಕಮ್ ನಟ ಅಂತಾ ಕರೆಯಿಸಿಕೊಂಡಿರುವ ನಟ ರಿಯಲ್ ಸ್ಟಾರ್ ಉಪೇಂದ್ರ ತರ್ಲೆ ನನ್ಮಗ, ಶ್, ಓಂ, ಎ, ಉಪೇಂದ್ರ, ಸೂಪರ್, ಉಪ್ಪಿ 2 ರೀತಿಯ ಸೂಪರ್ ಹಿಟ್ ಸಿನಿಮಾಗಳನ್ನ ಕೊಟ್ಟಿದ್ದಾರೆ. ಸದ್ಯ ನಟನೆ ಜೊತೆಗೆ ಪ್ರಜಾಕೀಯದಲ್ಲಿ ಬ್ಯುಸಿಯಾಗಿರೋ ರಿಯಲ್ ಸ್ಟಾರ್ ಅಭಿಮಾನಿಗಳಿಗೆ ಗುಡ್ ನ್ಯೂಸ್​ವೊಂದನ್ನು ಕೊಟ್ಟಿದ್ದಾರೆ.

ಹೋಂ ಮಿನಿಸ್ಟರ್ ಹಾಗೂ ಕಬ್ಜ ಸಿನಿಮಾದ ಚಿತ್ರೀಕರಣದಲ್ಲಿರೋ ಉಪೇಂದ್ರ ಮತ್ತೆ ಡೈರೆಕ್ಷನ್ ಕ್ಯಾಪ್ ತೊಡಲು ರೆಡಿಯಾಗಿದ್ದಾರೆ. ಕಳೆದ ವರ್ಷ ತಮ್ಮ ಹುಟ್ಟುಹಬ್ಬಕ್ಕೆ ಡೈರೆಕ್ಷನ್ ಸಿನಿಮಾ ಅನೌನ್ಸ್​ ಮಾಡ್ತಾರೆ ಅಂತಾ ಹೇಳಲಾಗಿತ್ತು.

ನಾಮದ ಸಿಂಬಲ್ ಟೈಟಲ್ ಬಿಟ್ಟು ಫ್ಯಾನ್ಸ್​ಗಳ ತಲೆಗೆ ಹುಳ ಬಿಟ್ಟಿದ್ರು. ಇದಾದ ನಂತರ ಉಪ್ಪಿ ಚಿತ್ರದ ಕತೆ ಬರೆಯೋ ಕಡೆ ಗಮನ ಹರಿಸಿದ್ರು. ಆದ್ರೆ, ಈಗ ಉಪ್ಪಿ ನಿರ್ದೇಶನದ ಸಿನಿಮಾಗೆ ಕತೆ ಕಂಪ್ಲೀಟ್​ ಮಾಡಿದ್ದು, ಕತೆಗೆ ಹೊಂದುವಂತಹ ಪ್ರತಿಭೆಗಳ ತಲಾಶ್​ಗೆ ರೆಡಿಯಾಗಿದ್ದಾರೆ.

ಅಲ್ಲದೆ, ಉಪ್ಪಿ ನಿರ್ದೇಶನದ ಚಿತ್ರದಲ್ಲಿ ನಟಿಸಲು ನಟ-ನಟಿಯನ್ನು ಆಡಿಶನ್ ಮಾಡಲು ಸಿದ್ದರಾಗಿದ್ದಾರೆ. ಈ ಬಗ್ಗೆ ಉಪೇಂದ್ರ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಮಾರ್ಚ್ 10ರೊಳಗೆ ಉಪೇಂದ್ರ ಅವರಿಗೆ ಫೋಟೋ ಮತ್ತು ವಿಡಿಯೋ ತುಣುಕುಗಳ ಮೇಲ್ ಮಾಡುವಂತೆ ಹೇಳಿದ್ದಾರೆ.

ಈ ಪೋಸ್ಟ್ ನೋಡಿ ಉಪ್ಪಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಯಾಕಂದ್ರೆ, ಕಳೆದ ವಾರ ಚಿತ್ರದ ಕತೆಗಾಗಿ ಚಿಕ್ಕಮಗಳೂರಿಗೆ ಹೋಗಿದ್ದ ಉಪ್ಪಿ ಸ್ಕ್ರಿಪ್ಟ್ ಫೈನಲ್ ಮಾಡಿದ್ದಾರೆ. ಅಲ್ಲಿಂದ ಬೆಂಗಳೂರಿಗೆ ಬರ್ತಿದಂತೆ ಉಪ್ಪಿ ಈಗ ಆಡಿಶನ್ ಕಾಲ್ ಕೊಟ್ಟಿದ್ದು, ಶೀರ್ಷಿಕೆ ಈ ಚಿತ್ರವನ್ನು ಟೇಕಾಫ್​​ ಮಾಡುವ ಸೂಚನೆ ಕೊಟ್ಟಿದ್ದಾರೆ. ಈ ಚಿತ್ರವನ್ನು ಉಪ್ಪಿ ಅವರ ಬ್ಯಾನರ್‌ನಲ್ಲೇ ನಿರ್ಮಾಣವಾಗ್ತಿದೆ. ಉಪೇಂದ್ರ ಬರ್ತ್‌ಡೇ ವೇಳೆಗೆ ಈ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ.

ಸದ್ಯ ಉಪ್ಪಿ ಕೈಯಲ್ಲಿ ಸಾಲು ಸಾಲು ಚಿತ್ರಗಳಿವೆ. ಈ ಎಲ್ಲಾ ಚಿತ್ರಗಳ ಕೆಲಸ ಮುಗಿಸಿ, ಕಂಪ್ಲೀಟ್ ಆಗಿ ಉಪ್ಪಿ ತಮ್ಮ‌ ನಿರ್ದೇಶನದ ಚಿತ್ರದಲ್ಲಿ ಬ್ಯುಸಿಯಾಗಲು ಪ್ಲಾನ್ ಮಾಡಿದ್ದಾರೆ. ಬಲ್ಲ ಮೂಲಗಳ ಪ್ರಕಾರ, ಉಪೇಂದ್ರ ಹುಟ್ಟು ಹಬ್ಬಕ್ಕೆ ಈ ಚಿತ್ರವನ್ನ ಕೈಗೆತ್ತಿಕೊಳ್ಳಲಿದ್ದಾರೆ. ಅದಕ್ಕೆ ಬೇಕಾದ ಎಲ್ಲಾ ಸಿದ್ದತೆಗಳು ನಡೆಯುತ್ತಿವೆ. ಆದರೆ, ಈ ಹಿಂದೆ ಈ ಚಿತ್ರಕ್ಕೆ ಪಂಗನಾಮ ಎಂದು ಟೈಟಲ್ ಇಡಲಾಗುತ್ತೆ ಅನ್ನೋ ಸುದ್ದಿ ಉಪ್ಪಿ ಬಳಗದಿಂದಲೇ ಬಂದಿತ್ತು.

ಆದರೆ, ಈ ಟೈಟಲ್​​ಗೆ ವಿರೋಧ ಕೇಳಿ ಬಂದಿರುವ ಹಿನ್ನೆಲೆ‌ ಚಿತ್ರವನ್ನು ಬದಲಿಸುವ ಅಲೋಚನೆಯು ಉಪ್ಪಿಯಲ್ಲಿದೆ. ಅದೇನೆ ಇರಲಿ ಉಪೇಂದ್ರ ಬರೋಬ್ಬರಿ ಏಳು ವರ್ಷಗಳ ನಂತರ ಮತ್ತೆ ಡೈರೆಕ್ಟರ್ ಕ್ಯಾಪ್ ತೋಡೊದು ಪಕ್ಕಾ ಆಗಿದ್ದು, ರಿಯಲ್ ಸ್ಟಾರ್ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.

ಓದಿ:ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ಪತ್ನಿಯ ಬೆಲೆ ಬಾಳುವ ಮೊಬೈಲ್ ಕ್ಷಣಾರ್ಧದಲ್ಲಿ ಕದ್ದೊಯ್ದ ಕಳ್ಳರು..

ABOUT THE AUTHOR

...view details