ಕರ್ನಾಟಕ

karnataka

ETV Bharat / sitara

ಸ್ವಾತಂತ್ಯ್ರೋತ್ಸವದ ವಿಶೇಷ ದಿನದಂದು ಸೆಟ್ಟೇರಿತು ಉಪ್ಪಿಯ ಹೊಸ ಸಿನಿಮಾ - ನಿಶ್ವಿಕಾ ನಾಯ್ಡು

ನಿರ್ದೇಶಕ ಶಶಾಂಕ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಕಾಂಬಿನೇಶನ್ ಸಿನಿಮಾ ಇಂದು ಸೆಟ್ಟೇರಿದೆ. ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಚಿತ್ರ ಇಂದು ಸೆಟ್ಟೇರಿದ್ದು, ಉಪೇಂದ್ರ ಜೊತೆಗೆ ನಿಶ್ವಿಕಾ ನಾಯ್ಡು ಹಾಗೂ ರುಕ್ಮಿಣಿ ನಟಿಸುತ್ತಿದ್ದಾರೆ.

ಉಪೇಂದ್ರ ಹೊಸ ಸಿನಿಮಾ

By

Published : Aug 15, 2019, 11:54 PM IST

ಇಂದು ಸ್ವಾತಂತ್ಯ್ರ ದಿನಾಚರಣೆ, ರಕ್ಷಾಬಂಧನದ ಸಂಭ್ರಮದ ಜೊತೆಗೆ ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ. ಉಪೇಂದ್ರ ಅವರ ಹೊಸ ಸಿನಿಮಾವೊಂದು ಇಂದು ಸೆಟ್ಟೇರಿದೆ.

ನಿರ್ದೇಶಕ ಶಶಾಂಕ್, ಉಪೇಂದ್ರ

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಿರ್ದೇಶಕ ಶಶಾಂಕ್ ಕಾಂಬಿನೇಶನಿನಲ್ಲಿ ಹೊಸ ಸಿನಿಮಾ ಬರಲಿದೆ ಎಂಬ ಸುದ್ದಿ ಬಹಳ ದಿನಗಳಿಂದ ಹರಿದಾಡುತ್ತಿತ್ತು. ಇಂದು 73ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಈ​​​​ ಸಿನಿಮಾ ಪ್ರೊಡಕ್ಷನ್-2 ಹೆಸರಲ್ಲಿ ಸೆಟ್ಟೇರಿದೆ. ಇಂದು ಮಹಾಲಕ್ಷ್ಮಿ ಲೇಔಟ್​​​​ನಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಈ ಚಿತ್ರಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ. 'ಪಡ್ಡೆಹುಲಿ' ನಟಿ ನಿಶ್ವಿಕಾ ನಾಯ್ಡು ಹಾಗೂ 'ಬೀರಬಲ್' ಸಿನಿಮಾದ ರುಕ್ಮಿಣಿ ಇಬ್ಬರೂ ರಿಯಲ್ ಸ್ಟಾರ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ. ಇನ್ನು ಉಳಿದ ತಾರಾಗಣ ಹಾಗೂ ತಂತ್ರಜ್ಞರ ಹುಡುಕಾಟದಲ್ಲಿ ನಿರ್ದೇಶಕ ಶಶಾಂಕ್ ಬ್ಯುಸಿಯಿದ್ದಾರೆ. ಸದ್ಯಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಉಪೇಂದ್ರ ಹುಟ್ಟುಹಬ್ಬಕ್ಕೆ ಈ ಚಿತ್ರದ ಫಸ್ಟ್​​​​​​ಲುಕ್ ಬಿಡುಗಡೆ ಮಾಡಲು ಶಶಾಂಕ್ ಪ್ಲ್ಯಾನ್​​​ ಮಾಡಿದ್ದಾರೆ. ಸೆಪ್ಟೆಂಬರ್ ಕೊನೆ ವಾರದಲ್ಲಿ ಈ ಚಿತ್ರೀಕರಣ ಪ್ರಾರಂಭ ಆಗಲಿದೆ ಎನ್ನಲಾಗಿದೆ.

ಉಪೇಂದ್ರ ಹೊಸ ಸಿನಿಮಾ ಮುಹೂರ್ತ

ABOUT THE AUTHOR

...view details