ಲಾಕ್ಡೌನ್ ಸಡಿಲಿಕೆಯಿಂದ ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಚಟುವಟಿಕೆಗಳು ಗರಿಗೆದರಿವೆ. ಇದೀಗ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಹರಿಪ್ರಿಯಾ ಒಟ್ಟಿಗೆ ನಟಿಸ್ತಿರೋ ಲಗಾಮ್ ಸಿನಿಮಾದ ಚಿತ್ರೀಕರಣ ಆರಂಭಗೊಂಡಿದೆ. ಈ ಚಿತ್ರದ ಭರ್ಜರಿ ಆ್ಯಕ್ಷನ್ ಸಿಕ್ವೆನ್ಸ್ ಚಿತ್ರೀಕರಣ ಮಾಡೋದ್ರಲ್ಲಿ ನಿರ್ದೇಶಕ ಕೆ ಮಾದೇಶ್ ಬ್ಯುಸಿಯಾಗಿದ್ದಾರೆ.
ಕಳೆದ ಹತ್ತು ದಿನಗಳಿಂದ ಬೆಂಗಳೂರಿನ ವೈಟ್‌ಹೌಸ್ ಎಂಬ ಮನೆಯಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ರಾಜಕೀಯ ವಿಡಂಬನೆ ಹಾಗೂ ಹಣ ವರ್ಗಾವಣೆಯ ಸುತ್ತ ನಡೆಯುವ ಕಥೆ ಇದಾಗಿದೆ. ತಮ್ಮ ಪಾತ್ರದ ಬಗ್ಗೆ ಮಾತನಾಡಿದ ನಟ ಉಪೇಂದ್ರ, ಸಮಾಜದಲ್ಲಿ ನಡೆಯುವ ಭ್ರಷ್ಟಚಾರದ ಬಗ್ಗೆ ಲಗಾಮು ಹಾಕಲು ಹೊರಡುವವನ ಕಥೆ ಇದಾಗಿದೆ.
ಬಹಳ ಡಿಫರೆಂಟ್ ಆದ ಲುಕ್ನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಗಜ, ರಾಮ್, ಹುಡುಗರು ಅಂತಹ ಸಿನಿಮಾಗಳನ್ನ ನಿರ್ದೇಶನ ಮಾಡಿರೋ ನಿರ್ದೇಶಕ ಕೆ.ಮಾದೇಶ್ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಮೈಸೂರು, ಬೆಂಗಳೂರಿನಲ್ಲಿ ಈ ಸಿನಿಮಾವನ್ನ ಚಿತ್ರೀಕರಣ ಮಾಡಿದ್ದೇವೆ ಎಂದರು.