ಕೊರೊನಾದಿಂದ ಸಂಕಷ್ಟಕ್ಕೆ ಒಳಗಾಗಿರುವ ಜನರಿಗೆ ಸಹಾಯಹಸ್ತ ಚಾಚುವುದಕ್ಕೆ ಬಾಲಿವುಡ್‌ನ ಹಲವು ನಟ-ನಟಿಯರು ಫಂಡ್ ರೈಸರ್‌ಗಳನ್ನು ಪ್ರಾರಂಭಿಸಿದ್ದಾರೆ. ಪ್ರಿಯಾಂಕಾ ಚೋಪ್ರಾ, ಅನುಷ್ಕಾ ಶರ್ಮ, ಹೃತಿಕ್ ರೋಶನ್, ಲಾರಾ ದತ್ತ ಸೇರಿದಂತೆ ಹಲವರು ಫಂಡ್ ರೇಸರ್‌ಗಳನ್ನು ಪ್ರಾರಂಭಿಸಿದ್ದು, ಆ ಮೂಲಕ ಬೇರೆಯವರಿಂದ ಹಣ ಸಂಗ್ರಹಿಸಿ, ಅದನ್ನು ಕೊರೊನಾ ಸಂತ್ರಸ್ತರಿಗೆ ಅಗತ್ಯವಿರುವ ವಸ್ತುಗಳನ್ನು ಕೊಳ್ಳುವುದಕ್ಕೆ ದಾನ ಮಾಡುತ್ತಿದ್ದಾರೆ. ಈಗ ಉಪೇಂದ್ರ ಸಹ ಅಂಥದ್ದೊಂದು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಸೋಮವಾರವಷ್ಟೇ ಉಪೇಂದ್ರ ಚಲನಚಿತ್ರ ಕಾರ್ಮಿಕರ ಒಕ್ಕೂಟದ ಎಲ್ಲ ಸಂಘಗಳ ಸುಮಾರು ಮೂರು ಸಾವಿರ ಜನರಿಗೆ ದಿನಸಿ ಕಿಟ್ ನೀಡುವುದಾಗಿ ಘೋಷಿಸಿದ್ದರು. ಯಾವಾಗ ಉಪೇಂದ್ರ ಇಂಥದ್ದೊಂದು ಘೋಷಣೆ ಮಾಡಿದರೋ ಅವರ ಮೂಲಕ ಸಹಾಯ ಮಾಡುವುದಕ್ಕೆ ಹಲವರು ಮುಂದೆ ಬಂದಿದ್ದಾರೆ.
ಸಿನಿಮಾ ಕಾರ್ಮಿಕರಿಗೆ ಸಹಾಯ ಮಾಡಲು ಉಪ್ಪಿಗೆ ಹಲವು ದಾನಿಗಳ ಸಾಥ್! - ಸಿನಿಮಾ ಕಾರ್ಮಿಕರಿಗೆ ಸಹಾಯ ಮಾಡಲು ಬುದ್ದಿವಂತನ ಜೊತೆಯಾದ ಹಲವರು
ಎಸ್.ಕೆ. ಸ್ಟೀಲ್ಸ್ ಕಂಪನಿಯವರು ಐದು ಲಕ್ಷ ರೂ.ಗಳನ್ನು ದೇಣಿಗೆ ನೀಡುವುದಕ್ಕೆ ಮುಂದೆ ಬಂದಿದ್ದು, ಆ ಹಣವನ್ನು ಸಂಕಷ್ಟದಲ್ಲಿರುವ ಕಿರುತೆರೆ ಕಲಾವಿದರಿಗೆ ಕೊಡುವುದಕ್ಕೆ ಉಪೇಂದ್ರ ಮುಂದಾಗಿದ್ದಾರೆ. ದಾವಣಗೆರೆಯ ಮೋತಿ ರಾಜೇಂದ್ರ ಅವರು ಒಂದು ಲಕ್ಷ ರೂಪಾಯಿ ದೇಣಿಗೆ ನೀಡಲು ಮುಂದೆ ಬಂದಿದ್ದು, ಆ ಹಣವನ್ನು ನಿರ್ದೇಶಕರ ಸಂಘಕ್ಕೆ ನೀಡುವಂತೆ ಹೇಳಿದ್ದಾರಂತೆ.
![ಸಿನಿಮಾ ಕಾರ್ಮಿಕರಿಗೆ ಸಹಾಯ ಮಾಡಲು ಉಪ್ಪಿಗೆ ಹಲವು ದಾನಿಗಳ ಸಾಥ್! ಸಿನಿಮಾ ಕಾರ್ಮಿಕರಿಗೆ ಸಹಾಯ ಮಾಡಲು ಬುದ್ದಿವಂತನ ಜೊತೆಯಾದ ಹಲವರು](https://etvbharatimages.akamaized.net/etvbharat/prod-images/768-512-11715908-thumbnail-3x2-abc.jpg)
ಎಸ್.ಕೆ. ಸ್ಟೀಲ್ಸ್ ಕಂಪನಿಯವರು ಐದು ಲಕ್ಷ ರೂ.ಗಳನ್ನು ದೇಣಿಗೆ ನೀಡುವುದಕ್ಕೆ ಮುಂದೆ ಬಂದಿದ್ದು, ಆ ಹಣವನ್ನು ಸಂಕಷ್ಟದಲ್ಲಿರುವ ಕಿರುತೆರೆ ಕಲಾವಿದರಿಗೆ ಕೊಡುವುದಕ್ಕೆ ಉಪೇಂದ್ರ ಮುಂದಾಗಿದ್ದಾರೆ. ದಾವಣಗೆರೆಯ ಮೋತಿ ರಾಜೇಂದ್ರ ಅವರು ಒಂದು ಲಕ್ಷ ರೂಪಾಯಿ ದೇಣಿಗೆ ನೀಡಲು ಮುಂದೆ ಬಂದಿದ್ದು, ಆ ಹಣವನ್ನು ನಿರ್ದೇಶಕರ ಸಂಘಕ್ಕೆ ನೀಡಲು ಸೂಚಿಸಿದ್ದಾರಂತೆ. ಡಾ. ಗಿರೀಶ್ 25 ಸಾವಿರ, ಅಮೆರಿಕಾದಲ್ಲಿ ನೆಲೆಸಿರುವ ಅನಿಲ್, ನಟ ಶೋಭರಾಜ್ ಸೇರಿದಂತೆ ಹಲವರು ದೇಣಿಗೆ ನೀಡಿದ್ದು, ಆ ಹಣವನ್ನು ಅವರು ಅಪೇಕ್ಷಿಸುವ ಸಂಘ-ಸಂಸ್ಥೆಗಳಿಗೆ ಮತ್ತು ಅಗತ್ಯವಿರುವವರಿಗೆ ಸದ್ಯದಲ್ಲೇ ಹಸ್ತಾಂತರಿಸಲಾಗುವುದು ಎಂದು ಉಪೇಂದ್ರ ಹೇಳಿಕೊಂಡಿದ್ದಾರೆ.