ಚಂದನವನದಲ್ಲಿ ಭೂಗತಲೋಕದ ಕಥೆ ಹೊಂದಿರುವ ಸಾಕಷ್ಟು ಸಿನಿಮಾಗಳು ಬಂದಿವೆ. ಇಂದಿಗೂ ಬರುತ್ತಲೇ ಇವೆ. ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ 'ಸಲಗ' ಸಿನಿಮಾ ಕೂಡಾ ಅಂಡರ್ ವರ್ಲ್ಡ್ ಕಥೆ ಆಧರಿಸಿರುವ ಸಿನಿಮಾ.
ದುನಿಯಾ ವಿಜಯ್ ನಿರ್ದೇಶನದ 'ಸಲಗ' ಸಿನಿಮಾದಲ್ಲಿ ಐವರು ರಿಯಲ್ ರೌಡಿಗಳು..! - undefined
ದುನಿಯಾ ವಿಜಯ್ ನಟಿಸಿ ನಿರ್ದೇಶಿಸಿರುವ 'ಸಲಗ' ಸಿನಿಮಾ ಮೊದಲ ಹಂತದ ಚಿತ್ರೀಕರಣ ಮುಕ್ತಾಯಗೊಂಡಿದೆ. ಸಿನಿಮಾದಲ್ಲಿ ಐವರು ರಿಯಲ್ ರೌಡಿಗಳು ನಟಿಸಿದ್ದಾರೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
![ದುನಿಯಾ ವಿಜಯ್ ನಿರ್ದೇಶನದ 'ಸಲಗ' ಸಿನಿಮಾದಲ್ಲಿ ಐವರು ರಿಯಲ್ ರೌಡಿಗಳು..!](https://etvbharatimages.akamaized.net/etvbharat/prod-images/768-512-3689371-thumbnail-3x2-salaga.jpg)
ಇನ್ನು ಶಿವರಾಜ್ಕುಮಾರ್ ಅಭಿನಯದ 'ಓಂ' ಸಿನಿಮಾ, ದರ್ಶನ್ ಅಭಿನಯದ 'ಕರಿಯ' ಸಿನಿಮಾದಲ್ಲಿ ರಿಯಲ್ ರೌಡಿಗಳನ್ನು ಕರೆಸಿ ಆ್ಯಕ್ಟ್ ಮಾಡಿಸಲಾಗಿತ್ತು. ಇದೀಗ ಅಂತದೇ ಪ್ರಯೋಗವನ್ನು ದುನಿಯಾ ವಿಜಯ್ ಮಾಡಿದ್ದಾರೆ. 'ಸಲಗ' ಸಿನಿಮಾದಲ್ಲಿ ಕೂಡಾ ಐವರು ರಿಯಲ್ ರೌಡಿಗಳು ನಟಿಸಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ವಿಜಯ್ ಆ ಐವರ ಫೋಟೋಗಳನ್ನು ರಿವೀಲ್ ಮಾಡಿಲ್ಲ. ಸಿನಿಮಾ ನೋಡಿದ ನಂತರವಷ್ಟೇ ಅವರು ಯಾರು ಎಂಬುದು ತಿಳಿಯಲಿದೆ. ಟಾಕಿ ಪೋಷನ್ ಜೊತೆಗೆ ಒಂದು ಹಾಡನ್ನು ನಿರ್ದೇಶಕ ದುನಿಯಾ ವಿಜಯ್ ಚಿತ್ರೀಕರಿಸುವ ಮೂಲಕ ಮೊದಲ ಹಂತದ ಚಿತ್ರೀಕರಣ ಮುಗಿಸಿದ್ದಾರೆ.
ಕೆಲವೇ ದಿನಗಳಲ್ಲಿ ಡಾಲಿ ಧನಜಂಯ್ ಕೂಡಾ 'ಸಲಗ' ಅಡ್ಡಾಕ್ಕೆ ಎಂಟ್ರಿ ಕೊಡಲಿದ್ದಾರೆ. ಇವರ ಜೊತೆ ಕಾಕ್ರೋಚ್ ಸುಧಿ, ಸಂಜನಾ ಆನಂದ್ ಕೂಡಾ ಚಿತ್ರತಂಡ ಸೇರಿಕೊಳ್ಳಲಿದ್ದಾರೆ. ಬೆಂಗಳೂರಿನ ಮಾರ್ಕೆಟ್, ಸ್ಲಂ ಏರಿಯಾಗಳಲ್ಲಿ ಎರಡನೇ ಶೆಡ್ಯೂಲ್ ಶೂಟಿಂಗ್ ಆರಂಭವಾಗಲಿದೆ. 'ಟಗರು' ಸಿನಿಮಾಗೆ ಕೆಲಸ ಮಾಡಿದ್ದ ಕೆಲವು ತಂತ್ರಜ್ಞರು ಈ ಸಿನಿಮಾದಲ್ಲೂ ಕೆಲಸ ಮಾಡುತ್ತಿದ್ದಾರೆ. ಮಾಸ್ತಿ ಮಂಜು ಚಿತ್ರಕ್ಕೆ ಡೈಲಾಗ್ ಬರೆದಿದ್ದಾರೆ. ಚರಣ್ ರಾಜ್ ಹಾಗೂ ನವೀನ್ ಸಜ್ಜು ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. 'ಟಗರು' ಸಿನಿಮಾವನ್ನು ನಿರ್ಮಿಸಿದ್ದ ಕೆ.ಪಿ. ಶ್ರೀಕಾಂತ್ 'ಸಲಗ' ಸಿನಿಮಾಗೆ ಬಂಡವಾಳ ಹೂಡಿದ್ದಾರೆ.