ಕರ್ನಾಟಕ

karnataka

ETV Bharat / sitara

ನಿಜವಾದ ಮನುಷ್ಯ ಎಂದು ಸಾಬೀತುಪಡಿಸಲು 'ಮದ್ಯ' ಬೇಕಿಲ್ಲ; ಸುದೀಪ್​ ಹೀಗೆ ಟ್ವೀಟ್​ ಮಾಡಿದ್ಯಾಕೆ? - Sudeep tweet

ನಿಜವಾದ (ಗಂಡಸು) ಮನುಷ್ಯ ಎಂದು ಸಾಬೀತುಪಡಿಸಲು ಮದ್ಯ ಬೇಕಿಲ್ಲ, ಸೂರ್ಯ ಮುಳುಗುವುದು ಬೇಕಿಲ್ಲ ಎಂದು ಸ್ಯಾಂಡಲ್​ವುಡ್​ನ ಅಭಿನಯ ಚಕ್ರವರ್ತಿ ಟ್ವಿಟರ್​​ನಲ್ಲಿ ಬರೆದುಕೊಂಡಿದ್ದಾರೆ. ಅವರು ಈ ರೀತಿ ಟ್ವೀಟ್​ ಮಾಡಿರುವುದು ಇದೀಗ ಅನೇಕ ಗೊಂದಲಗಳಿಗೆ ಕಾರಣವಾಗಿದೆ.

ಕಿಚ್ಚ ಸುದೀಪ್​​/Sudeep

By

Published : Aug 12, 2019, 7:26 PM IST

ಬೆಂಗಳೂರು:ಸ್ಯಾಂಡಲ್​​ವುಡ್​​ನ ಅಭಿನಯ ಚಕ್ರವರ್ತಿ ಸುದೀಪ್​​​ ಅಭಿನಯ ಮಾಡಿರುವ ಪೈಲ್ವಾನ್​​ ಚಿತ್ರ ಬರುವ ಸೆಪ್ಟೆಂಬರ್​​​ 12ರಂದು ರಿಲೀಸ್​ ಆಗಲಿದ್ದು, ಸಿನಿಮಾ ಪ್ರೇಕ್ಷಕರು ಸಿನಿಮಾ ನೋಡಲು ತುದಿಗಾಲಿನ ಮೇಲೆ ನಿಂತಿದ್ದಾರೆ.

ಇದರ ನಡುವೆ ಕಿಚ್ಚ ಸುದೀಪ್​ ಮಾಡಿರುವ ಟ್ವೀಟ್​​ವೊಂದು ಅವರ ಅಭಿಮಾನಿಗಳಲ್ಲಿ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ. ತಮ್ಮ ಟ್ವಿಟರ್​​ನಲ್ಲಿ ಸುದೀಪ್​​​​​​ 'ನಿಜವಾದ ಮನುಷ್ಯ (ಗಂಡಸು) ಎಂದು ಸಾಬೀತು ಮಾಡಲು ಮದ್ಯ ಬೇಕಿಲ್ಲ, ಸೂರ್ಯ ಮುಳುಗುವುದು ಬೇಕಾಗಿಲ್ಲ. ನನ್ನಲ್ಲಿರುವ ಸಾಮರ್ಥ್ಯವನ್ನ ಒರೆಗೆ ಹಚ್ಚಲು ಯುದ್ದ ಭೂಮಿಗೆ ಇಳಿದು ಹೋರಾಡುವುದಿಲ್ಲ. ಎದುರಾಳಿ ಯುದ್ಧ ಮಾಡಲು ಎಷ್ಟೊಂದು ಅರ್ಹನಾಗಿದ್ದಾನೆ ಎಂಬುದನ್ನ ಮನಗೊಂಡ ಮೇಲೆ ಹೋರಾಟ ಮಾಡಲು ಮುನ್ನುಗುತ್ತೇನೆ' ಎಂದು ಬರೆದುಕೊಂಡಿದ್ದಾರೆ. ಜತೆಗೆ ಈ ಸುಂದರ ಲೈನ್​ಗಳನ್ನ ಎಲ್ಲೋ ಓದಿರುವೆ ಎಂದು ಹೇಳಿದ್ದಾರೆ.

ಯಾವ ವಿಷಯವನ್ನಿಟ್ಟುಕೊಂಡು ನಟ ಸುದೀಪ್​ ಈ ರೀತಿಯಾಗಿ ಟ್ವೀಟ್​​​ ಮಾಡಿದ್ದಾರೆ ಎಂಬುದು ಗೊತ್ತಾಗಿಲ್ಲ. ಆದರೆ ಇದೀಗ ಅವರು ಮಾಡಿರುವ ಟ್ವಿಟ್​ ಅವರ ಅಭಿಮಾನಿ ಹಾಗೂ ಸಿನಿಮಾ ರಸಿಕರಲ್ಲಿ ಗೊಂದಲು ಉಂಟು ಮಾಡಿರುವುದಂತೂ ಸುಳ್ಳಲ್ಲ.

ABOUT THE AUTHOR

...view details