ಕರ್ನಾಟಕ

karnataka

ETV Bharat / sitara

ಅತೃಪ್ತ ಆತ್ಮಗಳ ಕಥೆ : ಇದೇ 31ಕ್ಕೆ 'ಕಾಣದಂತೆ ಮಾಯವಾದನು' ರಿಲೀಸ್​ - ಜಯಮ್ಮನ ಮಗ ಚಿತ್ರ ನಿರ್ದೇಶನ ಮಾಡಿದ್ದ ವಿಕಾಸ್.

'ಕಾಣದಂತೆ ಮಾಯವಾದನು' ಚಿತ್ರ ರಿಲೀಸ್​​ಗೆ ರೆಡಿಯಾಗಿದ್ದು, ಜನವರಿ 31ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.  ಚಿತ್ರವನ್ನು ವಿತರಕ ಜಯಣ್ಣ ಸುಮಾರು 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲು ಪ್ಲಾನ್ ಮಾಡಿದ್ದಾರೆ. ಇನ್ನು ಈ ಚಿತ್ರಕ್ಕೆ ರಾಜ್​ ಪತ್ತಿಪಾಟಿ ನಿರ್ದೇಶನ ಮಾಡಿದ್ದು, ನಾಯಕಿಯಾಗಿ ಸಿಂಧು ಲೋಕನಾಥ್​ ನಟಿಸಿದ್ದಾರೆ.

Ready To Releas kanadanthe mayavadhamu
ಇದೇ 31ಕ್ಕೆ 'ಕಾಣದಂತೆ ಮಾಯವಾದನು' ರಿಲೀಸ್​

By

Published : Jan 17, 2020, 11:05 AM IST

ದುನಿಯಾ ವಿಜಯ್ ಅಭಿನಯದ ಜಯಮ್ಮನ ಮಗ ಚಿತ್ರ ನಿರ್ದೇಶನ ಮಾಡಿದ್ದ ವಿಕಾಸ್ ಮೊದಲ ಬಾರಿಗೆ ನಾಯಕ ನಟರಾಗಿ ನಟಿಸಿರುವ 'ಕಾಣದಂತೆ ಮಾಯವಾದನು' ಚಿತ್ರ ರಿಲೀಸ್​​ಗೆ ರೆಡಿಯಾಗಿದ್ದು, ಜನವರಿ 31ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರವನ್ನು ವಿತರಕ ಜಯಣ್ಣ ಸುಮಾರು 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲು ಪ್ಲಾನ್ ಮಾಡಿದ್ದಾರೆ. ಇನ್ನು ಈ ಚಿತ್ರಕ್ಕೆ ರಾಜ್​ ಪತ್ತಿಪಾಟಿ ನಿರ್ದೇಶನ ಮಾಡಿದ್ದು, ನಾಯಕಿಯಾಗಿ ಸಿಂಧು ಲೋಕನಾಥ್​ ನಟಿಸಿದ್ದಾರೆ.

ಇದೇ 31ಕ್ಕೆ 'ಕಾಣದಂತೆ ಮಾಯವಾದನು' ರಿಲೀಸ್​

ಸೆಟ್ಟೀರಿದ ನಾಲ್ಕು ವರ್ಷಗಳ ನಂತರ ಈ ಸಿನಿಮಾ ಬಿಡುಗಡೆ ಭಾಗ್ಯ ಕಾಣುತ್ತಿದೆ. ಚಿತ್ರದಲ್ಲಿ ಅತೃಪ್ತ ಆತ್ಮಗಳ ರಂಪಾಟವನ್ನು ನಿರ್ದೇಶಕರು ಹೇಳಲು ಹೊರಟಿದ್ದಾರೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಶ್ವಾನಗಳ ಕಣ್ಣಿಗೆ ದೆವ್ವಗಳು ಕಾಣಿಸುತ್ತದೆ ಎಂಬ ನಂಬಿಕೆಯಿದೆ. ಈ ನಂಬಿಕೆಯನ್ನಿಟ್ಟುಕೊಂಡು ನಿರ್ದೇಶಕರು ಕಥೆ ಹೆಣೆದಿದ್ದಾರೆ.

ಸಿನಿಮಾದಲ್ಲಿ ಧರ್ಮಣ್ಣ, ಅಚ್ಯುತ್​​, ಭಜರಂಗ ಲೋಕಿ ನಟಿಸಿದ್ದಾರೆ. ವಿಶೇಷ ಏನಂದ್ರೆ ವಿಧಿವಶರಾಗಿರುವ ನಟ ಉದಯ್​ ಕೂಡ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರಂತೆ. ಈ ಚಿತ್ರದಲ್ಲಿ ಖಳ ನಟನ ಪಾತ್ರದಲ್ಲಿ ಉದಯ್​ ನಟಿಸಿದ್ದು, ಸಿನಿಮಾ ಬಿಡುಗಡೆಗೆ ಮುನ್ನ ಅವರು ಸಾವನ್ನಪ್ಪಿದ್ದರಿಂದ ಅವರ ಮುಂದುವರೆದ ಪಾತ್ರದಲ್ಲಿ ಭಜರಂಗಿ ಲೋಕಿ ನಟಿಸಿದ್ದಾರೆ.

ABOUT THE AUTHOR

...view details