ಕರ್ನಾಟಕ

karnataka

ETV Bharat / sitara

ಹೊಸಬರೊಟ್ಟಿಗೆ ಬೆಳ್ಳಿ ತೆರೆಗೆ 'ಕಿಸ್'​ ಕೊಡಲು ರೆಡಿಯಾದ ಎ.ಪಿ. ಅರ್ಜುನ್​ - Director A P Arjun new film

ಚಾಲೆಂಜಿಗ್​ ಸ್ಟಾರ್​ ದರ್ಶನ್​ರ ಐರಾವತ ಚಿತ್ರ ನಿರ್ದೇಶಿಸಿದ್ದ ಎ ಪಿ ಅರ್ಜುನ್​ರ ಮತ್ತೊಂದು ಸಿನಿಮಾ ತೆರೆಗೆ ಬರೋದಕ್ಕೆ ಸಜ್ಜಾಗಿದೆ.

ಎ ಪಿ ಅರ್ಜುನ್​ ಆ್ಯಕ್ಷನ್​ ಕಟ್​

By

Published : Sep 20, 2019, 11:19 PM IST

ದಾವಣಗೆರೆ; ಅಂಬಾರಿ, ಅದ್ದೂರಿ ಸಿನಿಮಾ ಮೂಲಕ ಹೊಸಬರಿಗೆ ಬಿಗ್​ ಸಕ್ಸಸ್ ಕೊಟ್ಟಿದ್ದ ನಿರ್ದೇಶಕ ಎಪಿ ಅರ್ಜುನ್ ಮತ್ತೆ ಹೊಸ ಮುಖಗಳೊಂದಿಗೆ ಕಿಸ್ ಹೊಸ ಸಿನಿಮಾಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ.

ಎ ಪಿ ಅರ್ಜುನ್​ ಆ್ಯಕ್ಷನ್​ ಕಟ್​

ನಗರದಲ್ಲಿ ಮಾತನಾಡಿದ ಎಪಿ ಅರ್ಜುನ್​, ಕಿಸ್ ಎಂದರೆ ಕೇವಲ ಕೆಟ್ಟ ಪದವಲ್ಲ, ಅದೊಂದು ಭಾವನಾತ್ಮಕ ಪ್ರೀತಿಯ ವಿಷಯ.KISS ಎಂದರೆ ಕೀಪ್ ಇಟ್ ಶಾರ್ಟ್ ಅಂಡ್ ಸ್ವೀಟ್ ಎಂಬರ್ಥದಲ್ಲಿ ನವಿರಾದ ಪ್ರೇಮ ಕಥಾನಕ ಇರುವ ಸಿನಿಮಾವಾಗಿದೆ ಎಂದರು. ನಾಯಕ ನಟ ವಿರಾಟ್​, ನಾಯಕಿ ಶ್ರೀಲೀಲಾ ಹೊಸಬರು. ಈ ಸಿನಿಮಾ ಮೊದಲ ಹಾಡು 'ನೀನೆ ಮೊದಲು' 10 ಮಿಲಿಯನ್ ವೀವ್ಸ್ ಪಡೆದಿದ್ದು, ಯೂಟ್ಯೂಬ್​ನಲ್ಲಿ ಟ್ರೆಡಿಂಗ್ ಆಗಿದೆ..

ಇನ್ನೊಂದು ಹಾಡನ್ನು ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಹಾಡಿದ್ದು ಹಾಡುಗಳಿಗೆ ಕೇಳುಗರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಚಿಕ್ಕಮಕ್ಕಳಿಂದ ವಯಸ್ಸಿನವರಗೆ ನೋಡಬಹುದಾದ ಕೌಟುಂಬಿಕ ಸಿನಿಮಾ ಎಂದು ಎಪಿ ಅರ್ಜುನ್​ ವಿವರಿಸಿದರು. ಇನ್ನು ನಟಿ ಶ್ರೀಲೀಲಾ ಮಾತನಾಡಿ ಇದೇ 27 ರಂದು ಚಿತ್ರ

ತೆರೆ ಮೇಲೆ ಬರಲಿದೆ ಎಲ್ಲರು ಸಿನಿಮಾ ನೋಡಿ ಆರ್ಶಿವದಿಸಿ ಎಂದರು.

ABOUT THE AUTHOR

...view details