ಪುನೀತ್ ರಾಜ್ಕುಮಾರ್ ಅಕಾಲಿಕ ನಿಧನಕ್ಕೆ ಇಡೀ ಚಿತ್ರರಂಗ ಕಂಬನಿ ಮಿಡಿದಿದೆ. ಈ ನಡುವೆ ಕ್ರಿಕೆಟ್ ದಿಗ್ಗಜರು, ನಟ-ನಟಿಯರು, ರಾಜಕೀಯ ಪ್ರಮುಖರು ಸಹ ಸಂತಾಪ ವ್ಯಕ್ತಪಡಿಸಿದ್ದಾರೆ. ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವತಿಯಿಂದಲೂ ಸಂತಾಪ ಸೂಚಿಸಲಾಗಿದೆ.
ಪುನೀತ್ ರಾಜ್ಕುಮಾರ್ ನೆನೆದು ಆರ್ಸಿಬಿ ಟ್ವೀಟ್.. ಸಂತಾಪ ಸೂಚಿಸಿದ ಉತ್ತಪ್ಪ - ರಾಬಿನ್ ಉತ್ತಮ
ಪುನೀತ್ ರಾಜ್ಕುಮಾರ್ ಅಕಾಲಿಕ ನಿಧನಕ್ಕೆ ಇಡೀ ಚಿತ್ರರಂಗ ಕಂಬನಿ ಮಿಡಿದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವತಿಯಿಂದಲೂ ಸಂತಾಪ ಸೂಚಿಸಲಾಗಿದೆ..
ಪುನೀತ್ ರಾಜ್ಕುಮಾರ್ ನೆನೆದು ಆರ್ಸಿಬಿ ಟ್ವೀಟ್...ಸಂತಾಪ ಸೂಚಿಸಿದ ಉತ್ತಪ್ಪ
ಈ ಕುರಿತು ಟ್ವೀಟ್ ಮಾಡಿರುವ ಮ್ಯಾನೇಜ್ಮೆಂಟ್, ಬೇಗ ಹೋಗಿಬಿಟ್ಟಿರಿ, ಸಿನಿಮಾ ರಂಗದ ಪ್ರೀತಿಯ ನಟನ ಅಗಲಿಕೆ ನಿಜಕ್ಕೂ ಶಾಕ್, ದುಃಖದ ವಿಚಾರ. ಪುನೀತ್ ರಾಜ್ಕುಮಾರ್ ಕುಟುಂಬ ಹಾಗೂ ಸ್ನೇಹಿತರಿಗೆ ಸಂತಾಪಗಳು. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ, ಅಪ್ಪು! ಎಂದು ಟ್ವೀಟ್ ಮಾಡಿದೆ.
ಮಾಜಿ ಕ್ರಿಕೆಟಿಗ, ಕನ್ನಡಿಗ ರಾಬಿನ್ ಉತ್ತಮ ಈ ಬಗ್ಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದು, ಪುನೀತ್ ರಾಜ್ಕುಮಾರ್ ಅವರ ನಿಧನದ ಸುದ್ದಿ ಕೇಳಿ ಅತೀವ ದುಃಖವಾಯಿತು. ಅವರ ಕುಟುಂಬಕ್ಕೆ ಮತ್ತು ಅವರ ಎಲ್ಲಾ ಅಭಿಮಾನಿಗಳಿಗೆ ನನ್ನ ಸಂತಾಪಗಳು. ಅವರ ಆತ್ಮಕೆ ಶಾಂತಿ ಸಿಗಲಿ ಎಂದಿದ್ದಾರೆ.