ಕರ್ನಾಟಕ

karnataka

ETV Bharat / sitara

ಮನೋರಂಜನ್ 'ಪ್ರಾರಂಭ' ಟೀಸರ್​​ ಆರಂಭವಾಗುವುದೇ ದರ್ಶನ್ ಮಾತಿನಿಂದ! - ಆನಂದ್ ಆಡಿಯೋ

ರವಿಚಂದ್ರನ್ ಅವರ ಮೇಲಿನ ಗೌರವಕ್ಕೆ ಮೊನ್ನೆಯಷ್ಟೇ ಸುದೀಪ್ 'ರವಿ ಬೋಪಣ್ಣ' ಶೂಟಿಂಗ್​ ಸೆಟ್​​​ಗೆ ಬಂದು ತಮ್ಮ ಭಾಗದ ಚಿತ್ರೀಕರಣ ಮುಗಿಸಿಕೊಟ್ಟರು. ಇದೀಗ ದರ್ಶನ್ ಅವರು ರವಿಚಂದ್ರನ್​​​​​​​​​​​​​​​​ ಪುತ್ರ ಮನೋರಂಜನ್ 'ಪ್ರಾರಂಭ' ಸಿನಿಮಾ ಟೀಸರ್​​​ಗೆ ಬಿಡುವು ಮಾಡಿಕೊಂಡು ಧ್ವನಿ ನೀಡಿದ್ದಾರೆ.

ದರ್ಶನ್ ಪ್ರಾರಂಭ

By

Published : Aug 21, 2019, 9:25 AM IST

ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಪುತ್ರ ಮನೋರಂಜನ್ ರವಿಚಂದ್ರನ್ ಮೂರನೇ ಸಿನಿಮಾ ‘ಪ್ರಾರಂಭ’ ಶೂಟಿಂಗ್ ಮುಗಿದಿದ್ದು, ಪೋಸ್ಟ್​ ಪ್ರೊಡಕ್ಷನ್ ಹಂತದಲ್ಲಿದೆ. ಚಿತ್ರದ ಟೀಸರ್ ಇದೇ ತಿಂಗಳ 23ರಂದು ಬಿಡುಗಡೆ ಆಗುತ್ತಿದೆ. ವಿಶೇಷ ಅಂದ್ರೆ ಟೀಸರ್​​​​​ಗೆ ಚಾಲೆಂಜಿಂಗ್ ಸ್ಟಾರ್​ ದರ್ಶನ್ ಧ್ವನಿ ನೀಡಿದ್ದಾರೆ. ಆನಂದ್ ಆಡಿಯೋ ಈ ಟೀಸರ್ ಬಿಡುಗಡೆ ಮಾಡುತ್ತಿದೆ.

ದರ್ಶನ್ ಜೊತೆ 'ಪ್ರಾರಂಭ' ಚಿತ್ರತಂಡ

ದರ್ಶನ್ ಹಾಗೂ ವಿ.ರವಿಚಂದ್ರನ್ ಸ್ನೇಹ ಬಹಳ ಹಳೆಯದು. ಈ ಸ್ನೇಹ ಹಾಗೂ ರವಿಚಂದ್ರನ್ ಮೇಲಿನ ಗೌರವಕ್ಕೆ ಬೆಲೆ ನೀಡಿ ಅವರ ಮಗನ ಸಿನಿಮಾಕ್ಕೆ ದರ್ಶನ್​​​ ಧ್ವನಿ ನೀಡಿದ್ದಾರೆ. ಬೆಂಗಳೂರು, ಬಳ್ಳಾರಿ, ಚಿಕ್ಕಮಗಳೂರು, ಗೋವಾ, ಮೂಡಿಗೆರೆ, ಮೈಸೂರು ಹಾಗೂ ಇನ್ನಿತರ ಸ್ಥಳಗಳಲ್ಲಿ 50 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಮನು ಕಲ್ಯಾಡಿ ಕಥೆ ಹಾಗೂ ನಿರ್ದೇಶನವಿರುವ ಈ ಚಿತ್ರವನ್ನು ಜಗದೀಶ್ ಕಲ್ಯಾಡಿ ನಿರ್ಮಿಸಿದ್ದಾರೆ. ಜೇನುಶ್ರೀ ತನುಷ ಪ್ರೊಡಕ್ಷನ್ ಬ್ಯಾನರ್ ಅಡಿ ಚಿತ್ರವನ್ನು ನಿರ್ಮಿಸಲಾಗುತ್ತಿದೆ.

ಟೀಸರ್​​ಗಾಗಿ ಡಬ್ ಮಾಡುತ್ತಿರುವ ದರ್ಶನ್

ಚಿತ್ರದ 5 ಹಾಡುಗಳಿಗೆ ಪ್ರಜ್ವಲ್ ಪೈ ಸಂಗೀತ ನೀಡಿದ್ದಾರೆ. 2 ಆ್ಯಕ್ಷನ್ ದೃಶ್ಯಗಳಿಗೆ ಥ್ರಿಲ್ಲರ್ ಮಂಜು ಹಾಗೂ ವಿಕ್ರಮ್ ಮೋರ್ ಸಾಹಸ ನಿರ್ದೇಶನ ಮಾಡಿದ್ದಾರೆ. ಸುರೇಶ್​​​​​ ಬಾಬು ಛಾಯಾಗ್ರಹಣ, ವಿಜಯ್​​ ಎನ್​​​. ಕುಮಾರ್ ಸಂಕಲನ, ಸಂತು ಹಾಗೂ ಗೀತಾ ನೃತ್ಯ ನಿರ್ದೇಶನ, ರವಿ ಸಂತೆಹಕ್ಲು ಕಲಾ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಸಂತೋಷ್ ನಾಯಕ್ ಹಾಡುಗಳನ್ನು ಬರೆದಿದ್ದಾರೆ. ಮನೋರಂಜನ್ ಜೊತೆ ಕೀರ್ತಿ ನಾಯಕಿ ಆಗಿ ಅಭಿನಯಿಸಿದ್ದಾರೆ. ಕಡ್ಡಿಪುಡಿ ಚಂದ್ರು, ಹನುಮಂತೇ ಗೌಡ, ರಘು ಶ್ರೀವಾತ್ಸವ್, ಶಾಂಭವಿ, ಸೂರಜ್ ಹಾಗೂ ಇತರರು ತಾರಾಗಣದಲ್ಲಿದ್ದಾರೆ.

ABOUT THE AUTHOR

...view details