ಒಂದು ಕಡೆ 280 ಕನ್ನಡ ಸಿನಿಮಾಗಳು ಬಿಡುಗಡೆಗೆ ಕಾಯುತ್ತಿದ್ದರೆ, ಮತ್ತೊಂದೆಡೆ ಸಿನಿಮಾಗಳ ಸೆಟ್ಟೇರುವ ಸಂಖ್ಯೆಯೂ ಸಹ ಏರುತ್ತಿದೆ. ಇಂದು ಬೆಂಗಳೂರಿನ ಶೇಷಾದ್ರಿಪುರಂ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ‘ಕನ್ನಡಿಗ’ ಕ್ರೇಜಿ ಸ್ಟಾರ್ ವಿ. ರವಿಚಂದ್ರನ್ ಅಭಿನಯದ ಸಿನಿಮಾ ಸೆಟ್ಟೇರಿದೆ. ಜೊತೆಗೆ ಶ್ರೀ ಕಂಠೀರವ ಸ್ಟುಡಿಯೋದಲ್ಲಿ ‘ಅತ್ಯುತ್ತಮ’ ಎಂಬ ಮತ್ತೊಂದು ಕನ್ನಡ ಸಿನಿಮಾವನ್ನ ನೃತ್ಯ ನಿರ್ದೇಶಕ ಕಪಿಲ್ ಶುರು ಮಾಡುತ್ತಿದ್ದಾರೆ.
ಇಂದು ಸೆಟ್ಟೇರಿದ ವಿ.ರವಿಚಂದ್ರನ್ ಅವರ 'ಕನ್ನಡಿಗ' - ಕ್ರೇಜಿ ಸ್ಟಾರ್ ವಿ. ರವಿಚಂದ್ರನ್ ಅಭಿನಯದ ಸಿನಿಮಾ
ಇಂದು ಬೆಂಗಳೂರಿನ ಶೇಷಾದ್ರಿಪುರಂ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ‘ಕನ್ನಡಿಗ’ ಕ್ರೇಜಿ ಸ್ಟಾರ್ ವಿ. ರವಿಚಂದ್ರನ್ ಅಭಿನಯದ ಸಿನಿಮಾ ಸೆಟ್ಟೇರಿದೆ.
‘ಕನ್ನಡಿಗ’ ಸಿನಿಮಾದಲ್ಲಿ ಕ್ರೇಜಿ ಸ್ಟಾರ್ ವಿ.ರವಿಚಂದ್ರನ್ ಅವರು ಕನ್ನಡ ವಿದ್ವಾಂಸರಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಎನ್. ಎಸ್. ರಾಜಕುಮಾರ್ ನಿರ್ಮಾಪಕರಾಗಿದ್ದು, ಜಟ್ಟ, ಅದ್ವೈತ, ಮೈತ್ರಿ, ತುಂಡ್ ಹೈಕ್ಲ ಸಹವಾಸ, ಅಮರಾವತಿ ಅಂತಹ ಸಿನಿಮಾಗಳ ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ ಬಿ. ಎಂ ಗಿರಿರಾಜ್ ಈ ಬಾರಿ ಕನ್ನಡದ ಮೊದಲ ನಿಘಂಟು ತಜ್ಞ ಕಿಟಲ್ ಕುರಿತಾಗಿ ಕಥೆ ಸಿದ್ದಮಾಡಿಕೊಂಡಿದ್ದಾರೆ.
ಫರ್ಡಿನಂಡ್ ಕಿಟಲ್ ಪಾತ್ರ ನಿರ್ವಹಿಸಲು ಜೇಮಿ ಅಲ್ಟರ್ (ಟಾಮ್ ಅಲ್ಟರ್ ಪುತ್ರ – ಕನ್ನಡದ ಕನ್ನೆಶ್ವರ ರಾಮ ಸಿನಿಮಾದಲಿ ಅಭಿನಯಿಸಿದವರು) ಮೊದಲ ಬಾರಿಗೆ ಕನ್ನಡ ಸಿನಿಮಾಕ್ಕೆ ಆಗಮಿಸುತ್ತಿದ್ದಾರೆ.