ಕರ್ನಾಟಕ

karnataka

ETV Bharat / sitara

ನಮ್ಮಪ್ಪನಾಣೆ ಪ್ರೇಮಲೋಕಕ್ಕಿಂತ ದೊಡ್ಡ ಸಿನಿಮಾ ಮಾಡ್ತೇನೆ: ಕ್ರೇಜಿ ಸ್ಟಾರ್​ ರವಿಚಂದ್ರನ್​ - ನಟ ರವಿ ಚಂದ್ರನ್​ಗೆ ಡಾಕ್ಟರೇಟ್​​ ಪದವಿ

ಸಿಎಂಆರ್​ ಯೂನಿವರ್ಸಿಟಿ ಕ್ರೇಜಿಸ್ಟಾರ್​ ರವಿಂಚಂದ್ರನ್​ಗೆ ಡಾಕ್ಷರೇಟ್​​ ನೀಡಿ ಗೌರವಿಸಿದೆ. ಈ ವೇಳೆ ಮಾತನಾಡಿದ ರಸಿಕ ಮುಂದಿನ ವರ್ಷ ‌ಮತ್ತೊಂದು ಪ್ರೇಮಲೋಕ ಸೃಷ್ಟಿಯಾಗುತ್ತೆ. ಆದ್ರೆ ಆ ಹಳೆ ಹೆಸರನ್ನೇ ಇಟ್ಟು ಸಿನಿಮಾವನ್ನು ಮಾಡುವುದಿಲ್ಲ. ಬದಲಾಗಿ ಇನ್ನೊಂದು ಸಿನಿಮಾವನ್ನು ಪ್ರೇಮಲೋಕಕ್ಕಿಂತ ದೊಡ್ಡದಾಗಿ ಮಾಡುವೆ ಎಂದು ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.

ರವಿಚಂದ್ರನ್​

By

Published : Nov 3, 2019, 7:57 PM IST

ಸ್ಯಾಂಡಲ್​ವುಡ್​​ನ ಕನಸುಗಾರ ಪ್ರೇಮಲೋಕದ ಜನಕ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ನಮ್ಮಪ್ಪನಾಣೆ ಮತ್ತೆ ಪ್ರೇಮಲೋಕದಂತ ಸಿನಿಮಾವನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ.

ರವಿಚಂದ್ರನ್​ಗೆ ಸಿ.ಎಂ.ಆರ್ ಯುನಿವರ್ಸಿಟಿ ವತಿಯಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಬೆಂಗಳೂರಿನ ಯಲಹಂಕದ ಸಿ.ಎಂ.ಆರ್ ಕಾಲೇಜು ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಸಿಎಂ ಅಶ್ವಥ್​​ ನಾರಾಯಣ್ ಅವರು​ ನಟ ರವಿಚಂದ್ರನ್​ಗೆ ಡಾಕ್ಟರೇಟ್​​ ಪದವಿ ಪ್ರದಾನ ಮಾಡಿದರು. ಈ ವೇಳೆ ರವಿಚಂದ್ರನ್ ಪತ್ನಿ ಸುಮತಿ, ಮಗಳು ಗೀತಾಂಜಲಿ, ಅಳಿಯ ಅಜಯ್, ಮಕ್ಕಳಾದ ವಿಕ್ರಂ ಮತ್ತು ಮನೋರಂಜನ್​​ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ನಮ್ಮಪ್ಪನಾಣೆ ಪ್ರೇಮಲೋಕಕ್ಕಿಂತ ದೊಡ್ಡ ಸಿನಿಮಾ ಮಾಡುತ್ತೇನೆ : ನಟ ರವಿಚಂದ್ರನ್​

ಗೌರವ ಡಾಕ್ಟರೇಟ್ ಪ್ರಶಸ್ತಿ ಸ್ವೀಕರಿಸಿ ಮಾತಾನಡಿದ ಕ್ರೇಜಿಸ್ಟಾರ್​​, ಈ ಡಾಕ್ಟರೇಟ್ ನನ್ನ ತಂದೆಗೆ ಸಲ್ಲಬೇಕು, ಇವತ್ತಿನ ನನಗೆ ಹಳದಿ ಮತ್ತು ಕೆಂಪು ಉಡುಪು ಕೊಟ್ಟು ಮತ್ತೆ ನನ್ನನ್ನು ಕರ್ನಾಟಕದ ಮಡಿಲಿಗೆ ಹಾಕಿದ್ದಾರೆ. ಇಷ್ಟು ದಿನ ದಾರಿ ತಪ್ಪಿದ್ದೆ. ಈಗ ಈ ಪದವಿ ನನ್ನನ್ನು ಸರಿದಾರಿಗೆ ತಂದಿದೆ ಅನ್ನೋ ಭಾವ ನನ್ನಲ್ಲಿ ಮೂಡಿದೆ ಎಂದರು.

ಮುಂದಿನ ವರ್ಷ ‌ಮತ್ತೊಂದು ಪ್ರೇಮಲೋಕ ಸೃಷ್ಟಿಯಾಗುತ್ತೆ. ಆದ್ರೆ ಆ ಹಳೆ ಹೆಸರನ್ನೇ ಇಟ್ಟು ಸಿನಿಮಾವನ್ನು ಮಾಡುವುದಿಲ್ಲ. ಬದಲಾಗಿ ಇನ್ನೊಂದು ಸಿನಿಮಾವನ್ನು ಪ್ರೇಮಲೋಕಕ್ಕಿಂತ ದೊಡ್ಡದಾಗಿ ಮಾಡುವೆ ಎಂದು ಹೇಳುತ್ತ, ರವಿಮಾಮ ಡಾಕ್ಟರೇಟ್ ಪಡೆದ ಖುಷಿ ಹಂಚಿಕೊಂಡರು.

ABOUT THE AUTHOR

...view details