ಕನ್ನಡ ಚಿತ್ರರಂಗದ ಶೋ ಮ್ಯಾನ್, ಕನಸುಗಾರ, ರಣಧೀರ ಹೀಗೆ ಹಲವಾರು ಹೆಸರುಗಳಿಂದ ಕರೆಯಿಸಿಕೊಳ್ಳುವ ಏಕೈಕ ನಟ ಕ್ರೇಜಿಸ್ಟಾರ್ ರವಿಚಂದ್ರನ್. ಸದ್ಯ ರವಿ ಬೋಪಣ್ಣ ಸಿನಿಮಾದಲ್ಲಿ ಬ್ಯುಸಿಯಾಗಿರುವ ರವಿಮಾಮ ಈ ಯುಗಾದಿ ಹಬ್ಬದಂದ 'ಒನ್ ಅಂಡ್ ಒನ್ಲಿ ರವಿಚಂದ್ರನ್' ಹೆಸರಿನಲ್ಲಿ ಫೇಸ್‌ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್, ಯೂಟ್ಯೂಬ್‌ಗೆ ರವಿಚಂದ್ರನ್ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ.
ಹೌದು, 24 ಗಂಟೆಗಳ ಕಾಲ ಸಿನಿಮಾ ಬಗ್ಗೆ ಯೋಚನೆ ಮಾಡುವ ರವಿಚಂದ್ರನ್ ಈ ಬಣ್ಣದ, ಪ್ರಪಂಚದಲ್ಲಿ ಹಲವು ಏಳು - ಬೀಳುಗಳನ್ನು ಕಂಡಿದ್ದಾರೆ. ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ, ಸಂಗೀತ ನಿರ್ದೇಶಕನಾಗಿ, ಗೀತ ಸಾಹಿತಿಯಾಗಿ, ಹೀಗೆ ಚಿತ್ರರಂಗದ ಹಲವು ವಿಭಾಗಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಕನಸುಗಾರ. ಈ ಯುಗಾದಿ ಹಬ್ಬ ದಿನದಂದು ಸೋಷಿಯಲ್ ಮೀಡಿಯಾಗೆ ಕಾಲಿಟ್ಟಿರುವ ರವಿಚಂದ್ರನ್ ಇಂದು ಸ್ಪೆಷಲ್ ವಿಡಿಯೋಗಳನ್ನು ಬಿಡುಗಡೆ ಮಾಡಿದ್ದಾರೆ.