ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರಿ ಗೀತಾಂಜಲಿ ಹಾಗು ಉದ್ಯಮಿ ಅಜಯ್ ಆರತಕ್ಷತೆ ಕಾರ್ಯಕ್ರಮದಲ್ಲಿ ಗಣ್ಯಾತಿಗಣ್ಯರ ಸಮಾಗಮವಿತ್ತು. ಅರಮನೆ ಮೈದಾನದ ವೈಟ್ ಪೆಟಲ್ಸ್ ಆವರಣದಲ್ಲಿ ಹಾಕಲಾಗಿರುವ ಗಾಜಿನ ‘ರಾಜಹಂಸದ ವೇದಿಕೆ’ಯಲ್ಲಿ ಆರತಕ್ಷತೆ ಅದ್ದೂರಿಯಾಗಿ ನಡೆಯಿತು.
ಗೀತಾಂಜಲಿ ಕೈ ಹಿಡಿದ ಯುವ ಉದ್ಯಮಿ ಅಜಯ್ ಅದ್ಧೂರಿ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸೂಪರ್ ಸ್ಟಾರ್ ರಜನಿಕಾಂತ್, ಸ್ಯಾಂಡಲ್ವುಡ್ ರೋರಿಂಗ್ ಸ್ಟಾರ್ ಶ್ರೀಮುರಳಿ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿ, ನವಜೋಡಿಗೆ ಶುಭಹಾರೈಸಿದರು.
ರವಿಚಂದ್ರನ್ ಅವರ ಪರಿಕಲ್ಪನೆಯಲ್ಲಿ ಮೂಡಿಬಂದ ಅದ್ಭುತ ವೇದಿಕೆಯಲ್ಲಿ ಆರತಕ್ಷತೆ ಕಾರ್ಯಕ್ರಮ ಕಳೆಗಟ್ಟಿತ್ತು.
ನವಜೋಡಿಗೆ ಶುಭ ಹಾರೈಸಿದ ರಾಜಕೀಯ ಧುರೀಣರು ಮದುವೆಯ ಮನೆಯಲ್ಲಿ ನಾದಬ್ರಹ್ಮ ಹಂಸಲೇಖ ಮತ್ತು ಅವರ ತಂಡದಿಂದ ಸಂಗೀತ ಕಾರ್ಯಕ್ರಮವನ್ನು ಕೂಡ ಏರ್ಪಾಡು ಮಾಡಲಾಗಿದೆ. ರವಿಚಂದ್ರನ್ ನಟಿಸಿರುವ ಕೆಲವು ಸಿನಿಮಾದ ಹಾಡುಗಳ ರಸದೌತಣ ಸವಿಯುವ ಅವಕಾಶ ಗಣ್ಯರಿಗೆ ಸಿಗಲಿದೆ.
ರವಿಚಂದ್ರನ್ ಮಗಳ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾದ ನಟ ಶ್ರೀಮುರಳಿ