ಬುಲೆಟ್ ಪ್ರಕಾಶ್ ಕನ್ನಡ ಚಿತ್ರರಂಗದಲ್ಲಿ ತನ್ನದೇ ಕಾಮಿಡಿ ಮ್ಯಾನರಿಸಂನಿಂದ ಗುರುತಿಸಿಕೊಂಡ ಅದ್ಭುತ ನಟ. ಒಂದು ಕಾಲದಲ್ಲಿ ಇಂಡಸ್ಟ್ರಿಯಲ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ, ಬುಲೆಟ್ ಪ್ರಕಾಶ್ , ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಛಲ ಹೊಂದಿದ್ದ ವ್ಯಕ್ತಿ. ಕನ್ನಡ ಚಿತ್ರರಂಗದಲ್ಲಿ ಬರೋಬ್ಬರಿ 25 ವರ್ಷಗಳಿಂದ ಅಭಿನಯಿಸುತ್ತಾ ಬಂದಿದ್ದ ಬುಲೆಟ್ ಪ್ರಕಾಶ್ ಇನ್ನು ನೆನಪು ಮಾತ್ರ.
ಅಷ್ಟಕ್ಕೂ ಬುಲೆಟ್ ಪ್ರಕಾಶ್ ಸಿನಿಮಾ ಇಂಡಸ್ಟ್ರಿಗೆ ಬಂದಿದ್ದು ಹೇಗೆ, ಪ್ರಕಾಶ್ ಹೆಸರಿನೊಂದಿಗೆ ಬುಲೆಟ್ ಅಂತಾ ಹೆಸರು ಇಟ್ಟವರು ಯಾರು..? ಪ್ರಕಾಶ್ಗೆ ಯಾವ ಊಟ ಇಷ್ಟ..? ಹೀಗೆ ಸಾಕಷ್ಟು ವಿಚಾರಗಳನ್ನು ಪ್ರಕಾಶ್ ಆತ್ಮೀಯ ಗೆಳೆಯ ಹಾಗೂ ರವಿಚಂದ್ರನ್ ಸಹೋದರ ಬಾಲಾಜಿ ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.
ಪ್ರಕಾಶ್ ರೈ, ಬುಲೆಟ್ ಪ್ರಕಾಶ್, ರವಿಚಂದ್ರನ್ ಬುಲೆಟ್ ಪ್ರಕಾಶ್ ಸಿನಿಮಾ ಇಂಡಸ್ಟ್ರಿಗೆ ಬರುವ ಮುನ್ನ ರವಿಚಂದ್ರನ್ ಸಹೋದರ ಬಾಲಾಜಿ ಜೊತೆ ಆತ್ಮೀಯ ಸ್ನೇಹವನ್ನೊಂದಿದ್ದರು. ಬುಲೆಟ್ ಪ್ರಕಾಶ್ನಂತ ಒಳ್ಳೆಯ ಸ್ನೇಹಿತನನ್ನು ಕಳೆದುಕೊಂಡಿದ್ದು ನಿಜಕ್ಕೂ ಬೇಸರ ತರಿಸಿದೆ ಎಂದು ಬಾಲಾಜಿ ಹೇಳಿರುವುದು ಅವರು ಎಷ್ಟು ಆತ್ಮೀಯವಾಗಿದ್ದರು ಎಂದು ಅರ್ಥವಾಗುತ್ತದೆ. ಬುಲೆಟ್ ಪ್ರಕಾಶ್ ಇಂದು ಕನ್ನಡ ಇಂಡಸ್ಟ್ರಿಗೆ ಬರಲು ನಮ್ಮ ಅಣ್ಣ ಕಾರಣ ಎಂದು ಬಾಲಾಜಿ ಹೇಳಿದ್ದಾರೆ. ಇನ್ನು ಪ್ರಕಾಶ್ಗೆ ಬುಲೆಟ್ ಎಂದು ಹೆಸರಿಟ್ಟಿದ್ದು ರವಿಚಂದ್ರನ್ ಅವರೇ. ಪ್ರಕಾಶ್ ಬಳಿ ಸಿಲ್ವರ್ ಬಣ್ಣದ ಬುಲೆಟ್ ಬೈಕ್ ಇದ್ದು, ಶೂಟಿಂಗ್‌ಗೆ ಅದೇ ಬೈಕಿನಲ್ಲಿ ಬರುತ್ತಿದ್ದ ಕಾರಣ ಅವರಿಗೆ ಆ ಹೆಸರಿಟ್ಟರಂತೆ ರವಿಚಂದ್ರನ್.
ಬುಲೆಟ್ ಪ್ರಕಾಶ್ ಬಳಸುತ್ತಿದ್ದ ಬೈಕ್ ಇನ್ನು ಬುಲೆಟ್ ಪ್ರಕಾಶ್ ಹುಟ್ಟುಹಬ್ಬಕ್ಕೆ ಬಾಲಾಜಿ ಪ್ರತಿ ವರ್ಷ ಮಿಸ್ ಮಾಡದೆ ವಿಶ್ ಮಾಡುತ್ತಿದ್ದರಂತೆ. ರವಿಚಂದ್ರನ್ ಕುಟುಂಬದಲ್ಲಿ ಪ್ರಕಾಶ್ ಒಬ್ಬರಾಗಿದ್ದರು ಎಂದು ಬಾಲಾಜಿ ಹೇಳಿಕೊಂಡಿದ್ಧಾರೆ. ಸಿನಿಮಾ ಶೂಟಿಂಗ್ ಇಲ್ಲದಿದ್ದರೂ ರವಿಚಂದ್ರನ್ ಕುಟುಂಬದೊಂದಿಗೆ ಪ್ರಕಾಶ್ ಹೆಚ್ಚು ಕಾಲ ಕಳೆಯುತ್ತಿದ್ದರು. ಇನ್ನು ಪ್ರಕಾಶ್ಗೆ ನಾನ್ವೆಜ್ ಎಂದರೆ ಬಹಳ ಇಷ್ಟ. ನಮ್ಮ ಕುಟುಂಬದವರಿಗೂ ಬುಲೆಟ್ ಪ್ರಕಾಶ್ ಕಾಟನ್ ಪೇಟೆಯಿಂದ ಮಟನ್ ಬಿರ್ಯಾನಿ, ಕಾಲು ಸೂಪು ತಂದು ಕೊಡುತ್ತಿದ್ದರು, ಏಕೆಂದರೆ ಪ್ರಕಾಶ್ ತಂದು ಕೊಡುತ್ತಿದ್ದ ಊಟ ಅಣ್ಣನಿಗೆ ಬಹಳ ಇಷ್ಟವಾಗುತ್ತಿತ್ತು ಎಂದಿದ್ದಾರೆ ಪ್ರಕಾಶ್.
ಬಾಲಾಜಿ ಅಭಿನಯಿಸಿದ್ದ ಅಹಂ ಪ್ರೇಮಾಸ್ಮಿ, ತುಂಟ ಸೇರಿ ಅನೇಕ ಸಿನಿಮಾಗಳಲ್ಲಿ ಬುಲೆಟ್ ಪ್ರಕಾಶ್ ಹಾಗೂ ಬಾಲಾಜಿ ಒಟ್ಟಿಗೆ ಅಭಿನಯಿಸಿದ್ದಾರೆ. ಪ್ರಕಾಶ್ ಅವರ ಹೊಸ ಮನೆ ಗೃಹಪ್ರವೇಶದಲ್ಲಿ ಅವರನ್ನು ಬಾಲಾಜಿ ಕಡೆ ಬಾರಿಗೆ ನೋಡಿದ್ದಂತೆ. ತೂಕ ಇಳಿಸಿಕೊಳ್ಳಲು ಸರ್ಜರಿ ಮಾಡಿಸಿಕೊಳ್ಳುತ್ತಿದ್ದೇನೆ ಎಂದಾಗ ಬಾಲಾಜಿ ಬೇಡ ಎಂದಿದ್ದರಂತೆ. ಆದರೆ ಯಾರ ಮಾತನ್ನೂ ಅವರು ಕೇಳಲಿಲ್ಲ. ಅದರಿಂದಲೇ ಅವನಿಗೆ ಸಮಸ್ಯೆಗಳು ಆರಂಭವಾಯ್ತು ಎನ್ನುತ್ತಾರೆ ಬಾಲಾಜಿ. ಪ್ರಕಾಶ್ ಒಬ್ಬ ನಟನಾಗುವುದಕ್ಕೂ ಮುನ್ನ ಅವನು ನನ್ನ ಗೆಳೆಯ ಎಂದು ನೋವಿನಿಂದ ಮಾತನಾಡಿದ್ಧಾರೆ ರವಿಚಂದ್ರನ್ ಸಹೋದರ ಬಾಲಾಜಿ.