ಯಾವಾಗ ಮಲಯಾಳಂನಲ್ಲಿ 'ದೃಶ್ಯಂ 2' ಚಿತ್ರ ಹಿಟ್ ಆಯಿತೋ, ಆ ಚಿತ್ರವೂ ಕನ್ನಡದಲ್ಲಿ ರಿಮೇಕ್ ಆಗುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆ ಎಲ್ಲರಲ್ಲಿದೆ. ಏಕೆಂದರೆ, ದೃಶ್ಯಂ ಚಿತ್ರವು ಕನ್ನಡದಲ್ಲಿ ಕೆಲವು ವರ್ಷಗಳ ಹಿಂದೆಯೇ ರಿಮೇಕ್ ಆಗಿತ್ತು. ಪಿ.ವಾಸು ನಿರ್ದೇಶನದ ಈ ಚಿತ್ರ ವಿ. ರವಿಚಂದ್ರನ್ ಅವರಿಗೆ ಮತ್ತೊಂದು ಬ್ರೇಕ್ ತಂದುಕೊಟ್ಟಿತ್ತು. ಈಗ ಅದರ ಮುಂದುವರೆದ ಭಾಗವೂ ಸಹ ಕನ್ನಡದಲ್ಲಿ ಬರಲು ತಯಾರಾಗುತ್ತಿದೆ.
'ದೃಶ್ಯ' ಚಿತ್ರವನ್ನು ನಿರ್ಮಿಸಿದ್ದ ಎ4 ಎಂಟರ್ಟೈನ್ಮೆಂಟ್ ಸಂಸ್ಥೆಯೇ ಈ ಚಿತ್ರವನ್ನೂ ಕನ್ನಡಕ್ಕೆ ರಿಮೇಕ್ ಮಾಡುತ್ತಿದೆ. ಪಿ. ವಾಸು ಅವರೇ ಮುಂದುವರೆದ ಭಾಗವನ್ನು ನಿರ್ದೇಶಿಸಲಿದ್ದಾರೆ. ಮೂಲ ಚಿತ್ರದಲ್ಲಿ ನಟಿಸಿದ್ದ ವಿ.ರವಿಚಂದ್ರನ್, ನವ್ಯ ನಾಯರ್, ಆರೋಹಿ ನಾರಾಯಣ್, ಪ್ರಭು, ಆಶಾ ಶರತ್ ಮತ್ತು ಉನ್ನತಿ ಈ ಚಿತ್ರದಲ್ಲೂ ಮುಂದುವರೆಯಲಿದ್ದಾರೆ. ಒಂದು ಪ್ರಮುಖ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ಸಹ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.