ಕರ್ನಾಟಕ

karnataka

ETV Bharat / sitara

ಕೊರೊನಾ ಅಂತ ಹೆದರಿಸಿ ಕೆಮ್ಮು ಬಂದ್ರೂ ಭಯ ಪಡುವಂತಾಗಿದೆ: ಕ್ರೇಜಿಸ್ಟಾರ್​ ಕಳವಳ

ಕೊರೊನಾ ವೈರಸ್ ನಿಮಗೆ ಬರದಂತೆ ನೋಡಿಕೊಳ್ಳಬೇಕಂದ್ರೆ ಹೊರಗಡೆ ಕೆಮ್ಮಬೇಡಿ, ನಿಮ್ಮ ಮನೆಗೆ ಹೋಗಿ ಕೆಮ್ಮಿ ಎಂದು ನಗುತ್ತಲೆ ರವಿಚಂದ್ರನ್​​ ಕೊರೊನಾ ವೈರಸ್ ಬಗ್ಗೆ ತಮಾಷೆ ಮಾಡಿದ್ದಾರೆ.

By

Published : Mar 7, 2020, 9:52 AM IST

ravichandarn speak about  Corona
ಕೊರೊನಾ ಅಂತ ಹೆದರಿಸಿ ಕೆಮ್ಮು ಬಂದ್ರೂ ಭಯ ಆಗ್ಬಿಟ್ಟಿದೆ : ರವಿಚಂದ್ರನ್​​​​

ಇಡೀ ವಿಶ್ವವೇ ಮಾರಕ ವೈರಸ್ ಕೊರೊನಾಗೆ ಬೆಚ್ಚಿಬಿದ್ದಿದೆ. ಅದ್ರೆ ಈ ಕೊರೊನಾ ವೈರಸ್ ತಡೆಗಟ್ಟಲು ಕ್ರೇಜಿಸ್ಟಾರ್ ರವಿಚಂದ್ರನ್ ಒಂದು ಸರಳ ಟಿಪ್ಸ್ ಕೊಟ್ಟಿದ್ದಾರೆ.

ಹೌದು ಕೊರೊನ‌ ವೈರಸ್ ನಿಮಗೆ ಬರದಂತೆ ನೋಡಿಕೊಳ್ಳಬೇಕು ಎಂದರೆ ಹೊರಗಡೆ ಕೆಮ್ಮಬೇಡಿ, ನಿಮ್ಮ ಮನೆಗೆ ಹೋಗಿ ಕೆಮ್ಮಿ ಎಂದು ನಗುತ್ತಲೆ ಕೊರೊನಾ ವೈರಸ್ ಬಗ್ಗೆ ತಮಾಷೆ ಮಾಡಿದ್ದಾರೆ. ಇನ್ನು ಕೊರೊನಾ ವೈರಸ್ ಕೊರೊನಾ ವೈರಸ್ ಎಂದು ನಮ್ಮನ್ನ ಹೆದರಿಸಿ, ಕೆಮ್ಮು ಬಂದ್ರೆ ಹೆದರುವಂತೆ ಮಾಡಿದ್ದಾರೆ. ನೀವು ಅದ್ರ ಬಗ್ಗೆ ಮಾತನಾಡೋದನ್ನ ಮೊದಲು ಬಿಡಿ. ಅದ್ರ ಪಾಡಿಗೆ ಅದು ಹೋಗುತ್ತೆ.

ಕೊರೊನಾ ಅಂತ ಹೆದರಿಸಿ ಕೆಮ್ಮು ಬಂದ್ರೂ ಭಯ ಆಗ್ಬಿಟ್ಟಿದೆ : ರವಿಚಂದ್ರನ್​​​​

ಕೊರೊನ ವಿಚಾರವಾಗಿ ಜ್ಯೋತಿಷಿಗಳ ಬಗ್ಗೆ ವ್ಯಂಗ್ಯವಾಡಿದ ರವಿಮಾಮ, ದಿನ ಬೆಳಗ್ಗೆ ಆದ್ರೆ ಜ್ಯೋತಿಷ್ಯ ಹೇಳಿ ನೀನು 100 ವರ್ಷ ಬದುಕ್ತಿಯಾ 200 ವರ್ಷ ಬದುಕುತ್ತೀಯಾ ಅಂತ ಹೇಳ್ತಾರಲ್ಲ ಅವ್ರನ್ನ ಕೇಳಿ ಈಗ, ನೂರು ನೂರು ಜನ ಒಟ್ಟಿಗೆ ಸಾಯ್ತಿದ್ದಾರೆ ಕೊರೊನಾ ವೈರಸ್​​ಗೆ ಏನು ಮಾಡಬೇಕು ಎಂದು ಕೇಳಿ ಅಂತಾ ರವಿಚಂದ್ರನ್ ಹೇಳಿದ್ದಾರೆ.

ಈಗ ಈ ವೈರಸ್ ತುಂಬಾ ಡಾಮಿನೇಟ್ ಆಗಿದ್ರೆ ಅಂದ್ರೆ ಅದಕ್ಕೆ ಸೋಷಿಯಲ್ ಮೀಡಿಯಾನೆ ಕಾರಣ. ಇದನ್ನೆಲ್ಲ ಬಿಟ್ಟು ಲೈಫ್​ನ ಎಂಜಾಯ್ ಮಾಡಿ. ನಾಳೆ ಕೊರೊನಾ ವೈರಸ್​ಗಿಂತ ಭೀಕರವಾದ ವೈರಸ್ ಬರಬಹುದು. ಅವು ಬಂದ್ರೆ ತಳ್ಳಿಕೊಂಡು ಮುಂದೆ ನುಗ್ಗಿ ಎಂದು ಸಲಹೆ ನೀಡಿದ್ದಾರೆ.

ABOUT THE AUTHOR

...view details