ಬಿಗ್ಬಾಸ್ ಮನೆ ಪ್ರವೇಶಿಸಿದ 38 ಗಂಟೆಯೊಳಗೆ ಹೊರ ಬಂದಿದ್ದ ರವಿ ಬೆಳಗೆರೆ ಮತ್ತೆ ದೊಡ್ಡ ಮನೆ ಪ್ರವೇಶಿಸಲು ರೆಡಿಯಾಗಿದ್ದಾರೆ.
ಈ ಬಗ್ಗೆ ಈಟಿವಿ ಭಾರತ್ಗೆ ಮಾಹಿತಿ ನೀಡಿರುವ ರವಿ ಬೆಳಗೆರೆ ಮಗಳು ಭಾವನಾ ಬೆಳಗೆರೆ, ನಮ್ಮ ತಂದೆ ನಿದ್ದೆಗಣ್ಣಿನಲ್ಲಿ ಟಾಯ್ಲೆಟ್ಗೆ ಹೋಗುವಾಗ ಜಾರಿ ಬಿದ್ದಿದ್ದಾರೆ. ನಂತರ ಅವರೇ ಎದ್ದು ಆಂಬುಲೆನ್ಸ್ ಕಳುಹಿಸಿ ಎಂದು ಕೇಳಿದ್ದಾರೆ. ಡಾಕ್ಟರ್ ಚೆಕಪ್ ಮಾಡಿ ಮನೆಗೆ ಕಳುಹಿಸಿದ್ದರು. ಶುಗರ್ ಲೆವೆಲ್ ಪರೀಕ್ಷಿಸಿರುವ ವೈದ್ಯರು, ಬಿಗ್ಬಾಸ್ ಮನೆಗೆ ಹೋಗಬಹುದು ಎಂದು ಹೇಳಿದ್ದಾರೆ. ಹೀಗಾಗಿ ನಮ್ಮ ತಂದೆ ಹೊರಡಲು ರೆಡಿಯಾಗಿದ್ದಾರೆ ಎಂದು ಭಾವನಾ ಬೆಳಗೆರೆ ತಿಳಿಸಿದ್ದಾರೆ.