ಬೆಂಗಳೂರು: ಈಗಾಗಲೇ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ನೆರವಿಗೆ ಅನೇಕ ಜನರು ಸಹಾಯ ಮಾಡಿದ್ದು, ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಅಭಿನಯದ ಹೊಸ ಚಿತ್ರ 'ರವಿ ಬೋಪಣ್ಣ' ಚಿತ್ರತಂಡ ಇದೀಗ ನೆರೆ ಸಂತ್ರಸ್ತರ ನೆರವಿಗೆ ಮುಂದಾಗಿದೆ.
ನೆರೆ ಸಂತ್ರಸ್ತರಿಗೆ ನೆರವಾಗುತ್ತಿರುವ ಕ್ರೇಜಿಸ್ಟಾರ್ ಹೊಸ ಸಿನಿಮಾ ತಂಡ... ಏನೆಲ್ಲಾ ಕೊಡ್ತಿದ್ದಾರೆ? - ಕ್ರೇಜಿಸ್ಟಾರ್ ರವಿಚಂದ್ರನ್
ಈಗಾಗಲೇ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ನೆರವಿಗೆ ಅನೇಕ ಜನರು ಸಹಾಯ ಮಾಡಿದ್ದು, ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಅಭಿನಯದ ಹೊಸ ಚಿತ್ರ 'ರವಿ ಬೋಪಣ್ಣ' ಚಿತ್ರತಂಡ ಇದೀಗ ನೆರೆ ಸಂತ್ರಸ್ತರ ನೆರವಿಗೆ ಮುಂದಾಗಿದೆ.
ನೆರೆ ಸಂತ್ರಸ್ತರ ನೇರವಿಗೆ ಮುಂದಾದ 'ರವಿ ಬೋಪಣ್ಣ' ಚಿತ್ರತಂಡ
ಈ ಕುರಿತಂತೆ ಮಾತನಾಡಿದ ರವಿಚಂದ್ರನ್, ನೀರು, ಬಿಸ್ಕತ್, ಜ್ಯೂಸ್, ಅಕ್ಕಿ, ಬೆಡ್ ಶೀಟ್ ಸೇರಿದಂತೆ ಆಹಾರ ಪದಾರ್ಥಗಳು ಸಿದ್ದವಾಗಿದ್ದು ಇಂದು ವಸ್ತುಗಳನ್ನು ಉತ್ತರ ಕರ್ನಾಟಕದ ಜನತೆಗೆ ತಲುಪಿಸಲಾಗುತ್ತದೆ. ನಮ್ಮ ಸರ್ಕಾರ ಅಗತ್ಯವಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುಬೇಕಿದೆ. ನೆರೆ ಸಂತ್ರಸ್ತರಿಗೆ ನಾವು ಹಣವನ್ನು ಕೊಡುವುದಿಲ್ಲ, ಬದಲಾಗಿ ಆಹಾರ ಸಾಮಗ್ರಿಗಳು ಹಾಗೂ ಉಪಯುಕ್ತ ವಸ್ತುಗಳನ್ನು ನಮ್ಮ 'ರವಿ ಬೋಪಣ್ಣ' ಚಿತ್ರತಂಡದಿಂದ ಕೊಡುತ್ತಿದ್ದೇವೆ ಎಂದು ತಿಳಿಸಿದರು.