ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋಗೆ ಯಾರೆಲ್ಲ ಸೆಲೆಕ್ಟ್ ಆಗಿದ್ದಾರೆ. ಬಿಗ್‌ಬಾಸ್ ಮನೆಗೆ ಯಾರೆಲ್ಲ ಹೋಗ್ತಾರೆ ಅನ್ನೋ ಊಹಾಪೋಹಗಳು ಈಗಾಗ್ಲೇ ಸಾಕಷ್ಟು ಹರಿದಾಡುತ್ತಿದ್ದವು. ಇದರ ಮಧ್ಯೆ ಹಿರಿಯ ಪತ್ರಕರ್ತ ರವಿ ಬೆಳಗೆರೆ ಬಿಗ್ ಬಾಸ್ಗೆ ಎಂಟ್ರಿ ಕೊಡ್ತಾರೆ ಅನ್ನೋ ವದಂತಿನೂ ಇತ್ತು.. ಇದೀಗ ಅದು ನಿಜವಾಗಿದೆ.
ಸ್ವತಃ ಕಲರ್ಸ್ ಕನ್ನಡ ಚಾನೆಲ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಾಕಿ "ಆ ಲೀಕ್, ಈ ಲೀಕ್ ನಂಬ್ತೀರಲ್ಲಾ.. ತೊಗೊಳಿ ನಮ್ ಕಡೆಯಿಂದಾನೇ ಒಂದು! ಫಸ್ಟ್ ಟೈಮ್ ಎವರ್, ಬಿಗ್‌ಬಾಸ್ ಮನೆಯಲ್ಲಿ ಬೆಳೆಗೆರೆ ಪ್ರತಾಪ!" ಎಂದು ಬರೆದುಕೊಂಡಿದೆ. ಈ ವಿಡಿಯೋದಲ್ಲಿ ರವಿ ಬೆಳಗೆರೆ ಮತ್ತು ಕುರಿ ಪ್ರತಾಪ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.