ಕರ್ನಾಟಕ

karnataka

ETV Bharat / sitara

300 ಮಕ್ಕಳಿರುವ ಸಿನಿಮಾ 'ಗಿರ್ಮಿಟ್​': ಚಿತ್ರೀಕರಣದ  ಬಗ್ಗೆ ರವಿ ಬಸ್ರೂರು ಹೇಳಿದ್ದೇನು? - kannada movie girmit

ಸುಮಾರು 300 ಮಕ್ಕಳನ್ನು ಬಳಸಿಕೊಂಡು ನಿರ್ದೇಶಕ ರವಿ ಬಸ್ರೂರು ಗಿರ್ಮಿಟ್​ ಸಿನಿಮಾ ಮಾಡಿದ್ದಾರೆ. ಈ ಸಿನಿಮಾದ ಟ್ರೇಲರ್​ ರಿಲೀಸ್​ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇನ್ನು ಸಿನಿಮಾ ಶೂಟಿಂಗ್​ ಬಗ್ಗೆ ನಿರ್ದೇಶಕರು ಮಾಹಿತಿ ಹಂಚಿಕೊಂಡಿದ್ದಾರೆ.

300 ಮಕ್ಕಳಿರುವ ಸಿನಿಮಾ 'ಗಿರ್ಮಿಟ್​'

By

Published : Oct 27, 2019, 2:40 PM IST

'ಕೆಜಿಎಫ್'​ ಸಿನಿಮಾದಲ್ಲಿ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿರುವ ರವಿ ಬಸ್ರೂರ್ 'ಗಿರ್ಮಿಟ್' ಎಂಬ ಮಕ್ಕಳ ಕಮರ್ಷಿಯಲ್ ಚಿತ್ರ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಟ್ರೇಲರ್​​ ಬಿಡುಗಡೆಯಾಗಿದ್ದು ಮಕ್ಕಳ ಕೀಟಲೆ, ಕಲರವ ಬಲು ಜೋರಾಗಿದೆ.

ಗಿರ್ಮಿಟ್​​ ಸಿನಿಮಾ ನಿರ್ಮಾಣ ಮತ್ತು ತಯಾರಿ ಬಗ್ಗೆ ಮಾತನಾಡಿದ ನಿರ್ದೇಶಕ ರವಿ ಬಸ್ರೂರು, ಸಿನಿಮಾದಲ್ಲಿ ಸುಮಾರು 300 ಮಕ್ಕಳನ್ನು ಬಳಸಿಕೊಳ್ಳಲಾಗಿದೆ. ಸಣ್ಣ ಮಕ್ಕಳನ್ನು ಸಂಭಾಳಿಸುವುದು ಶೂಟಿಂಗ್​ ವೇಳೆ ಸ್ವಲ್ಪ ಕಷ್ಟವಾಯಿತು. ಫೈಟಿಂಗ್​​ ಮಾಡಲು ಕರಾಟೆಯಲ್ಲಿ ತರಬೇತಿ ಪಡೆದ ಮಕ್ಕಳನ್ನು ಬಳಸಲಾಗಿದೆ ಎಂದರು.

ಈ ಸಿನಿಮಾ ಮಾಡಲು ಪ್ರೇರಣೆ ನೀಡಿದ್ದು ಡ್ರಾಮ ಜೂನಿಯರ್​​ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ಮಕ್ಕಳು ಅಭಿನಯಿಸುವುದನ್ನು ನೋಡಿ ಸಿನಿಮಾ ಮಾಡುವ ಪ್ಲಾನ್​​ ಬಂತು. ಈ ಬಗ್ಗೆ ನಿರ್ಮಾಪಕ ರಾಜ್​ಕುಮಾರ್​ ಬಳಿ ಹೇಳಿದಾಗ ಒಪ್ಪಿಗೆ ಸೂಚಿಸಿದರು ಎಂದು ಬಸ್ರೂರು ಹೇಳಿದ್ರು.

'ಗಿರ್ಮಿಟ್'​ ಸಿನಿಮಾದಲ್ಲಿ ಉಡುಪಿಯ ಆಶ್ಲೇಷ್ ಲೀಡ್ ರೋಲ್ ಪ್ಲೇ ಮಾಡಿದ್ದು, ಈ ಪಾತ್ರಕ್ಕೆ ಯಶ್ ಡಬ್ಬಿಂಗ್ ಮಾಡಿದ್ದಾರೆ. ಇನ್ನೂ ನಾಯಕಿ ಪಾತ್ರದಲ್ಲಿ ಶಾಲ್ಗ ಅಭಿನಯಿಸಿದ್ದಾರೆ. ಶಾಲ್ಗಳ ಪಾತ್ರಕ್ಕೆ ರಾಧಿಕಾ ಪಂಡಿತ್ ವಾಯ್ಸ್​​​​ ಡಬ್ ಮಾಡಿದ್ದಾರೆ. ಗಿರ್ಮಿಟ್​ ಸಿನಿಮಾ ತೆಲುಗು, ಹಿಂದಿ, ಮಲೆಯಾಳಂ ಹಾಗೂ ಇಂಗ್ಲೀಷ್​​ನಲ್ಲಿಯೂ ಅವತರಣಿಕೆಯಲ್ಲೂ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಗಿರ್ಮಿಟ್​ ಸಿನಿಮಾ ಬಗ್ಗೆ ಚಿತ್ರ ತಂಡದ ಮಾತು

ಈ ಚಿತ್ರ ಸೆನ್ಸಾರ್​​​ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಪಡೆದಿದೆ. ಅಲ್ಲದೆ ಇದೇ ನವಂಬರ್ 8 ಕ್ಕೆ ರಿಲೀಸ್ ಮಾಡಲು ನಿರ್ಮಾಪಕ ರಾಜ್ ಕುಮಾರ್ ನಿರ್ಧರಿಸಲಾಗಿದೆ. ಒಟ್ಟಾರೆ ಒಂದೇ ಸಿನಿಮಾದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕ ಪಂಡಿತ್ ಸೇರಿದಂತೆ ಹಲವು ಪ್ರಮುಖ ನಟರ ಧ್ವನಿ ಕೇಳಲಿದೆ.

ABOUT THE AUTHOR

...view details