ಮೈಸೂರು : ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ದಮ್ಮನಕಟ್ಟೆ ಅರಣ್ಯ ಪ್ರದೇಶದಲ್ಲಿ ಬಾಲಿವುಡ್ ನಟಿ ರವೀನಾ ಟಂಡನ್ ಸಫಾರಿ ನಡೆಸಿದ್ದು ಆ ಫೋಟೋ ಈಗಾ ವೈರಲ್ ಆಗಿದೆ.
ನಾಗರಹೊಳೆ ಅರಣ್ಯದಲ್ಲಿ ಬಾಲಿವುಡ್ ತಾರೆ ರವೀನಾ ಟಂಡನ್! - raveena tandan
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ದಮ್ಮನಕಟ್ಟೆ ಅರಣ್ಯ ಪ್ರದೇಶದಲ್ಲಿ ಬಾಲಿವುಡ್ ನಟಿ ರವೀನಾ ಟಂಡನ್ ಸಫಾರಿ ನಡೆಸಿದ್ದಾರೆ.
ನಾಗರಹೊಳೆ ಅರಣ್ಯದಲ್ಲಿ ಬಾಲಿವುಡ್ ತಾರೆ ರವೀನಾ ಟಂಡನ್!
ಕೆಜಿಎಫ್-2 ಚಿತ್ರಿಕರಣದಲ್ಲಿ ಭಾಗವಹಿಸಲು ಮೈಸೂರಿಗೆ ಬಂದಿರುವ ಬಾಲಿವುಡ್ ನಟಿ ರವೀನಾ ಟಂಡನ್, ಹೆಚ್.ಡಿ ಕೋಟೆ ತಾಲೂಕಿನ ಕಾರಾಪುರ ಬಳಿ ಇರುವ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದು, ಬಿಡುವಿನ ವೇಳೆಯಲ್ಲಿ ಕಬಿನಿ ಹಿನ್ನೀರಿನಲ್ಲಿ ಬರುವ ದಮ್ಮನಕಟ್ಟೆ ಸಫಾರಿ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯ ಸಫಾರಿ ಜೀಪ್ನಲ್ಲಿ ಸಫಾರಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ವನ್ಯಜೀವಿಗಳಾದ ಹುಲಿ, ಆನೆ, ಜಿಂಕೆ ಹಾಗೂ ಚಿರತೆ ನೋಡಿ ಆನಂದಿಸಿದ್ದಾರೆ. ಈ ಸಂದರ್ಭದಲ್ಲಿ ಸಫಾರಿಗೆ ಬಂದಿದ್ದ ಕೆಲವು ಪ್ರವಾಸಿಗರು ರವೀನಾ ಟಂಡನ್ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ.