ಕರ್ನಾಟಕ

karnataka

ETV Bharat / sitara

ಡಾಲಿಯ 'ರತ್ನನ್ ಪ್ರಪಂಚ' ನೋಡಲು ಮುಗಿಬಿದ್ದ ಲಕ್ಕುಂಡಿ ಜನ.. ಅಭಿಮಾನಿಗಳಿಗೆ ಕೈಬೀಸಿದ ಅಲ್ಲಮ.. - ಕನ್ನಡ ಸಿನಿಮಾ ಸುದ್ದಿ

ಇಂದು ರವಿವಾರ ಬೇರೆ, ಶೂಟಿಂಗ್ ನೋಡಲು ಜನ ಮುಗಿಬಿದ್ದಿದ್ದರು‌‌. ಅಲ್ಲದೆ ಶೂಟಿಂಗ್​ನ ತುಣುಕುಗಳನ್ನು ವಿಡಿಯೋ ಮಾಡಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡ್ತಿರೋದಕ್ಕೆ ಚಿತ್ರತಂಡಕ್ಕೆ ಬೇಸರ ತಂದಿದೆ..

ratnan-prapancha-film-shooting-going-on-in-lakkundi
ರತ್ನನ್ ಪ್ರಪಂಚ

By

Published : Jan 31, 2021, 8:54 PM IST

ಗದಗ : ಜಿಲ್ಲೆಯ ಐತಿಹಾಸಿಕ ಸ್ಥಳ ಲಕ್ಕುಂಡಿಯಲ್ಲಿ ಎರಡು ದಿನಗಳಿಂದ ನಟ ಡಾಲಿ ಧನಂಜಯ್​ ಅಭಿಯನದ ರತ್ನನ್​​ ಪ್ರಪಂಚ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ನಟ ಡಾಲಿ ಧನಂಜಯ್‌ ಹಾಗೂ ಶೂಟಿಂಗ್​ ನೋಡಲು ಜನರು ಮುಗಿಬೀಳುತ್ತಿದ್ದಾರೆ.

ಡಾಲಿಯ 'ರತ್ನನ್ ಪ್ರಪಂಚ' ನೋಡಲು ಮುಗಿಬಿದ್ದ ಲಕ್ಕುಂಡಿ ಜನ..

ಲಕ್ಕುಂಡಿ ಗ್ರಾಮದಲ್ಲಿ ಒಂದು ವಾರಗಳ ಕಾಲ ಶೂಟಿಂಗ್ ನಡೆಯುತ್ತಿದೆ. ನಟ ಧನಂಜಯ ಲಕ್ಕುಂಡಿಯಲ್ಲಿ ಬೀಡು ಬಿಟ್ಟಿದ್ದಾರೆ. ಗ್ರಾಮದ ಇಕ್ಕೆಲ, ಬೀದಿಗಳಲ್ಲಿ ಜಾತ್ರೆಯ ಸೆಟ್​​​​ ಹಾಕಲಾಗಿದೆ. ಸಿನಿಮಾದ ಹಾಡೊಂದಕ್ಕೆ ಧನಂಜಯ ಸ್ಟೆಪ್ ಹಾಕುತ್ತಿದ್ದರೆ ಜನ ಸಿಳ್ಳೆ ಚಪ್ಪಾಳೆ ತಟ್ಟುತ್ತಿದ್ದರು‌.

ಇಂದು ರವಿವಾರ ಬೇರೆ, ಶೂಟಿಂಗ್ ನೋಡಲು ಜನ ಮುಗಿಬಿದ್ದಿದ್ದರು‌‌. ಅಲ್ಲದೆ ಶೂಟಿಂಗ್​ನ ತುಣುಕುಗಳನ್ನು ವಿಡಿಯೋ ಮಾಡಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡ್ತಿರೋದಕ್ಕೆ ಚಿತ್ರತಂಡಕ್ಕೆ ಬೇಸರ ತಂದಿದೆ.

ಇನ್ನು, ಇಷ್ಟುದಿನ ಹಲವು ಸಿನಿಮಾಗಳಲ್ಲಿ ಮಾಸ್‌ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಡಾಲಿ ಈಗ 'ರತ್ನನ್‌ ಪಪಂಚ' ಸಿನಿಮಾದಲ್ಲಿ ಸಖತ್‌ ಕ್ಲಾಸ್‌ ಆಗಿ ಕಾಣಿಸುತ್ತಿದ್ದಾರೆ. ಚಿತ್ರದಲ್ಲಿ ಧನಂಜಯ ಇನ್ಶೂರೆನ್ಸ್ ಏಜೆಂಟ್‌ ಪಾತ್ರ ಮಾಡುತ್ತಿದ್ದಾರೆ.

ABOUT THE AUTHOR

...view details