ಕರ್ನಾಟಕ

karnataka

ETV Bharat / sitara

ಕೆಲಸದಲ್ಲಿ ಬ್ಯುಸಿಯಾದ ರಶ್ಮಿಕಾ ಆರು ತಿಂಗಳಿಂದ ಮನೆಗೆ ಹೋಗಿಲ್ವಂತೆ

ದಕ್ಷಿಣ ಭಾರತದ​ ಸಿನಿಮಾ ಇಂಡಸ್ಟ್ರಿಯಲ್ಲಿ ಸದ್ಯ ಬ್ಯುಸಿ ಶೆಡ್ಯೂಲ್​ನಲ್ಲಿ ಇರೋರಂದ್ರೆ​ ನಟಿ ರಶ್ಮಿಕಾ ಮಂದಣ್ಣ. ಹಲವಾರು ಸಿನಿಮಾಗಳನ್ನು ಕೈಯ್ಯಲ್ಲಿ ಇಟ್ಟುಕೊಂಡಿರುವ ನಟಿ ತನ್ನ ಮನೆಗೆ ತೆರಳದೆ ಸುಮಾರು ಆರು ತಿಂಗಳೇ ಕಳೆದಿದೆಯಂತೆ.

By

Published : Jun 23, 2021, 10:00 AM IST

ರಶ್ಮಿಕಾ
ರಶ್ಮಿಕಾ

ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಮತ್ತು ಬಹು ಬೇಡಿಕೆಯ ನಟಿಯರ ಸಾಲಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ಇದ್ದಾರೆ. ತೆಲುಗು, ತಮಿಳಷ್ಟೇ ಅಲ್ಲ, ಹಿಂದಿಯಲ್ಲೂ ಬ್ಯುಸಿಯಾಗಿರುವ ರಶ್ಮಿಕಾ, ಬಾಲಿವುಡ್​ನಲ್ಲೂ ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ

ಇದೆಲ್ಲದರಿಂದ ರಶ್ಮಿಕಾಗೆ ಮನೆಗೆ ಹೋಗುವ ಅವಕಾಶವೇ ಸಿಗುತ್ತಿಲ್ಲವಂತೆ. ತಂದೆ-ತಾಯಿಯನ್ನು ಭೇಟಿಯಾಗುವುದಕ್ಕೆ ಸಾಧ್ಯವಾಗುತ್ತಿಲ್ಲವಂತೆ. ಕಳೆದ ವರ್ಷ ಲಾಕ್​ಡೌನ್ ಮುಗಿಸಿ ವಾಪಸ್ ಕೆಲಸಕ್ಕೆ ಹೊರಟ ರಶ್ಮಿಕಾ, ಅಲ್ಲಿಂದ ಇಲ್ಲಿಯವರೆಗೂ ತಮ್ಮ ತಂದೆ-ತಾಯಿಯನ್ನು ನೋಡಿಲ್ಲ ಎಂದರೆ ಆಶ್ಚರ್ಯವಾಗಬಹುದು. ಹಾಗಂತ ಅವರೇ ಹೇಳಿಕೊಂಡಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ

ಇತ್ತೀಚೆಗೆ ರಶ್ಮಿಕಾ ಅವರ ಅಪ್ಪ-ಅಮ್ಮನ ಮದುವೆ ವಾರ್ಷಿಕೋತ್ಸವ ಇತ್ತು. ಈ ಸಂದರ್ಭದಲ್ಲಿ ಇನ್ಸ್​ಟಾಗ್ರಾಂನಲ್ಲಿ ಪೋಸ್ಟ್ ಹಾಕಿರುವ ಅವರು, ಆ್ಯನಿವರ್ಸರಿಗೆ ಖುದ್ದು ಹಾಜರಾಗುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಆ ಪೋಸ್ಟ್ ಮೂಲಕವೇ ಅಪ್ಪ-ಅಮ್ಮನಿಗೆ ಶುಭ ಕೋರಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ

ನಾನು ನಿಮ್ಮನ್ನು ನೋಡಿದ್ದು ಕಳೆದ ವರ್ಷದ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಿನಲ್ಲಿ. ಅಲ್ಲಿಂದ ನಿಮ್ಮನ್ನು ಮುಖತಃ ನೋಡುವುದಕ್ಕೆ, ಮಾತಾಡಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಪ್ರತಿ ಸಲವೂ ನಾನು ಮನೆಗೆ ಬರಬೇಕು ಎನ್ನುವಾಗ, ಒಂದೋ ಲಾಕ್​ಡೌನ್ ಇರುತ್ತದೆ, ಇಲ್ಲ ಶೂಟಿಂಗ್ ಶುರುವಾಗಿರುತ್ತದೆ. ನಿಮ್ಮನ್ನೆಲ್ಲ ಬಹಳ ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಿಮ್ಮೆಲ್ಲರ ಜತೆಗಿನ ಒಂದೊಳ್ಳೆಯ ಫೋಟೋ ಸಹ ನನ್ನ ಹತ್ತಿರ ಇಲ್ಲ. ಹ್ಯಾಪಿ ಆ್ಯನಿವರ್ಸರಿ ಎಂದು ರಶ್ಮಿಕಾ ಶುಭ ಹಾರೈಸಿದ್ದಾರೆ.

ABOUT THE AUTHOR

...view details