ಮೆಗಾಸ್ಟಾರ್ ಚಿರಂಜೀವಿ ಸೊಸೆ ಉಪಾಸನಾ ಕೊನಿಡೇಲ ಅಪೊಲೋ ಫೌಂಡೇಷನ್ ಉಪಾಧ್ಯಕ್ಷೆಯಾಗಿ ಕೆಲಸ ಮಾಡುತ್ತಿರುವುದು ತಿಳಿದ ವಿಚಾರ. ಇದರೊಂದಿಗೆ ಅವರು ಹೆಲ್ತ್ ಮ್ಯಾಗಜಿನ್ ಹಾಗೂ ವೆಬ್ಸೈಟ್ಗೆ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ.
ಉಪಾಸನಾ ಆರಂಭಿಸಿರುವ UrLife.co.in.ವೆಬ್ಸೈಟ್ನಲ್ಲಿ ಆಯ್ದ ಕ್ಷೇತ್ರಗಳ ನುರಿತ ಪರಿಣಿತರು, ವೈದ್ಯರು ಹಾಗೂ ಇನ್ನಿತರರು ಸದ್ಯದ ಲೈಫ್ಸ್ಟೈಲ್, ತಂತ್ರಜ್ಞಾನ, ಬಹಳ ಮುಖ್ಯವಾಗಿ ಆರೋಗ್ಯದ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ. ಇದರೊಂದಿಗೆ ಅತ್ಯುತ್ತಮವಾದ ಡಯಟ್ ಟಿಪ್ಸ್, ವ್ಯಾಯಾಮ, ಆರೋಗ್ಯಕ್ಕೆ ಸಂಬಂಧಿಸಿದ ಇನ್ನಿತರ ಮಾಹಿತಿಗಳನ್ನು ನೀಡಲಿದ್ದಾರೆ. ಈ ದೀಪಾವಳಿ ಹಬ್ಬದ ವಿಶೇಷವಾಗಿ ರಶ್ಮಿಕಾ ಮಂದಣ್ಣ ಗೆಸ್ಟ್ ಎಡಿಟರ್ ಆಗಿ ಬರುತ್ತಿದ್ದಾರೆ. ಕಳೆದ ಬಾರಿ ಸಮಂತಾ ಅಕ್ಕಿನೇನಿ ಅವರನ್ನು ಉಪಾಸನಾ ಗೆಸ್ಟ್ ಎಡಿಟರ್ ಆಗಿ ಆಹ್ವಾನಿಸಿದ್ದರು.