ಕನ್ನಡದ ಕ್ರಶ್ ಆಗಿದ್ದ ರಶ್ಮಿಕಾ ಮಂದಣ್ಣ ಇದೀಗ ತೆಲುಗು ನೆಲದಲ್ಲಿ ಭರ್ಜರಿಯಾಗಿ ಮಿಂಚುತ್ತಿದ್ದಾರೆ. ಒಂದಾದ ಮೇಲೆ ಮತ್ತೊಂದು ಸಿನಿಮಾಗಳಲ್ಲಿ ನಟಿಸುತ್ತಿರುವ ಕಿರಿಕ್ ಹುಡುಗಿ 'ಸರಿಲೇರು ನೀಕೆವ್ವರು' ಸಿನಿಮಾ ನಂತ್ರ ಇದೀಗ ತೆಲುಗು ಸ್ಟಾರ್ ನಿತಿನ್ ಅಭಿನಯದ 'ಭೀಷ್ಮ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ಇನ್ನು ಭೀಷ್ಮ ಶೂಟಿಂಗ್ನಲ್ಲಿರುವ ರಶ್ಮಿಕಾ ಮತ್ತು ನಿತಿನ್ ಮಸ್ತ್ ಮಜಾ ಮಾಡುತ್ತಿದ್ದಾರೆ. ಇದೇ ವೇಳೆ ಬಿಡುವ ಮಾಡಿಕೊಂಡು ಹೃತಿಕ್ ರೋಶನ್ ಅಭಿನಯದ 'ವಾರ್' ಸಿನಿಮಾದ ಗುಂಗುರೂ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ. ಈ ವಿಡಿಯೋವನ್ನು ರಶ್ಮಿಕಾ ಮಂದಣ್ಣ ತಮ್ಮ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.