ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ ಸಿನಿಮಾಗಳಲ್ಲಿ ಕೂಡಾ ನಟಿಸುತ್ತಿದ್ದಾರೆ. ಸಿದ್ದಾರ್ಥ್ ಮಲ್ಹೋತ್ರಾ ಜೊತೆ ಮಿಷನ್ ಮಜ್ನು ಹಾಗೂ ಅಮಿತಾಬ್ ಪುತ್ರಿಯಾಗಿ ಇನ್ನೂ ಹೆಸರಿಡದ ಸಿನಿಮಾವೊಂದರಲ್ಲಿ ನಟಿಸುವ ಮೂಲಕ ಬಾಲಿವುಡ್ ಅಂಗಳಕ್ಕೂ ಕಾಲಿಟ್ಟಿದ್ದಾರೆ. ಈ ನಡುವೆ ರಶ್ಮಿಕಾ ಹೆಜ್ಜೆ ಹಾಕಿರುವ ಹಿಂದಿಯ ಮೊದಲ ಆಲ್ಬಂ 'ಟಾಪ್ ಟಕ್ಕರ್' ಇಂದು ರಿಲೀಸ್ ಆಗಿದೆ.
'ಟಾಪ್ ಟಕ್ಕರ್'ನಲ್ಲಿ ರಶ್ಮಿಕಾದ್ದೇ ಹವಾ...ವಿವಿಧ ಕಾಸ್ಟ್ಯೂಮ್ನಲ್ಲಿ ಕಣ್ಮನ ಸೆಳೆದ ನ್ಯಾಷನಲ್ ಕ್ರಷ್ - Rapper Badshah new album
ರಶ್ಮಿಕಾ ಮಂದಣ್ಣ ಹೆಜ್ಜೆ ಹಾಕಿರುವ ಮೊದಲ ಹಿಂದಿ ಆಲ್ಬಂ 'ಟಾಪ್ ಟಕ್ಕರ್' ವಿಡಿಯೋ ಹಾಡು ಬಿಡುಗಡೆಯಾಗಿದೆ. ರಿಲೀಸ್ ಆದ ಒಂದು ಗಂಟೆ ಅವಧಿಯಲ್ಲೇ ಸುಮಾರು 4 ಲಕ್ಷಕ್ಕೂ ಹೆಚ್ಚು ಮಂದಿ ಈ ಆಲ್ಬಂ ನೋಡಿದ್ದಾರೆ.
ಇದನ್ನೂ ಓದಿ:ಮ್ಯೂಸಿಕ್ ವಿಡಿಯೋ ಮೂಲಕ ರಂಜಿಸಲಿದ್ದಾರೆ ಗೀತಾ ಭಾರತಿ
YRF ಯೂಟ್ಯೂಬ್ ಚಾನೆಲ್ನಲ್ಲಿ ಈ ಆಲ್ಬಂ ಬಿಡುಗಡೆಯಾಗಿದ್ದು ರಿಲೀಸ್ ಆಗಿ 1 ಗಂಟೆ ಒಳಗೆ ಸುಮಾರು 4 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಬಾಲಿವುಡ್ನ ಫೇಮಸ್ ರ್‍ಯಾಪರ್ ಬಾದ್ ಷಾ, ಉಚಾನಾ ಅಮಿತ್, ರಶ್ಮಿಕಾ ಮಂದಣ್ಣ ಮಂದಣ್ಣ ಹಾಗೂ ಸಂಗಡಿಗರು ಈ ಟಾಪ್ ಟಕ್ಕರ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇದು ರಶ್ಮಿಕಾ ಅವರ ಬಾಲಿವುಡ್ ಮೊದಲ ಆಲ್ಬಂ ಆಗಿದ್ದು ಮೊದಲ ಬಾರಿಗೆ ಬಾಲಿವುಡ್ಗೆ ಎಂಟ್ರಿ ನೀಡಿರುವುದಕ್ಕೆ ರಶ್ಮಿಕಾ ಕೂಡಾ ಬಹಳ ಎಕ್ಸೈಟ್ ಆಗಿದ್ದರು. ಚಂಢೀಘಡದಲ್ಲಿ ಈ ಆಲ್ಬಂ ಚಿತ್ರೀಕರಣ ಜರುಗಿದ್ದು ರಶ್ಮಿಕಾ ವಿವಿಧ ಕಾಸ್ಟ್ಯೂಮ್ಗಳಲ್ಲಿ ಮಿಂಚಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಈ ಹಾಡಿನ ನಿರ್ಮಾಣ ಮಾಡಿದ್ದಾರೆ. ರಶ್ಮಿಕಾ ಹಿಂದಿ ಆಲ್ಬಂ ಹಾಡೊಂದರಲ್ಲಿ ನಟಿಸುತ್ತಿದ್ದಾರೆ ಎಂದು ತಿಳಿದಾಗಲೇ ಅಭಿಮಾನಿಗಳು ಈ ಆಲ್ಬಂ ನೋಡಲು ಕಾತರದಿಂದ ಕಾಯುತ್ತಿದ್ದರು. ಇದೀಗ ಈ ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸಿ ಕಮೆಂಟ್ ಮಾಡುತ್ತಿದ್ದಾರೆ.