ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ತಮ್ಮ ಮುಂಬರುವ ಚಿತ್ರ 'ಮಿಷನ್ ಮಜ್ನು' ಬಗ್ಗೆ ಪೋಸ್ಟ್ ಮಾಡಿದ್ದಾರೆ. ಈ ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ರಶ್ಮಿಕಾ ಮಂದಣ್ಣ, "ತನ್ನ ಮೊದಲ ಬಾಲಿವುಡ್ ಚಿತ್ರ 'ಮಿಷನ್ ಮಜ್ನು' ಚಿತ್ರೀಕರಣ ಪೂರ್ಣಗೊಂಡಿದೆ. ಚಿತ್ರೀಕರಣದ ವೇಳೆ ಶೂಟಿಂಗ್ ಸೆಟ್ನಲ್ಲಿನ ಕ್ಷಣಗಳು ಸುಂದರವಾಗಿತ್ತು" ಎಂದು ಹೇಳಿದ್ದಾರೆ.
ಲಖನೌದಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಶಂತನು ಬಾಗ್ಚಿ ನಿರ್ದೇಶನದ ಈ ಸಿನಿಮಾ ಈ ವರ್ಷದ ಫೆಬ್ರವರಿಯಲ್ಲಿ ಚಿತ್ರೀಕರಣ ಪ್ರಾರಂಭಿಸಿತು. ಈ ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ, ಶರೀಬ್ ಹಶ್ಮಿ, ಪರ್ಮೀತ್ ಸೇಥಿ, ಅನಂತ್ ಮಹದೇವನ್ ಮತ್ತು ಕುಮದ್ ಮಿಶ್ರಾ ಕೂಡ ನಟಿಸಿದ್ದಾರೆ.
ನಿರ್ಮಾಪಕರಾದ ರೋನಿ ಸ್ಕ್ರೂವಾಲಾ, ಅಮರ್ ಬುಟಾಲಾ ಮತ್ತು ಗರಿಮಾ ಮೆಹ್ತಾ ಅವರ ಈ ಚಿತ್ರ ಪಾಕಿಸ್ತಾನದ ನೆಲದಲ್ಲಿ ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ರಾ ಕಾರ್ಯಾಚರಣೆ(RAW operation)ಯ ಕಥೆ ಹೇಳಲಿದೆ.
ಇದನ್ನೂ ಓದಿ:ಮಹಿಳೆಯರ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ಬದಲು ರಕ್ಷಣೆ ನೀಡಿ: ನಟ ಚೇತನ್