ಕರ್ನಾಟಕ

karnataka

ETV Bharat / sitara

ಸಮುದ್ರ ತೀರದಲ್ಲಿ ರಶ್ಮಿಕಾ ವರ್ಕೌಟ್​​​​...ಇದೊಂಥರಾ ಹೊಸ ಅನುಭವ ಎಂದ ನಟಿ - Kirik party girl Rashmika

ಫಿಟ್ನೆಸ್​​​ಗೆ ಹೆಚ್ಚು ಒತ್ತು ನೀಡುವ ರಶ್ಮಿಕಾ ಮಂದಣ್ಣ ಆಹಾರದ ವಿಚಾರದಲ್ಲಿ ಹಾಗೂ ವರ್ಕೌಟ್ ವಿಚಾರದಲ್ಲಿ ಬಹಳ ಸ್ಟ್ರಿಕ್ಟ್​. ಮೊದಲ ಬಾರಿಗೆ ಸಮುದ್ರ ತೀರದಲ್ಲಿ ವರ್ಕೌಟ್ ಮಾಡಿರುವ ರಶ್ಮಿಕಾ ಆ ವಿಡಿಯೋವನ್ನು ತಮ್ಮ ಇನ್ಸ್​​​ಟಾಗ್ರಾಮ್​​​ನಲ್ಲಿ ಹಂಚಿಕೊಂಡಿದ್ದಾರೆ.

Rashmika workout near beach
ರಶ್ಮಿಕಾ ಮಂದಣ್ಣ

By

Published : Oct 1, 2020, 3:47 PM IST

ಫಿಟ್ನೆಸ್​​​​​ಗೆ ಹೆಚ್ಚು ಆದ್ಯತೆ ಕೊಡುವ ಸೆಲಬ್ರಿಟಿಗಳಲ್ಲಿ ರಶ್ಮಿಕಾ ಕೂಡಾ ಒಬ್ಬರು. ಇತ್ತೀಚೆಗಷ್ಟೇ ಓಟ್ಸ್ ಪ್ಯಾನ್ ಕೇಕ್ ಮಾಡುತ್ತಿರುವ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದ ರಶ್ಮಿಕಾ ಈಗ ತಾವು ಸಮುದ್ರ ತೀರದಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

'ಇದೇ ಮೊದಲ ಬಾರಿಗೆ ಸಮುದ್ರದ ದಂಡೆ ಬಳಿ ವರ್ಕೌಟ್​ ಮಾಡುತ್ತಿದ್ದೇನೆ. ನಾನು ಎಷ್ಟೇ ಒತ್ತಡದಿಂದ ಇದ್ದರೂ, ಎಷ್ಟೇ ಆಯಾಸದಿಂದ ಇದ್ದರೂ ಇಲ್ಲಿ ಬಂದು ವರ್ಕೌಟ್ ಮಾಡಿದರೆ ಎಲ್ಲಾ ಮಾಯವಾಗಿಬಿಡುತ್ತದೆ. ಅಲೆಗಳ ಶಬ್ಧ, ಸಮುದ್ರದಿಂದ ಬರುವ ಸುವಾಸನೆ, ಬೆಚ್ಚಗಿನ ಸೂರ್ಯನ ಕಿರಣಗಳು, ಇಲ್ಲಿನ ಮರಳು ನನಗೆ ಬಹಳ ಇಷ್ಟವಾಗಿದೆ. ಇದೊಂದು ಹೊಸ ಅನುಭವ' ಎಂದು ಸಮುದ್ರದ ದಂಡೆಯಲ್ಲಿ ವರ್ಕೌಟ್ ಮಾಡಿದ ಸಂತೋಷವನ್ನು ಹಂಚಿಕೊಂಡಿದ್ದಾರೆ ರಶ್ಮಿಕಾ.

ರಶ್ಮಿಕಾ ಕರಿಯರ್ ವಿಚಾರಕ್ಕೆ ಬರುವುದಾದರೆ ಸುಕುಮಾರ್ ನಿರ್ದೇಶನದಲ್ಲಿ ಅಲ್ಲು ಅರ್ಜುನ್ ಜೊತೆ 'ಪುಷ್ಪ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ತಮಿಳಿನಲ್ಲಿ 'ಸುಲ್ತಾನ್' ಚಿತ್ರದಲ್ಲಿ ಕೂಡಾ ನಟಿಸುತ್ತಿದ್ದಾರೆ. ಇದರೊಂದಿಗೆ ಮತ್ತೊಂದು ಹೊಸ ಚಿತ್ರಕ್ಕೆ ರಶ್ಮಿಕಾ ಸಹಿ ಹಾಕಿರುವುದಾಗಿ ತಿಳಿದುಬಂದಿದೆ.

ABOUT THE AUTHOR

...view details