ತೆಲುಗು ಸುಂದರ ನಟ ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ಅಭಿನಯದ 'ಮಿಡಲ್ ಕ್ಲಾಸ್ ಮೆಲೋಡಿಸ್' ಚಿತ್ರ ಇದೇ ನವೆಂಬರ್ 20 ರಂದು ಆನ್‌ಲೈನ್‌ನಲ್ಲಿ ರಿಲೀಸ್ ಆಗುತ್ತಿದೆ. ನಿನ್ನೆ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಇದಕ್ಕೆ ಕನ್ನಡತಿ ರಶ್ಮಿಕಾ ಮಂದಣ್ಣ ಫುಲ್ ಖುಶ್ ಆಗಿ ಟ್ವೀಟ್ ಮಾಡಿದ್ದಾರೆ.
'ಮಿಡಲ್ ಕ್ಲಾಸ್ ಮೆಲೋಡಿಸ್' ಚಿತ್ರದಲ್ಲಿ ವಿಜಯ್ ದೇವರ ಕೊಂಡ ಸಹೋದರ ಆನಂದ್ ದೇವರಕೊಂಡ ಜೊತೆಯಾಗಿ ನಟಿ ವರ್ಷಾ ಬೊಲ್ಲಮ್ಮ ಹೆಜ್ಜೆ ಹಾಕಿದ್ದಾರೆ. ಟ್ವೀಟರ್ನಲ್ಲಿ ಇವರ ಕಾಂಬಿನೇಷನ್ ಬಗ್ಗೆ ಮೆಚ್ಚಿರುವ ಕೊಡಗಿನ ಬೆಡಗಿ ರಶ್ಮಿಕಾ, ನಾನು ಸಿನಿಮಾ ನೋಡಿದ್ದೇನೆ.. ತುಂಬಾ ನಕ್ಕಿದ್ದೇನೆ .. ಆ ನನ್ನಿಬ್ಬರು ಸ್ನೇಹಿತರನ್ನು ದೊಡ್ಡ ಪರದೆಯಲ್ಲಿ ನೋಡತ್ತಿರುವುದು ನಂಬಲು ಸಾಧ್ಯವಿಲ್ಲ ಎಂದಿದ್ದಾರೆ.