ಕರ್ನಾಟಕ

karnataka

ETV Bharat / sitara

ಅಂತೂ`ಪೊಗರು' ಚಿತ್ರದ ಬಗ್ಗೆ ಮೌನ ಮುರಿದ ರಶ್ಮಿಕಾ... ಏನ್​ ಹೇಳಿದ್ರೂ!?

ಪೊಗರು ಚಿತ್ರದ ಬಗ್ಗೆ ಮೌನ ಮುರಿದಿರುವ ರಶ್ಮಿಕಾ ಮಂದಣ್ಣ ಚಿತ್ರ ಬಿಡುಗಡೆಯಾಗುತ್ತಿರುವ ಖುಷಿಯನ್ನು ಹಂಚಿಕೊಂಡಿದ್ದಾರೆ. ಇಷ್ಟಕ್ಕೂ ರಶ್ಮಿಕಾ, `ಪೊಗರು' ಬಿಡುಗಡೆಯ ಬಗ್ಗೆ ಏನು ಹೇಳಿದರು ಎಂಬ ಪ್ರಶ್ನೆ ಬರಬಹುದು. `ಏಯ್, ಚಿತ್ರ ಬಿಡುಗಡೆಗೆ ಇನ್ನು 30 ದಿನ ಮಾತ್ರ ಬಾಕಿ ಇದೆ ...' ಎಂದಷ್ಟೇ ಹೇಳಿದ್ದಾರೆ.

ಅಂತೂ`ಪೊಗರು' ಚಿತ್ರದ ಬಗ್ಗೆ ಮೌನ ಮುರಿದ ರಶ್ಮಿಕಾ
ಅಂತೂ`ಪೊಗರು' ಚಿತ್ರದ ಬಗ್ಗೆ ಮೌನ ಮುರಿದ ರಶ್ಮಿಕಾ

By

Published : Jan 19, 2021, 11:32 PM IST

ರಶ್ಮಿಕಾ ಮಂದಣ್ಣ ತಾವು ಅಭಿನಯಿಸುತ್ತಿರುವ ಬೇರೆ ಭಾಷೆಗಳ ಬಗ್ಗೆ ಖುಷಿಯಿಂದ ಮಾತನಾಡುತ್ತಾರೆ, ವಿಜಯ್ ದೇವರಕೊಂಡ ಚಿತ್ರದ `ಲೈಗರ್' ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾದಾಗ ಖುಷಿಯಿಂದ ಸಂಭ್ರಮಿಸಿದ್ದರು. `ಪೊಗರು' ಚಿತ್ರದ ಬಗ್ಗೆ ಮಾತ್ರ ಯಾವುದೇ ವಿಷಯವನ್ನೂ ಹೇಳುವುದಿಲ್ಲ ಎಂಬ ಆರೋಪ ಮಂಗಳವಾರ ಬೆಳಿಗ್ಗೆಯಿಂದ ಕೇಳಿ ಬಂದಿತ್ತು. ಈ ಆರೋಪ ಸಂಪೂರ್ಣ ಸುಳ್ಳು ಎಂದು ಹೇಳುವಂತೆಯೂ ಇಲ್ಲ. ಏಕೆಂದರೆ, `ಪೊಗರು' ಚಿತ್ರ ತಂಡದಿಂದ ಇದುವರೆಗೂ ಹಲವು ಅಪ್‍ಡೇಟ್‍ಗಳು ಬಂದಿವೆ. ಆದರೆ, ಇದುವರೆಗೂ ಒಂದೇ ಒಂದು ವಿಷಯವನ್ನೂ ರಶ್ಮಿಕಾ ಹಂಚಿಕೊಂಡಿಲ್ಲ ಅಥವಾ ಅದಕ್ಕೆ ಪ್ರತಿಕ್ರಿಯೆ ನೀಡಿಲ್ಲ.

`ಪೊಗರು' ಚಿತ್ರದ `ಖರಾಬು' ಹಾಡು ದಾಖಲೆಯ ವೀಕ್ಷಣೆಯನ್ನು ಕಂಡಿತು. ರಶ್ಮಿಕಾ ಏನೂ ಮಾತನಾಡಿರಲಿಲ್ಲ. ಚಿತ್ರದ ಡೈಲಾಗ್ ಟ್ರೇಲರ್ ಸೂಪರ್ ಹಿಟ್ ಆಯಿತು. ಆ ವೇಳೆ ಕೂಡ ರಶ್ಮಿಕಾ ಮೌನವಾಗಿದ್ದರು. ತೆಲುಗು, ತಮಿಳು ಮತ್ತು ಹಿಂದಿಗೆ ಡಬ್ಬಿಂಗ್ ಹಕ್ಕುಗಳು ಮಾರಾಟವಾದವು. ಆಗಲೂ ರಶ್ಮಿಕಾ ಪ್ರತಿಕ್ರಿಯಿಸಿರಲಿಲ್ಲ.ಕೊನೆಗೆ ಸೋಮವಾರ ಸಂಜೆ, ಧ್ರುವ ಚಿತ್ರ ಬಿಡುಗಡೆಯ ದಿನಾಂಕವನ್ನು ಘೋಷಿಸಿದರು. ಚಿತ್ರ ಬಿಡುಗಡೆಯಾಗುತ್ತಿರುವ ವಿಷಯವಾಗಿಯಾದರೂ ರಶ್ಮಿಕಾ ಮಂದಣ್ಣ ಮಾತನಾಡಬಹುದು ಎಂದುಕೊಂಡರೆ, ಅದೂ ಆಗಲಿಲ್ಲ.

ಯಾವಾಗ ರಶ್ಮಿಕಾ ಆಗಲೂ ಸುಮ್ಮನಿದ್ದರೋ ನೆಟ್ಟಿಗರು ಅವರನ್ನು ತರಾಟೆ ತೆಗೆದುಕೊಂಡಿದ್ದರು. ರಶ್ಮಿಕಾಗೆ ಕನ್ನಡ ಚಿತ್ರಗಳೆಂದರೆ ಯಾಕೆ ತಾತ್ಸಾರ ಎಂದು ಪ್ರಶ್ನಿಸತೊಡಗಿದರು. ರಶ್ಮಿಕಾ ತಾನು ಕನ್ನಡತಿ ಎಂಬುದನ್ನು ಮರೆಯಬಾರದು ಎಂದು ಎಚ್ಚರಿಸಿದರು. ಬಹುಶಃ ಜನ ತಮ್ಮ ಕನ್ನಡ ಪ್ರೀತಿಯ ಬಗ್ಗೆ ಮಾತನಾಡುತ್ತಿರುವ ವಿಷಯ ರಶ್ಮಿಕಾ ಕಿವಿಗೆ ಬಿದ್ದಿರಬಹುದು.

ತಕ್ಷಣವೇ ಆಕೆ ಎಚ್ಚೆತ್ತುಕೊಂಡಿದ್ದಾರೆ. ಚಿತ್ರ ಬಿಡುಗಡೆಯಾಗುತ್ತಿರುವ ಖುಷಿಯನ್ನು ಹಂಚಿಕೊಂಡಿದ್ದಾರೆ. ಇಷ್ಟಕ್ಕೂ ರಶ್ಮಿಕಾ, `ಪೊಗರು' ಬಿಡುಗಡೆಯ ಬಗ್ಗೆ ಏನು ಹೇಳಿದರು ಎಂಬ ಪ್ರಶ್ನೆ ಬರಬಹುದು. `ಏಯ್, ಚಿತ್ರ ಬಿಡುಗಡೆಗೆ ಇನ್ನು 30 ದಿನ ಮಾತ್ರ ಬಾಕಿ ಇದೆ ...' ಎಂದಷ್ಟೇ ಹೇಳಿದ್ದಾರೆ. ಒಂಥರಾ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ. ಅವರು ಚಿತ್ರ ಬಿಡುಗಡೆಯ ಬಗ್ಗೆ ಖುಷಿಯಿಂದ ಮಾತನಾಡಿದ್ದಾರೋ ಅಥವಾ ಆರೋಪಗಳಿಂದ ತಪ್ಪಿಸಿಕೊಳ್ಳುವುದಕ್ಕೆ ಬೇಕಾಬಿಟ್ಟಿ ಮಾತನಾಡಿದ್ದಾರೋ ಎಂದು ಅವರು ಮಾತುಗಳಿಂದ ಅರ್ಥ ಮಾಡಿಕೊಳ್ಳುವುದು ಕಷ್ಟ.

ABOUT THE AUTHOR

...view details