ಕರ್ನಾಟಕ

karnataka

By

Published : May 18, 2021, 9:47 PM IST

ETV Bharat / sitara

"ನಾನು ಮತ್ತೊಮ್ಮೆ ಸಾನ್ವಿ ಪಾತ್ರ ಮಾಡೋಲ್ಲ": ರಶ್ಮಿಕಾ ಮಂದಣ್ಣ

ನಾನು ರಿಮೇಕ್ ಸಿನಿಮಾದಲ್ಲಿ ನಟಿಸೋಲ್ಲ. ಅದರಲ್ಲೂ ನಾನು ಕಿರಿಕ್ ಪಾರ್ಟಿ ರಿಮೇಕ್‌ನಲ್ಲಿ ನಟಿಸಲ್ಲ. ಒಮ್ಮೆ ಆ ಪಾತ್ರದಲ್ಲಿ ಅಭಿನಯಿಸುವ ಮೂಲಕ ಅದರ ಭಾವನೆಗಳನ್ನು ಫೀಲ್ ಮಾಡಿದ್ದೇನೆ. ಮತ್ತೆ ಅದನ್ನೇ ಮಾಡಿದರೆ ಹೊಸತನ ನೀಡಲು ನನ್ನ ಬಳಿ ಏನೂ ಇರುವುದಿಲ್ಲ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

rashmika mandanna
rashmika mandanna

ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ‌ ಎಂಟ್ರಿ‌ ಕೊಟ್ಟ ರಶ್ಮಿಕಾ ಮಂದಣ್ಣ, ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಬಹುಬೇಡಿಕೆಯ ನಟಿ. ಸದ್ಯ ತೆಲುಗು, ತಮಿಳು ಹಾಗು ಹಿಂದಿ‌ ಸಿನಿಮಾಗಳಲ್ಲಿ ಅಭಿನಯಿಸುತ್ತಿರೋ ರಶ್ಮಿಕಾ ಮಂದಣ್ಣ, ರಾತ್ರೋರಾತ್ರಿ ನ್ಯಾಷನಲ್ ಕ್ರಶ್ ಆಗಿದ್ದಾರೆ.

ಈಗ ಬಹುಭಾಷೆ ನಟಿಯಾಗಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ, ಗ್ಲ್ಯಾಮರ್ ಪ್ರಪಂಚಕ್ಕೆ ಕಾಲಿಟ್ಟಿದ್ದು, 2016ರಲ್ಲಿ ತೆರೆಕಂಡ ಕಿರಿಕ್ ಪಾರ್ಟಿ ಚಿತ್ರದಿಂದ. ಈ ಚಿತ್ರದಲ್ಲಿ, ರಶ್ಮಿಕಾ ಮಂದಣ್ಣ ಕಣ್ಣಿಗೆ ಕನ್ನಡಕ ಹಾಕಿ, ಸಾನ್ವಿ ಜೋಸೆಫ್ ಆಗಿ, ಚೊಚ್ಚಲ ಸಿನಿಮಾದಲ್ಲಿ ಪಡ್ಡೆ ಹುಡುಗರ ಹೃದಯ ಕದ್ದಿದ್ದರು. ಅಷ್ಟೇ ಅಲ್ಲ ಸ್ಟಾರ್ ಡಮ್ ಕೂಡ ತಂದು ಕೊಟ್ಟಿತ್ತು. ಆದರೆ, ಮತ್ತೊಮ್ಮೆ ಸಾನ್ವಿ ಪಾತ್ರ ಬಂದರೆ ನಾನು‌ ಮಾಡೋಲ್ಲ‌ ಅಂತಾ ರಶ್ಮಿಕಾ ಮಂದಣ್ಣ ಹೇಳಿದ್ದಾರ‌ಂತೆ.

ಕನ್ನಡದಲ್ಲಿ ಕಿರಿಕ್ ಪಾರ್ಟಿ ಹಿಟ್ ಆಗುತ್ತಿದ್ದಂತೆಯೇ, ತೆಲುಗಿಗೆ ಅದನ್ನು ರಿಮೇಕ್ ಮಾಡಲಾಯ್ತು. ಕನ್ನಡದಲ್ಲಿ ನಟಿಸಿದ್ದ ಸಂಯುಕ್ತಾ ಹೆಗ್ಡೆ ತೆಲುಗು ರಿಮೇಕ್‌ನಲ್ಲೂ ಬಣ್ಣ ಹಚ್ಚಿದ್ದರು. ನಂತರ ಈ ಸಿನಿಮಾ ಹಿಂದಿಗೂ ರಿಮೇಕ್ ಆಗುವ ಕುರಿತು ಮಾತು ಕೇಳಿ ಬಂತು. ಕಾರ್ತಿಕ್ ಆರ್ಯನ್ ಹಿಂದಿ ರಿಮೇಕ್‌ನಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದರು. ಆನಂತರ ಅದ್ಯಾಕೋ ಮುಂದುವರಿಯಲಿಲ್ಲ.

ಸದ್ಯ ರಶ್ಮಿಕಾ ಹಿಂದಿಗೂ ಕಾಲಿಟ್ಟಿರುವುದರಿಂದ, ಒಂದು ವೇಳೆ ಕಿರಿಕ್ ಪಾರ್ಟಿ ಹಿಂದಿ ರಿಮೇಕ್‌ಗೆ ನೀವು ಆಯ್ಕೆಯಾದರೆ ನಟಿಸುತ್ತೀರಾ ಎಂಬ ಪ್ರಶ್ನೆ ಅವರಿಗೆ ಎದುರಾಗಿದೆ. ಅದಕ್ಕೆ ರಶ್ಮಿಕಾ ನೀಡಿದ ಉತ್ತರ ಕೇಳಿದರೆ ನಿಜಕ್ಕೂ ಆಶ್ಚರ್ಯ ಪಡುತ್ತೀರಾ. ನಾನು ರಿಮೇಕ್ ಸಿನಿಮಾದಲ್ಲಿ ನಟಿಸೋಲ್ಲ. ಅದರಲ್ಲೂ ನಾನು ಕಿರಿಕ್ ಪಾರ್ಟಿ ರಿಮೇಕ್‌ನಲ್ಲಿ ನಟಿಸಲ್ಲ. ಒಮ್ಮೆ ಆ ಪಾತ್ರದಲ್ಲಿ ಅಭಿನಯಿಸುವ ಮೂಲಕ ಅದರ ಭಾವನೆಗಳನ್ನು ಫೀಲ್ ಮಾಡಿದ್ದೇನೆ. ಮತ್ತೆ ಅದನ್ನೇ ಮಾಡಿದರೆ ಹೊಸತನ ನೀಡಲು ನನ್ನ ಬಳಿ ಏನೂ ಇರುವುದಿಲ್ಲ. ಹೊಸ ಹೊಸ ಕಥೆಗಳ ಮೂಲಕ ಹೊಸ ಅನುಭವವನ್ನು ಪಡೆಯುವ ಅವಕಾಶ ಎದುರು ಇರುವಾಗ ನಾನೇಕೆ ಮತ್ತೆ ಹಳೆಯ ಪಾತ್ರಕ್ಕೆ ಜೀವ ತುಂಬಲಿ ಅಂತಾ ರಶ್ಮಿಕಾ ‌ಮಂದಣ್ಣ ಹೇಳಿದ್ದಾರೆ.

ನಾನು ಸದಾ ಹೊಸ ಪಾತ್ರಗಳಲ್ಲಿ ನನ್ನನ್ನ ನಾನು ತೊಡಗಿಸಿಕೊಳ್ಳುತ್ತಿ‌ನಿ ಅಂತಾ ರಶ್ಮಿಕಾ ಮಂದಣ್ಣ, ಮುಂದಿನ‌ ದಿನಗಳಲ್ಲಿ ಯಾವ ರಿಮೇಕ್, ಚಿತ್ರದಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಸದ್ಯ ರಶ್ಮಿಕಾ ಮಂದಣ್ಣ ಹಿಂದಿಯಲ್ಲಿ, ಮಿಷನ್ ಮಜ್ನು ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಸಿದ್ದಾರ್ಥ್‌ ಮಲ್ಹೋತ್ರ ಜೊತೆ ನಟಿಸುತ್ತಿದ್ದಾರೆ. ಅಮಿತಾಬ್​ ಬಚ್ಚನ್ ಜೊತೆಗೆ ಗುಡ್ ಬೈ ಅನ್ನೋ ಸಿನಿಮಾದಲ್ಲೂ ಕೂಡ ರಶ್ಮಿಕಾ‌‌‌ ಮಂದಣ್ಣ ನಟಿಸ್ತಾ ಇದ್ದು, ಬಹುಭಾಷೆ ನಟಿಯಾಗಿ ಮಿಂಚುತ್ತಿದ್ದಾರೆ.

ABOUT THE AUTHOR

...view details