ರಶ್ಮಿಕಾ ಮಂದಣ್ಣ, ಕನ್ನಡ ಚಿತ್ರರಂಗದಿಂದ ಕರಿಯರ್ ಆರಂಭಿಸಿ ಈಗ ಬಾಲಿವುಡ್ವರೆಗೂ ದಾಪುಗಾಲಿಟ್ಟಿರುವ ಚೆಲುವೆ. ಕನ್ನಡದಿಂದ ತೆಲುಗು, ತಮಿಳು ಈಗ ಬಾಲಿವುಡ್ ಚಿತ್ರರಂಗದಲ್ಲೂ ಗುರುತಿಸಿಕೊಂಡಿರುವ ರಶ್ಮಿಕಾ, ಅವಕಾಶ ದೊರೆತರೆ ಹಾಲಿವುಡ್ ಚಿತ್ರಗಳಲ್ಲಿ ಕೂಡಾ ನಟಿಸುತ್ತೇನೆ ಎಂದು ತಮ್ಮ ಮನದಾಸೆ ವ್ಯಕ್ತಪಡಿಸಿದ್ದಾರೆ.
ನಾನು ಇನ್ನೂ ಎತ್ತರಕ್ಕೆ ಏರಬೇಕು...ಮನದಾಸೆ ಹಂಚಿಕೊಂಡ ರಶ್ಮಿಕಾ - Rashmika in Pushpa movie
ದಕ್ಷಿಣ ಚಿತ್ರರಂಗದಲ್ಲಿ ಹೆಸರು ಮಾಡಿರುವಂತೆ ಬಾಲಿವುಡ್ನಲ್ಲಿ ಕೂಡಾ ಹೆಸರು ಮಾಡಬೇಕು. ಹಾಲಿವುಡ್ನಲ್ಲಿ ಕೂಡಾ ನಟಿಸಬೇಕು ಎಂದು ನಟಿ ರಶ್ಮಿಕಾ ಮಂದಣ್ಣ ತಮ್ಮ ಮನದಾಸೆ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ರಶ್ಮಿಕಾ ತೆಲುಗಿನಲ್ಲಿ ಪುಷ್ಪಾ ಹಾಗೂ ಹಿಂದಿಯಲ್ಲಿ ಮಿಷನ್ ಮಜ್ನು ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಇದನ್ನೂ ಓದಿ:ಥಿಯೇಟರ್ನಲ್ಲಿ ಹೌಸ್ಫುಲ್ಗೆ ಅವಕಾಶ ಕೊಡಿ ಎಂದ ಶಿವಣ್ಣ
ತಮ್ಮ 4 ವರ್ಷಗಳ ಸಿನಿಪಯಣದ ಬಗ್ಗೆ ಇತ್ತೀಚೆಗೆ ಮಾತನಾಡಿರುವ ರಶ್ಮಿಕಾ ಮಂದಣ್ಣ, "ಶೂಟಿಂಗ್ ಸೆಟ್ ಯಾವಾಗಲೂ ನನಗೆ ಸಂತೋವನ್ನು ಹಂಚುವ ಒಂದು ಪರೀಕ್ಷಾ ಕೇಂದ್ರದಂತೆ ಕಾಣುತ್ತದೆ. ನನಗೆ ನೀಡಲಾಗುವ ಡೈಲಾಗ್ ಕಲಿಯುವುದು, ಅದನ್ನು ನೆನಪಿನಲ್ಲಿಟ್ಟುಕೊಂಡು ಭಾವನೆಗೆ ತಕ್ಕಂತೆ ಡೈಲಾಗ್ ಹೇಳುವುದೆಲ್ಲವೂ ನಾನು ಪರೀಕ್ಷೆ ಬರೆದಂತೆ ಆಗುತ್ತದೆ. ಇದು ಸ್ವಲ್ಪ ಶ್ರಮ ಎನಿಸಿದರೂ ನನಗೆ ಬಹಳ ಥ್ರಿಲ್ ನೀಡುತ್ತದೆ. ಇದರೊಂದಿಗೆ ಆ್ಯಕ್ಟಿಂಗ್ ಚೆನ್ನಾಗಿದೆ, ಶಾಟ್ ಓಕೆ ಎಂದು ಸೆಟ್ನಲ್ಲಿದ್ದವರು ಚಪ್ಪಾಳೆ ತಟ್ಟಿದರೆ ನನಗೆ ಉಂಟಾಗುವ ಖುಷಿಯನ್ನು ಹೇಳಲು ಅಸಾಧ್ಯ. ಈ ನಾಲ್ಕು ವರ್ಷಗಳ ಸಿನಿಪಯಣದಲ್ಲಿ ಇಂತ ಅನುಭವ ಸಾಕಷ್ಟು ಖುಷಿ ನೀಡಿದೆ. ಜೀವನದಲ್ಲಿ ಇನ್ನೂ ಸಾಧನೆ ಮಾಡಬೇಕಿದೆ. ದಕ್ಷಿಣ ಚಿತ್ರರಂಗದಂತೆ ಬಾಲಿವುಡ್ನಲ್ಲಿ ಕೂಡಾ ಹೆಸರು ಮಾಡಬೇಕು. ಇನ್ನೂ ಎತ್ತರಕ್ಕೆ ಏರಬೇಕು. ಅವಕಾಶ ದೊರೆತರೆ ಹಾಲಿವುಡ್ ಚಿತ್ರಗಳಲ್ಲಿ ಕೂಡಾ ನಟಿಸುತ್ತೇನೆ" ಎಂದು ಹೇಳಿದ್ದಾರೆ. ರಶ್ಮಿಕಾ ಸದ್ಯಕ್ಕೆ ತೆಲುಗಿನಲ್ಲಿ ಅಲ್ಲು ಅರ್ಜುನ್ ಜೊತೆ ಪುಷ್ಪ, ಬಾಲಿವುಡ್ನಲ್ಲಿ ಸಿದ್ದಾರ್ಥ್ ಮಲ್ಹೋತ್ರ ಜೊತೆ ಮಿಷನ್ ಮಜ್ನು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.