ಮುಂಬೈ( ಮಹಾರಾಷ್ಟ್ರ): ರಶ್ಮಿಕಾ ಮಂದಣ್ಣ ಟಾಲಿವುಡ್ನಲ್ಲಿ ಮಿಂಚು ಹರಿಸುತ್ತಿರುವ ನಟಿ. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅವರದೇ ಆದ ಛಾಪು ಮೂಡಿಸುತ್ತಿದ್ದಾರೆ. ಪುಷ್ಪ ಚಿತ್ರದ ಸಕ್ಸಸ್ ಬಗ್ಗೆ ಮಾತನಾಡಿರುವ ರಶ್ಮಿಕಾ ಮಂದಣ್ಣ, ಪುಷ್ಪ ಭಾಗ- 2 - ಭಾಗ ಒಂದಕ್ಕಿಂತ ಅತ್ಯುತ್ತಮವಾಗಿರಲಿದೆ ಎಂದು ತಮ್ಮ ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.
ಅಲ್ಲು ಅರ್ಜುನ್ ನಟನೆಯ ಈ ಚಿತ್ರ ಸ್ಮಗ್ಲರ್ಗಳು ಮತ್ತು ಪೊಲೀಸರ ನಡುವೆ ನಡೆಯುವ ಸಂಘರ್ಷದ ಕಥೆಯನ್ನು ಹೊಂದಿದೆ. ಡಿಸೆಂಬರ್ 17 ರಂದು ತೆರೆಕಂಡ ಈ ಚಿತ್ರ ತೆಲಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ತೆರೆ ಕಂಡಿದೆ. ಚಿತ್ರ 300 ಕೋಟಿ ರೂ. ಗಳಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ.
ಈ ನಡುವೆ, ಚಿತ್ರದ ಬಗ್ಗೆ ಟ್ವಿಟರ್ ಪೋಸ್ಟ್ ಮಾಡಿರುವ ಯುವ ನಟಿ ರಶ್ಮಿಕಾ ಮಂದಣ್ಣ ಚಿತ್ರಕ್ಕೆ ಬಂದಿರುವ ಪ್ರತಿಕ್ರಿಯೆ ಹಾಗೂ ಅಭಿಮಾನಿಗಳ ಅಭಿಮಾನಕ್ಕೆ ಕೃತಜ್ಞತೆ ತಿಳಿಸಿದ್ದಾರೆ. ’ಪುಷ್ಪ ಮೇಲಿನ ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು.. ನಾವು ಮತ್ತಷ್ಟು ಕಷ್ಟಪಟ್ಟು ಕೆಲಸ ಮಾಡಲು ಇಚ್ಚಿಸುತ್ತೇವೆ.. ಹಾಗೂ ನಾವು ನಿಮಗೆ ಭರವಸೆ ನೀಡಲು ಬಯಸುತ್ತೇವೆ.. ಪುಷ್ಪಾ- 2 ಉತ್ತಮ ಹಾಗೂ ಇದಕ್ಕೂ ದೊಡ್ಡದಾಗಿರಲಿದೆ’ ಎಂದಿದ್ದಾರೆ.
ಇದನ್ನೂ ಓದಿ:ಹಳದಿ ಬಣ್ಣದ ಬಿಕಿನಿಯಲ್ಲಿ ಮಿಂಚಿದ 'ಕೆಜಿಎಫ್' ಬೆಡಗಿ..!
ಪುಷ್ಪ- ದಿ ರೈಸ್‌ನಲ್ಲಿ, ಅಲ್ಲು ಅರ್ಜುನ್ ಆಂಧ್ರಪ್ರದೇಶದ ರಾಯಲಸೀಮಾ ಪ್ರದೇಶದಲ್ಲಿ ಕೆಂಪು ಮರಳು ಕಳ್ಳಸಾಗಣೆದಾರನಾಗಿ ಆ್ಯಕ್ಟ್ ಮಾಡಿದ್ದಾರೆ. ಇನ್ನು ಅವರಿಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಶ್ರೀವಲ್ಲಿ ಎಂಬ ಹಳ್ಳಿಯ ಚೆಲುವೆಯ ಪಾತ್ರವನ್ನು ನಿರ್ವಹಿಸಿದ್ದಾರೆ.