ರಶ್ಮಿಕಾ ಮಂದಣ್ಣ, ಸ್ಯಾಂಡಲ್ವುಡ್ನಲ್ಲಿ ಕರಿಯರ್ ಆರಂಭಿಸಿ ಟಾಲಿವುಡ್ನಲ್ಲಿ ಹೆಸರು ಮಾಡಿದವರು. ಇದೀಗ ಅವರು ತಮಿಳು ಸಿನಿಮಾಗಳಲ್ಲಿ ಕೂಡಾ ಬ್ಯುಸಿ ಇದ್ದಾರೆ. ನಟ ಕಾರ್ತಿ ಜೊತೆ ರಶ್ಮಿಕಾ 'ಸುಲ್ತಾನ್' ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ.
ಸದ್ಯಕ್ಕೆ ರಶ್ಮಿಕಾ ಕೊರೊನಾ ಲಾಕ್ಡೌನ್ ಕಾರಣದಿಂದ ಕೊಡಗಿನ ತಮ್ಮ ಮನೆಯಲ್ಲಿ ಕುಟುಂಬದವರೊಂದಿಗೆ ನೆಲೆಸಿದ್ದಾರೆ. ಅಪ್ಪನೊಂದಿಗೆ ಇರುವ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ, ಪ್ರೀತಿಯ ಅಪ್ಪನನ್ನು ಹೊಗಳಿದ್ದಾರೆ.
'ಡ್ಯಾಡ್.... ಅವರ ಬಗ್ಗೆ ನಾನೇನು ಹೇಳಲಿ, ನನ್ನ ಅಪ್ಪ ನನ್ನ ಬಗ್ಗೆ ನಾನು ಮಗು ಇರುವಾಗಿನಿಂದ ಅದೆಷ್ಟೋ ಕನಸು ಕಟ್ಟಿಕೊಂಡವರು. ನಾನಾಗ ಪುಟ್ಟ ಹುಡುಗಿ ಉದ್ದುದ್ದ ಕೂದಲು, ದೊಡ್ಡ ಕಣ್ಣುಗಳು, ಉದ್ದನೆಯ ಮೂಗು...ಅಪ್ಪನ ಹೊಟ್ಟೆ ಮೇಲೆ ನಾನು ಮಗುವಾಗಿ ಡ್ಯಾನ್ಸ್ ಮಾಡುತ್ತಿದ್ದೆ, ನಾನು ಮಗು ಆಗಿದ್ದಾಗ ಅಪ್ಪ ಯಾವಾಗಲೂ ಬ್ಯುಸ್ನೆಸ್ ಬ್ಯುಸಿ ಎಂದು ಹೊರಟು ಬಿಡುತ್ತಾ ಇದ್ದರು. ನಾನು ಹೆಚ್ಚಾಗಿ ಬೆಳೆದದ್ದು ಹಾಸ್ಟೆಲ್ನಲ್ಲಿ. ಪಿಜಿ ನಂತರ ಸಿನಿಮಾಗೆ ಬರಬೇಕು ಎಂದು ಮನಸ್ಸು ಮಾಡಿದೆ. ಇಂದು ನಾನು ಅಪ್ಪನ ಬ್ಯುಸ್ನೆಸ್ ಪಾರ್ಟ್ನರ್ ಕೂಡಾ.