ಸಿನಿಮಾ ಹೀರೋಯಿನ್ಗಳಿಗೆ ಅವರ ಸೌಂದರ್ಯವೇ ಪ್ರಮುಖ ಸಾಧನ. ಸದಾ ಆರೋಗ್ಯ ಹಾಗೂ ಸುಂದರವಾಗಿ ಕಾಣಲು ಅವರು ಸಾಕಷ್ಟು ಹಣ ಖರ್ಚು ಮಾಡುತ್ತಾರೆ. ಒಳ್ಳೊಳ್ಳೆ ಆಹಾರ ತಿನ್ನುತ್ತಾರೆ. ಜಿಮ್ನಲ್ಲಿ ವರ್ಕೌಟ್ ಮಾಡುತ್ತಾರೆ. ಈ ಕಾರಣದಿಂದಲೇ ಅವರು ಕೋಟಿ ಕೋಟಿ ಸಂಭಾವನೆ ಡಿಮ್ಯಾಂಡ್ ಮಾಡುವುದು.
ಅಭಿಮಾನಿಗಳಿಗಾಗಿ ಆರೋಗ್ಯಕರ ಪ್ಯಾನ್ಕೇಕ್ ರೆಸಿಪಿ ನೀಡಿದ ರಶ್ಮಿಕಾ ಮಂದಣ್ಣ - Rashmika made pancake
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಇನ್ನೂ ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ. ಸದ್ಯಕ್ಕೆ ಅಭಿಮಾನಿಗಳಿಗಾಗಿ ಓಟ್ಸ್ ಪ್ಯಾನ್ ಕೇಕ್ ತಯಾರಿಸಿ ಆ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ, ಈಗ ತೆಲುಗಿನಲ್ಲಿ ಬಹಳ ಬೇಡಿಕೆಯಲ್ಲಿರುವ ನಟಿ. ತಮಿಳಿನಲ್ಲಿ 'ಸುಲ್ತಾನ್' ಹಾಗೂ ತೆಲುಗಿನ 'ಪುಷ್ಪ' ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆ ರಶ್ಮಿಕಾ ನಟಿಸುತ್ತಿದ್ದಾರೆ. ಆದರೆ ಇನ್ನೂ ಚಿತ್ರೀಕರಣ ಆರಂಭವಾಗಿಲ್ಲ. ಕನ್ನಡದಲ್ಲಿ ಧ್ರುವ ಸರ್ಜಾ ಜೊತೆ ನಟಿಸಿರುವ 'ಪೊಗರು' ಚಿತ್ರ ಬಿಡುಗಡೆಯಾಗಬೇಕಿದೆ. ಸದ್ಯಕ್ಕೆ ಶೂಟಿಂಗ್ ಇಲ್ಲದಿದ್ದರೂ ಫಿಟ್ನೆಸ್ಗೆ ಹೆಚ್ಚು ಗಮನ ಕೊಡುತ್ತಿದ್ದಾರೆ ರಶ್ಮಿಕಾ.
ಮನೆಯಲ್ಲಿದ್ದಾಗ ತಾವು ತಿನ್ನುವ ಬ್ರೇಕ್ಫಾಸ್ಟ್ ಹೇಗಿರುತ್ತದೆ ಎಂಬುದನ್ನು ರಶ್ಮಿಕಾ ಅಭಿಮಾನಿಗಳಿಗಾಗಿ ತಿಳಿಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲ ಓಟ್ಸ್ ಪ್ಯಾನ್ ಕೇಕ್ ರೆಸಿಪಿಯನ್ನು ಹೇಳಿಕೊಟ್ಟಿದ್ದಾರೆ. ಓಟ್ಸ್, ಡೇಟ್ಸ್, ಮೊಟ್ಟೆ, ಬಾಳೆಹಣ್ಣು ಬಳಸಿ ತಯಾರಿಸಿ ಪ್ಯಾನ್ ಕೇಕ್ ತಯಾರಿಸಿದ್ದಾರೆ. ತಾವು ಪ್ಯಾನ್ ಕೇಕ್ ಮಾಡುತ್ತಿರುವ ವಿಡಿಯೋವನ್ನು ರಶ್ಮಿಕಾ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ ತನ್ನ ಫಿಟ್ನೆಸ್ ಕೋಚ್ ಡಾ. ಸ್ನೇಹದೇಶು ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. "ಆರೋಗ್ಯವಾಗಿರುವ ಆಹಾರ ಎಂದಿಗೂ ರುಚಿಯಾಗಿರುವುದಿಲ್ಲ" ಎಂದು ಕೂಡಾ ರಶ್ಮಿಕಾ ಕ್ಯಾಪ್ಷನ್ ಬರೆದಿದ್ದಾರೆ.