ಕರ್ನಾಟಕ

karnataka

ETV Bharat / sitara

ಪ್ರೀತಿ, ಮದುವೆ ಬಗ್ಗೆ ರಶ್ಮಿಕಾ ಏನಂದ್ರು ಗೊತ್ತಾ... ? - ಪುಷ್ಪ ಚಿತ್ರದ ಮೂಲಕ ಪ್ರೇಕ್ಷಕರಲ್ಲಿ ಭಾರೀ ಕ್ರೇಜ್ ಹುಟ್ಟಿಸಿರುವ ರಶ್ಮಿಕಾ

ರಶ್ಮಿಕ ಮಂದಣ್ಣ ಎಲ್ಲರಿಗೂ ಇಷ್ಟವಾಗುತ್ತಿರುವ ನಟಿ. ಇತ್ತೀಚೆಗೆ ತೆರೆಕಂಡ ಪುಷ್ಟ ಸಿನಿಮಾದ ಮೂಲಕ ಅಭಿಮಾನಿ ಬಳಗವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ. ಈ ನಡುವೆ ಅವರ ಪ್ರೀತಿ ಹಾಗೂ ವಿವಾಹದ ಬಗ್ಗೆ ಚರ್ಚೆ ಏಳುತ್ತಿದೆ.

ಪ್ರೀತಿ ಹಾಗೂ ಮದುವೆ ಬಗ್ಗೆ ಮತನಾಡಿರುವ ರಶ್ಮಿಕಾ
ಪ್ರೀತಿ ಹಾಗೂ ಮದುವೆ ಬಗ್ಗೆ ಮತನಾಡಿರುವ ರಶ್ಮಿಕಾ

By

Published : Feb 17, 2022, 6:03 PM IST

Updated : Feb 17, 2022, 7:04 PM IST

ರಶ್ಮಿಕಾ ಮಂದಣ್ಣ: 'ಪುಷ್ಪ' ಚಿತ್ರದ ಮೂಲಕ ಪ್ರೇಕ್ಷಕರಲ್ಲಿ ಭಾರೀ ಕ್ರೇಜ್ ಹುಟ್ಟಿಸಿದ್ದಾರೆ. ಸದ್ಯ ಟಾಲಿವುಡ್ ಮತ್ತು ಬಾಲಿವುಡ್‌ನಲ್ಲಿ ಸರಣಿ ಪ್ರಾಜೆಕ್ಟ್‌ಗಳೊಂದಿಗೆ ವೃತ್ತಿಜೀವನದ ಹೊಸ್ತಿಲಲ್ಲಿರುವ ಈ ಸುಂದರಿ ಬಗ್ಗ್ಗೆ ಹಲವು ಯುವಕರು ಯೋಚಿಸುತ್ತಿರುವುದು ಮದುವೆ ಯಾವಾಗ? ಮದುವೆ ಆದ್ರೆ ಯಾರನ್ನಾ ಆಗ್ತಾರೆ? ಅಂತಾ.

ಅನೇಕ ನೆಟಿಜನ್‌ಗಳು ಆಕೆಯನ್ನು ಮೆಚ್ಚಿ ಪೋಸ್ಟ್ ಮಾಡುತ್ತಿದ್ದು, ಅವರು ಯಾವ ರೀತಿಯ ವ್ಯಕ್ತಿಯನ್ನು ಇಷ್ಟಪಡುತ್ತಾರೆ ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲೂ ಕಾಡುತ್ತಿದೆ. ಆಂಗ್ಲ ನಿಯತಕಾಲಿಕವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾ ಅವರು ಪ್ರೇಮ ಮತ್ತು ಮದುವೆಯ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದಾರೆ. ನಿಶ್ಚಿತ ವರ ಹೇಗೆ ಇರಬೇಕೆಂದು ಈ ವೇಳೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಪ್ರೀತಿಸುತ್ತಿದ್ದಾರೆ ಎಂಬ ಮಾತು ಕೆಲ ದಿನಗಳಿಂದ ಕೇಳಿ ಬರುತ್ತಿದೆ

ಪ್ರೀತಿಯನ್ನು ವರ್ಣಿಸುವುದು ಕಷ್ಟ. ಏಕೆಂದರೆ ಇದು ಸಂಪೂರ್ಣವಾಗಿ ಭಾವನೆಗಳಿಗೆ ಸಂಬಂಧಿಸಿದೆ. ನನ್ನ ದೃಷ್ಟಿಯಲ್ಲಿ ಪ್ರೀತಿ ಎಂದರೆ ಒಬ್ಬರನ್ನೊಬ್ಬರು ಗೌರವಿಸುವುದು, ಸಮಯವನ್ನು ವಿನಿಮಯ ಮಾಡಿಕೊಳ್ಳುವುದು. ಪರಸ್ಪರರ ಸಂಪೂರ್ಣ ನಂಬಿಕೆಯ ರಚನೆ. ಈ ಎಲ್ಲಾ ಭಾವನೆಗಳು ಎರಡೂ ಕಡೆಯಿಂದ ಬಂದಾಗ ಮಾತ್ರ ಅವರ ಪ್ರೀತಿ ಯಶಸ್ವಿಯಾಗುತ್ತದೆ. ಅದು ಕೇವಲ ಒಬ್ಬ ವ್ಯಕ್ತಿಯಾಗಿದ್ದರೆ ಅದು ಹೇಗೆ ಯಶಸ್ವಿಯಾಗುತ್ತದೆ? ಎಂದು ಪ್ರೀತಿ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಪುಷ್ಟ ಸಿನಿಮಾದ ದೃಶ್ಯ

ಇದನ್ನೂ ಓದಿ:ಸಿನಿಮಾ ಇಂಡಸ್ಟ್ರಿಗೆ ಕಮ್ ಬ್ಯಾಕ್ ಮಾಡುವ ಸುಳಿವು ನೀಡಿದ ಸ್ಯಾಂಡಲ್​​ವುಡ್ ಕ್ವೀನ್!

ಮದುವೆ ಬಗ್ಗೆ ಪ್ರತಿಕ್ರಿಯಿಸಿ.. 'ಮದುವೆ ಯಾವಾಗ? ಎಂದು ಬಹಳಷ್ಟು ಜನ ನನ್ನನ್ನು ಕೇಳುತ್ತಿದ್ದಾರೆ. ನಿಜ ಹೇಳಬೇಕೆಂದರೆ ನಾನು ಇನ್ನೂ ಮದುವೆಯಾಗುವ ಬಗ್ಗೆ ಯೋಚಿಸಿಲ್ಲ. ಏಕೆಂದರೆ, ನಾನು ಇನ್ನೂ ಚಿಕ್ಕವಳು. ಆದರೆ, ಒಂದು ಮಾತನ್ನು ಹೇಳಬಲ್ಲೆ, ನಾವು ಸಂತೋಷವಾಗಿ ಮತ್ತು ಸುರಕ್ಷಿತವಾಗಿರುವ ಸಂಗಾತಿಯನ್ನು ಆಯ್ಕೆ ಮಾಡಿದರೆ ಉತ್ತಮ ಎಂದಿದ್ದಾರೆ.

ಕನ್ನಡದಲ್ಲಿ ತೆರೆಕಂಡ ‘ಕಿರಿಕ್ ಪಾರ್ಟಿ’ ಮೂಲಕ ನಾಯಕಿಯಾದ ಮಂದಣ್ಣ, ರಕ್ಷಿತ್ ಶೆಟ್ಟಿ ಜೊತೆಗೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ, ಅನಿರೀಕ್ಷಿತ ಕಾರಣಗಳಿಂದ ಇಬ್ಬರ ನಡುವೆ ಬ್ರೇಕ್ ಅಪ್ ಆದ ಕಾರಣ ಸಂಬಂಧ ರದ್ದಾಗಿತ್ತು. ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಪ್ರೀತಿಸುತ್ತಿದ್ದಾರೆ ಎಂಬ ಮಾತು ಕೆಲ ದಿನಗಳಿಂದ ಕೇಳಿ ಬರುತ್ತಿದೆ.

Last Updated : Feb 17, 2022, 7:04 PM IST

For All Latest Updates

TAGGED:

ABOUT THE AUTHOR

...view details