ಹೈದರಾಬಾದ್ :ನ್ಯಾಪನಲ್ ಕ್ರಷ್ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಜೊತೆಗಿನ ಸಂಬಂಧದ ಬಗ್ಗೆ ಸಾಕಷ್ಟು ಪುಕಾರುಗಳಿವೆ. ಆ ಎಲ್ಲ ಗಾಸಿಪ್ ಗಳಿಗೆ ನಟಿ ರಶ್ಮಿಕಾ ಪ್ರತಿಕ್ರಿಯಿಸಿದ್ದಾರೆ.
ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ವಿಜಯ್ ಜೊತೆಗಿನ ಸಂಬಂಧದ ಬಗ್ಗೆ ರಶ್ಮಿಕಾ ಅವರಿಗೆ ಪ್ರಶ್ನಿಸಲಾಯಿತು. ಈ ವೇಳೆ ಯಾವುದೇ ಗುಟ್ಟು ಬಿಟ್ಟು ಕೊಡದೆ ರಶ್ಮಿಕಾ, ವಿಜಯ್ ತನ್ನ ಬೆಸ್ಟ್ ಫ್ರೆಂಡ್ ಎಂದು ಹೇಳಿದರು.
ಮೊದಲಿನಿಂದಲೂ ಅನೇಕ ವಿಷಯಗಳನ್ನು ನಾನು ಮತ್ತು ವಿಜಯ್ ಒಟ್ಟಿಗೆ ಚರ್ಚಿಸುತ್ತಿದ್ದೆವು. ತೆಲುಗಿನಲ್ಲಿ ವಿಜಯ್ ಜೊತೆ ಎರಡು ಸಿನಿಮಾಗಳನ್ನು ಮಾಡಿದ್ದೇನೆ. ಇದರಿಂದ ನಮಗೆ ಸಾಕಷ್ಟು ಸಮಯ ಕಳೆಯಲು ಅವಕಾಶ ದೊರೆಯಿತು. ಈ ಮೂಲಕ ನಮ್ಮಿಬ್ಬರ ನಡುವಿನ ಸಂಬಂಧ ಗಟ್ಟಿಯಾಯಿತು.