ಕರ್ನಾಟಕ

karnataka

ETV Bharat / sitara

'ಕಿರಿಕ್‌'ಗೂ ಇನ್ಮೇಲೆ ಕೋಟಿ ಲೆಕ್ಕದಲ್ಲಿ ಸಂಭಾವನೆ.. ಕನ್ನಡತಿ ರಶ್ಮಿಕಾ ಫುಲ್‌ ರೈಸಿಂಗ್‌ - undefined

ಸತತವಾಗಿ ತೆಲುಗು ಸಿನಿಮಾಗಳಲ್ಲಿ ಯಶಸ್ಸು ಕಾಣುತ್ತಿರುವ ಕನ್ನಡತಿ ರಶ್ಮಿಕಾ ಮಂದಣ್ಣ ಸಂಭಾವನೆ ಈಗ 80 ಲಕ್ಷಕ್ಕೆ ಏರಿಕೆ ಆಗಿದೆ. ಮುಂದಿನ ವರ್ಷ ಈ ಸಂಭಾವನೆ 1 ಕೋಟಿ ರೂಗೆ ಏರಿಕೆ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎನ್ನುತ್ತಿದೆ ಸಿನಿಮಾ ಇಂಡಸ್ಟ್ರಿ.

ರಶ್ಮಿಕಾ

By

Published : May 28, 2019, 10:49 AM IST

Updated : May 28, 2019, 11:59 AM IST

'ಕಿರಿಕ್ ಪಾರ್ಟಿ' ಸಿನಿಮಾದಿಂದ ಬೆಳಕಿಗೆ ಬಂದು ಜನಮಾನಸದಲ್ಲಿ ನೆಲೆ ಪಡೆದುಕೊಂಡ ಕರುನಾಡ ಚೆಲುವೆ ರಶ್ಮಿಕಾ ಮಂದಣ್ಣ ಇದೀಗ ಸಂಭಾವನೆ ವಿಷಯದಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದಾರೆ.

ಕನ್ನಡದ ಮೂರು ಸಿನಿಮಾಗಳಲ್ಲಿ ಹ್ಯಾಟ್ರಿಕ್ ಜಯ ಸಾಧಿಸಿರುವ ರಶ್ಮಿಕಾ (ಕಿರಿಕ್ ಪಾರ್ಟಿ, ಅಂಜನಿಪುತ್ರ ಹಾಗೂ ಚಮಕ್) ಡಿ ಬಾಸ್ ದರ್ಶನ್ ಜೊತೆ ನಟಿಸಿದ ‘ಯಜಮಾನ’ ಸಹ ಅವರಿಗೆ ಸಕ್ಸಸ್​ ತಂದುಕೊಟ್ಟಿದೆ. ಸದ್ಯಕ್ಕೆ ಕನ್ನಡದಲ್ಲಿ ‘ಪೊಗರು’ ಮಾತ್ರ ಬಿಡುಗಡೆ ಆಗಬೇಕಿರುವ ಸಿನಿಮಾ ಆಗಿದೆ.

ಕೃಪೆ: ಇನ್​ಸ್ಟಾಗ್ರಾಂ

ಸತತವಾಗಿ ತೆಲುಗು ಸಿನಿಮಾಗಳಲ್ಲಿ ಯಶಸ್ಸು ಕಾಣುತ್ತಿರುವ ರಶ್ಮಿಕಾ ಮಂದಣ್ಣ ಸಂಭಾವನೆ ಈಗ 80 ಲಕ್ಷಕ್ಕೆ ಏರಿದೆ. ಮುಂದಿನ ವರ್ಷ ಅದು 1 ಕೋಟಿ ರೂಪಾಯಿಗೆ ಆಗುವುದರಲ್ಲಿ ಯಾವುದೇ ಡೌಟೇ ಇಲ್ಲಾ ಅನುತ್ತೆ ಸಿನಿ ಇಂಡಸ್ಟ್ರಿ. ಹಾಗೇನಾದ್ರೂ ಆದ್ರೆ ಕನ್ನಡದಲ್ಲಿ ಇಷ್ಟು ಸಂಭಾವನೆ ಪಡೆಯೋ ಮೊದಲ ನಟಿ ರಶ್ಮಿಕಾ ಆಗ್ತಾರೆ. ಆದರೆ, ಇವರ ಸಂಭಾವನೆ ಹೆಚ್ಚಾಗಿರೋದು ಕನ್ನಡ ಸಿನಿಮಾಕ್ಕೆ ಅಲ್ಲ ಪರಭಾಷಾ ಸಿನಿಮಾಗಳಿಗೆ.

ಕೃಪೆ: ಇನ್​ಸ್ಟಾಗ್ರಾಂ

ರಶ್ಮಿಕಾ ಮಂದಣ್ಣ ಅವರ ಸಂಭಾವನೆ 20 ರಿಂದ 40 ಲಕ್ಷಕ್ಕೆ ಏರಿದ್ದು ತೆಲುಗು ಸಿನಿಮಾದಲ್ಲಿ. ಅಲ್ಲಿಂದ ಅದು 80 ಲಕ್ಷಕ್ಕೆ ಏರಿದ್ದು ಸುದ್ದಿಯಾಗಿತ್ತು. ಈಗ ರಶ್ಮಿಕಾ ಮಂದಣ್ಣ ಬಾಲಿವುಡ್ ಪ್ರವೇಶ ಸಹ ಮಾಡಲಿದ್ದಾರೆ. ವಿಜಯ ದೇವರಕೊಂಡ ನಂತರ, ಅರ್ಜುನ್, ಮಹೇಶ್ ಬಾಬು, ಕಾರ್ತಿ, ನಿತಿನ್ ಜೊತೆ ಅವರು ಅಭಿನಯಿಸಲು ಸಿದ್ದವಾಗಿದ್ದಾರೆ. ಇದಕ್ಕೆಲ್ಲಾ ‘ಗೀತಾ ಗೋವಿಂದಂ’ ಹಾಗೂ ‘ಡಿಯರ್ ಕಾಮ್ರೇಡ್’ ತಂಡದ ಯಶಸ್ಸೇ ಕಾರಣವಂತೆ.

ಕನ್ನಡದಲ್ಲಿ ಹೆಚ್ಚು ಸಂಭಾವನೆ ಪಡೀತಿದ್ದ ನಟಿ ಅಂದ್ರೆ ರಮ್ಯ ಮತ್ತು ರಾಧಿಕಾ ಪಂಡಿತ್. ಇವರನ್ನು ಮೀರಿಸಿ ಈಗ ರಶ್ಮಿಕಾ ಮಂದಣ್ಣ ಮುನ್ನುಗುತ್ತಿರುವುದು ವಿಶೇಷ.

Last Updated : May 28, 2019, 11:59 AM IST

For All Latest Updates

TAGGED:

ABOUT THE AUTHOR

...view details