ಬೆಂಗಳೂರು :ತಮ್ಮನ್ನು ಭೇಟಿಯಾಗಲು ತೆಲಂಗಾಣದಿಂದ ಸುಮಾರು 900 ಕಿ.ಮೀ. ದೂರದಲ್ಲಿರುವ ಕರ್ನಾಟಕದ ಕೊಡಗು ಜಿಲ್ಲೆಯ ತಮ್ಮ ನಿವಾಸಕ್ಕೆ ಬಂದ ಹುಚ್ಚು ಅಭಿಮಾನಿಯ ಬಗ್ಗೆ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.
''ನನ್ನನ್ನು ನೋಡಲು ನೀವು ಇಲ್ಲಿಗೆ ಹುಡುಕಿಕೊಂಡು ಬಂದ ವಿಚಾರ ನನ್ನ ಗಮನಕ್ಕೆ ಬಂತು. ದಯವಿಟ್ಟು ಈ ರೀತಿ ಯಾರೂ ಮಾಡಬೇಡಿ'' ಎಂದು ರಶ್ಮಿಕಾ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಅಲ್ಲದೇ ಇಷ್ಟು ದೂರ ಬಂದರೂ ಭೇಟಿಯಾಗಲು ಸಾಧ್ಯವಾಗದಿದ್ದಕ್ಕೆ ರಶ್ಮಿಕಾ ಬೇಸರ ಹೊರ ಹಾಕಿದ್ದಾರೆ. 'ಒಂದಲ್ಲಾ ಒಂದು ದಿನ ನಾನು ನಿಮ್ಮನ್ನು ಖಂಡಿತಾ ಭೇಟಿ ಮಾಡ್ತೇನೆ.. ನೀವು ಇರುವೆಡೆಯಿಂದಲೇ ನನಗೆ ನಿಮ್ಮ ಪ್ರೀತಿಯನ್ನು ತೋರಿಸಿ, ನಾನು ಖುಷಿ ಪಡುತ್ತೇನೆ' ಎಂದು ರಶ್ಮಿಕಾ ಟ್ವೀಟ್ ಮಾಡಿದ್ದಾರೆ.