ತೆಲಂಗಾಣ ರಾಜ್ಯಸಭಾ ಸದಸ್ಯ ಜೋಗಿನಿಪಲ್ಲಿ ಸಂತೋಷ್ ಕುಮಾರ್ ಆರಂಭಿಸಿದ ಗ್ರೀನ್ ಇಂಡಿಯಾ ಚಾಲೆಂಜನ್ನು ಇದುವರೆಗೂ ಸಾಕಷ್ಟು ಸೆಲಬ್ರಿಟಿಗಳು ಸ್ವೀಕರಿಸಿ ಗಿಡ ನೆಟ್ಟು ಚಾಲೆಂಜ್ ಪೂರ್ತಿಗೊಳಿಸಿದ್ದರು.
ಕೆಲವು ದಿನಗಳ ಹಿಂದಷ್ಟೇ ಪ್ರಭಾಸ್, ಅಕ್ಕಿನೇನಿ ಸಮಂತಾ ಈ ಚಾಲೆಂಜ್ ಪೂರ್ಣಗೊಳಿಸಿದ್ದರು. ಇದೀಗ ಕರುನಾಡ ಕ್ರಶ್ ರಶ್ಮಿಕಾ ಮಂದಣ್ಣ ಈ ಚಾಲೆಂಜ್ ಸ್ವೀಕರಿಸಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ತಮ್ಮ ಮನೆ ಗಾರ್ಡನ್ನಲ್ಲಿ ಗಿಡ ನೆಡುತ್ತಿರುವ ಫೋಟೋಗಳನ್ನು ರಶ್ಮಿಕಾ ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಹಂಚಿಕೊಂಡಿದ್ದಾರೆ.
ಗ್ರೀನ್ ಇಂಡಿಯಾ ಚಾಲೆಂಜ್ ಪೂರ್ತಿಗೊಳಿಸಿದ ರಶ್ಮಿಕಾ
ತಮಗೆ ಚಾಲೆಂಜ್ ನೀಡಿದ್ದ ಸಮಂತಾಗೆ ರಶ್ಮಿಕಾ ಧನ್ಯವಾದ ಹೇಳಿದ್ದಾರೆ. ಅಷ್ಟೇ ಅಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳನ್ನು ನೆಡುವಂತೆ ಅಭಿಮಾನಿಗಳಿಗೆ ರಶ್ಮಿಕಾ ಕರೆ ನೀಡಿದ್ದಾರೆ. ಜೊತೆಗೆ ತಮ್ಮ ಸಹನಟಿಯರಾದ ರಾಶಿ ಖನ್ನಾ, ಕಲ್ಯಾಣಿ ಪ್ರಿಯದರ್ಶನ್, ಕನ್ನಡ ನಟಿ ಆಶಿಕಾ ರಂಗನಾಥ್ಗೆ ಈ ಚಾಲೆಂಜ್ ಪಾಸ್ ಮಾಡಿದ್ದಾರೆ ರಶ್ಮಿಕಾ.
ರಶ್ಮಿಕಾಗೆ ಚಾಲೆಂಜ್ ನೀಡಿದ್ದ ಸಮಂತಾ ಅಕ್ಕಿನೇನಿ
ರಶ್ಮಿಕಾ ಕರಿಯರ್ ವಿಚಾರಕ್ಕೆ ಬರುವುದಾದರೆ ಈ ವರ್ಷದ ಆರಂಭದಲ್ಲಿ ತೆರೆ ಕಂಡ ಮಹೇಶ್ ಬಾಬು ಅವರೊಂದಿಗೆ ನಟಿಸಿದ 'ಸರಿಲೇರು ನೀಕೆವ್ವರು' ಸಿನಿಮಾ ಸಕ್ಸಸ್ ಕಂಡಿತ್ತು. ನಿತಿನ್ ಜೊತೆ 'ಭೀಷ್ಮ' ಚಿತ್ರದ ಶೂಟಿಂಗ್ ಮುಗಿಸಿರುವ ರಶ್ಮಿಕಾ ಅಲ್ಲು ಅರ್ಜುನ್ ಜೊತೆ 'ಪುಷ್ಪ' ಚಿತ್ರದಲ್ಲಿ ನಟಿಸಲಿದ್ದಾರೆ. ಕನ್ನಡದಲ್ಲಿ ರಶ್ಮಿಕಾ ಅಭಿನಯದ 'ಪೊಗರು' ತೆರೆ ಕಾಣಬೇಕಿದೆ. ತಮಿಳಿನಲ್ಲಿ 'ಸುಲ್ತಾನ್' ಚಿತ್ರದಲ್ಲಿ ಕೂಡಾ ಅವರು ನಟಿಸುತ್ತಿದ್ದಾರೆ.