ಕರ್ನಾಟಕ

karnataka

ಹಿಂದಿಗೆ 'ಗೀತಗೋವಿಂದಂ' ರಿಮೇಕ್: ನಾಯಕ-ನಾಯಕಿ ಯಾರು?

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ನಟನೆಯ ಟಾಲಿವುಡ್ ಹಿಟ್ ಚಿತ್ರ 'ಗೀತಗೋವಿಂದಂ' ಹಿಂದಿಗೆ ರಿಮೇಕ್ ಆಗಲಿದ್ದು ಈ ಸಿನಿಮಾ ಹಕ್ಕನ್ನು ಹಿಂದಿ ನಿರ್ದೇಶಕ ರೋಹಿತ್ ಶೆಟ್ಟಿ ಪಡೆದಿದ್ದಾರೆ ಎಂಬ ಮಾತು ಬಾಲಿವುಡ್​​​​ನಲ್ಲಿ ಕೇಳಿಬರುತ್ತಿದೆ.

By

Published : Oct 3, 2019, 4:15 PM IST

Published : Oct 3, 2019, 4:15 PM IST

ಗೀತಗೋವಿಂದಂ

ಟಾಲಿವುಡ್ ಹೀರೋ ವಿಜಯ್ ದೇವರಕೊಂಡ ನಟನೆಯ ಮತ್ತೊಂದು ತೆಲುಗು ಸಿನಿಮಾ ಬಾಲಿವುಡ್​​ಗೆ ರಿಮೇಕ್ ಆಗಲಿದೆ ಎನ್ನಲಾಗುತ್ತಿದೆ. ವಿಜಯ್ ದೇವರಕೊಂಡಗೆ ಹೆಸರು ತಂದುಕೊಟ್ಟ 'ಅರ್ಜುನ್ ರೆಡ್ಡಿ' ಸಿನಿಮಾ 'ಕಬೀರ್ ಸಿಂಗ್​' ಹೆಸರಿನಲ್ಲಿ ಹಿಂದಿಗೆ ರಿಮೇಕ್ ಆಗಿ ಹಿಟ್ ಸಾಲಿಗೆ ಸೇರಿತ್ತು.

ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ

ರಶ್ಮಿಕಾ ಮಂದಣ್ಣ ಜೊತೆ ವಿಜಯ್ ದೇವರಕೊಂಡ ನಟಿಸಿದ್ದ 'ಗೀತಗೋವಿಂದಂ' ಸಿನಿಮಾ ಕೂಡಾ ಬಾಲಿವುಡ್​​​​ಗೆ ರಿಮೇಕ್ ಆಗಲಿದೆ ಎನ್ನಲಾಗುತ್ತಿದೆ. ಈ ಸಿನಿಮಾ ಹಕ್ಕನ್ನು ಬಾಲಿವುಡ್​​ ಪ್ರಮುಖ ನಿರ್ದೇಶಕ ರೋಹಿತ್ ಶೆಟ್ಟಿ ಪಡೆದಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಆ್ಯಕ್ಷನ್​, ಸ್ಟಂಟ್ ಸಿನಿಮಾಗಳಿಗೆ ಹೆಸರಾದ ರೋಹಿತ್ ಶೆಟ್ಟಿ ಇದೀಗ ಈ ಪ್ರೇಮಕಥೆಯನ್ನು ಹಿಂದಿಯಲ್ಲಿ ತೆರೆಗೆ ತರಲು ಹೊರಟಿದ್ದು ರೋಹಿತ್ ಈ ಚಿತ್ರಕ್ಕೆ ನಿರ್ಮಾಪಕರಾಗಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ.

ವಿಜಯ್ ದೇವರಕೊಂಡ ನಟಿಸಿದ್ದ ಪಾತ್ರವನ್ನು ಹಿಂದಿಯಲ್ಲಿ ಇಷಾನ್ ಖತ್ತರ್ ಮಾಡುತ್ತಿದ್ದಾರೆ ಎಂದು ಬಾಲಿವುಡ್ ಮಂದಿ ಮಾತನಾಡುತ್ತಿದ್ದಾರೆ. ಆದರೆ ಇದರ ಬಗ್ಗೆ ರೋಹಿತ್ ಮಾತನಾಡಿಲ್ಲ. ಈ ಹಿಂದೆ ರೋಹಿತ್​ ಶೆಟ್ಟಿ ಟಾಲಿವುಡ್​​ನ 'ಟೆಂಪರ್​​​' ಸಿನಿಮಾವನ್ನು ಕೂಡಾ ಹಿಂದಿಗೆ ರಿಮೇಕ್ ಮಾಡಿದ್ದರು. ರಣವೀರ್​ ಸಿಂಗ್ ನಟಿಸಿದ್ದ ಸಿನಿಮಾ ಸಕ್ಸಸ್ ಆಗಿತ್ತು. ಒಂದು ವೇಳೆ 'ಗೀತಗೋವಿಂದಂ' ಕೂಡಾ ಹಿಂದಿಗೆ ರಿಮೇಕ್ ಆದರೆ ಯಾವ ರೀತಿ ಪ್ರತಿಕ್ರಿಯೆ ದೊರೆಯಲಿದೆ ಎನ್ನುವುದನ್ನು ಕಾದು ನೋಡಬೇಕು.

ರೋಹಿತ್ ಶೆಟ್ಟಿ

ABOUT THE AUTHOR

...view details