ಕರ್ನಾಟಕ

karnataka

ETV Bharat / sitara

ನಿಜ ಜೀವನದಲ್ಲೂ ಜೋಡಿಯಾಗಲಿದ್ದಾರಾ ಗೀತ-ಗೋವಿಂದಂ..?

ಕೋಟ್ಯಂತರ ಅಭಿಮಾನಿಗಳ ಹೃದಯ ಕದ್ದ ಸೌತ್ ಸುಂದರಿ, ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಕೆಲವು ವೈಯಕ್ತಿಕ ಕಾರಣಗಳಿಂದ ಮತ್ತೊಮ್ಮೆ ಸುದ್ದಿಯ ಮುನ್ನೆಲೆಗೆ ಬಂದಿದ್ದಾರೆ.

Rashmika Mandanna and Vijay Devarakonda will marry this year?
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ

By

Published : Feb 21, 2022, 5:46 PM IST

ಹೈದರಾಬಾದ್:ನ್ಯಾಷನಲ್​ ಕ್ರಷ್​ ರಶ್ಮಿಕಾ ಮಂದಣ್ಣ ಹೊಸ ಚಿತ್ರಗಳನ್ನು ಅನೌನ್ಸ್​ ಮಾಡುವುದರಿಂದ ಹಿಡಿದು ತನ್ನ ಸಂಭಾವನೆ ಹೆಚ್ಚಿಸಿಕೊಂಡಿರುವ ಸುದ್ದಿಯವರೆಗೆ ಇತ್ತೀಚೆಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಇದೀಗ ತಮ್ಮ ವೈಯಕ್ತಿಕ ಕಾರಣಗಳಿಂದ ಅವರು ಸುದ್ದಿಯಾಗಿದ್ದಾರೆ.

ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ

'ಪುಷ್ಪಾ' ಚಿತ್ರದ ಗೆಲುವಿನ ಅಲೆಯಲ್ಲಿ ತೇಲುತ್ತಿರುವ ರಶ್ಮಿಕಾ ಇತ್ತೀಚೆಗೆ ಮಾಧ್ಯಮದ ಮುಂದೆ ತಮ್ಮ ಕನಸಿನ ಕುವರ ಹೇಗೆ ಇದ್ದರೆ ಚೆಂದ ಎಂದು ಹೇಳಿ ಅಭಿಮಾನಿಗಳಿಗೆ ಶಾಕ್​ ನೀಡಿದ್ದರು. ಈ ಹೇಳಿಕೆಯ ಬೆನ್ನಲ್ಲೇ ಟಾಲಿವುಡ್​​ನಲ್ಲಿ ರಶ್ಮಿಕಾ ಮದುವೆ ವಿಚಾರ ಮುನ್ನೆಲೆಗೆ ಬಂದಿದೆ. ಇದೇ ವರ್ಷದ ಕೊನೆಯ ತಿಂಗಳಲ್ಲಿ ಅವರು ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ದಟ್ಟವಾಗಿದೆ.

ಜೊತೆ ಜೊತೆಯಾಗಿ ನಟಿಸಿದ್ದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಅಭಿಮಾನಿಗಳ ಪಾಲಿಗೆ ಸೂಪರ್​ ಜೋಡಿಗಾಗಿ ಕಂಡಿದ್ದರು. ಇದೇ ಜೋಡಿ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಗಾಳಿ ಸುದ್ದಿಯೊಂದು ಹರಿದಾಡುತ್ತಿದ್ದು, ಅದಕ್ಕೀಗ ರೆಕ್ಕೆಪುಕ್ಕ ಸಹ ಬಂದಿದೆ. ಆಗಾಗ್ಗೆ ವಿಜಯ್​ ಅವರೊಂದಿಗೆ ಓಡಾಡುತ್ತಿದ್ದ ರಶ್ಮಿಕಾ ಡೇಟಿಂಗ್​ ಮಾಡುತ್ತಿದ್ದಾರೆಂದು ಹೇಳಲಾಗಿತ್ತು.

ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ

ಈಗ ಇವರಿಬ್ಬರ ಮದುವೆ ಪ್ರಸ್ತಾಪ ಕೇಳಿ ಬರುತ್ತಿದ್ದು ಇದೇ ವರ್ಷ ಹಸೆಮಣೆ ಏರಲಿದ್ದಾರೆ ಎಂದೂ ಹೇಳಲಾಗುತ್ತಿದೆ. ತೆರೆ ಮೇಲೆ ಸಖತ್​ ಆಗಿ ಕಾಣಿಸಿಕೊಂಡಿದ್ದ ಜೋಡಿ ನಿಜ ಜೀವನದಲ್ಲೂ ಜೋಡಿಯಾಗಲಿದ್ದಾರೆ ಎಂಬ ಗಾಳಿ ಸುದ್ದಿ ಹಬ್ಬುತ್ತಿದ್ದಂತೆ ಅಭಿಮಾನಿಗಳು ತರಹೇವಾರಿ ಕಾಮೆಂಟ್​ ಮಾಡುತ್ತಿದ್ದಾರೆ.

ಆದರೆ, ಈ ಬಗ್ಗೆ ವಿಜಯ್ ದೇವರಕೊಂಡ ಆಗಲಿ ಅಥವಾ ರಶ್ಮಿಕಾ ಆಗಲಿ ತಾವು ಡೇಟಿಂಗ್ ಮಾಡುತ್ತಿರುವ​ ಮತ್ತು ಕೇಳಿ ಬರುತ್ತಿರುವ ಮದುವೆ ವಿಷ್ಯದ ಬಗ್ಗೆ ಎಲ್ಲಿಯೂ ಅಧಿಕೃವಾಗಿ ಹೇಳಿಕೊಂಡಿಲ್ಲ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ರಶ್ಮಿಕಾ ಪ್ರೀತಿ ಮತ್ತು ಮದುವೆ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು. ಯೋಗ್ಯ ವ್ಯಕ್ತಿಯನ್ನು ಮದುವೆಯಾದರೆ ಉತ್ತಮ ಎಂದು ಹೇಳಿ ಶಾಕ್​ ನೀಡಿದ್ದರು.

ಅಲ್ಲದೇ ಪ್ರೀತಿ ಒಬ್ಬರಿಂದ ಮಾತ್ರ ಮೂಡುವುದಲ್ಲ, ಎರಡೂ ಕಡೆಯಿಂದ ಬಂದಾಗ ಮಾತ್ರ ಪ್ರೀತಿ ಯಶಸ್ವಿಯಾಗುತ್ತದೆ. ಮದುವೆಯಾಗಲು ನಾನಿನ್ನೂ ಚಿಕ್ಕ ಹುಡುಗಿ, ಆ ಬಗ್ಗೆ ನಾನು ಯೋಚನೆ ಸಹ ಮಾಡಿಲ್ಲ ಎಂದು ಹೇಳುವ ಮೂಲಕ ಕನ್ನಡದ ಕಾವೇರಿ ರಶ್ಮಿಕಾ ಮಂದಣ್ಣ ಗುಟ್ಟನ್ನು ಗುಟ್ಟಾಗಿಯೇ ಇಡುವ ಪ್ರಯತ್ನ ಮಾಡಿದ್ದರು.

ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ

ರಕ್ಷಿತ್​ ಶೆಟ್ಟಿ ನಟನೆಯ ಕಿರಿಕ್​ ಪಾರ್ಟಿ ಮೂಲಕ ಸ್ಯಾಂಡಲ್​ವುಡ್​ನಲ್ಲಿ ನಾಯಕಿಯಾಗಿ ಮಿಂಚು ಹರಿಸಿದವರು ರಶ್ಮಿಕಾ. ಈ ಚಿತ್ರದ ಗೆಲುವಿನ ಬಳಿಕ ನಾಯಕನಾಗಿ ನಟಿಸಿದ್ದ ರಕ್ಷಿತ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಸಹ ಮಾಡಿಕೊಂಡಿದ್ದರು. ಕೆಲವು ಕಾರಣಗಳಿಂದ ಆ ಸಂಬಂಧ ಮುರಿದುಬಿತ್ತು.

ಇದನ್ನೂ ಓದಿ: ಮದುವೆಯಾಗಲು ನಾನಿನ್ನೂ ಚಿಕ್ಕ ಹುಡುಗಿ ಎಂದ ರಶ್ಮಿಕಾ

For All Latest Updates

ABOUT THE AUTHOR

...view details